For Quick Alerts
ALLOW NOTIFICATIONS  
For Daily Alerts

ರವೆ ಉತ್ತಪ್ಪಂ-ಬ್ರೇಕ್ ಫಾಸ್ಟ್ ರೆಸಿಪಿ

|

ಉತ್ತಪ್ಪಂ ರುಚಿಕರವಾದ ಬ್ರೇಕ್ ಫಾಸ್ಟ್ ಆಗಿದೆ. ಉತ್ತಪ್ಪಂವನ್ನು ಅಕ್ಕಿ ಬಳಸಿ ಮಾಡಬಹುದು, ರವೆಯಿಂದಲೂ ಮಾಡಬಹುದು. ಇದನ್ನು ಮಾಡುವ ವಿಧಾನ ಕೂಡ ಸರಳವಾಗಿದೆ.

ನೀವು ರವೆ ಉತ್ತಪ್ಪಂ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Rava Uttapam Recipe

ಬೇಕಾಗುವ ಸಾಮಾಗ್ರಿಗಳು
2 ಕಪ್ ರವೆ
1 ಕಪ್ ಮೊಸರು
ರುಚಿಗೆ ತಕ್ಕ ಉಪ್ಪು
3 ಈರುಳ್ಳಿ
2 ಟೊಮೆಟೊ
1 ಚಿಕ್ಕ ತುಂಡು ಶುಂಠಿ
2 ಹಸಿ ಮೆಣಸಿನಕಾಯಿ
ಎಣ್ಣೆ
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಮೊಸರಿಗೆ ರವೆ ಸೇರಿಸಿ ಮಿಕ್ಸ್ ಮಾಡಿ, ನಂತರ ಉಪ್ಪು ಮತ್ತು ಅರ್ಧ ಕಪ್ ನೀರಿ ಸೇರಿಸಿ ಕಲೆಸಿ ( ಹಿಟ್ಟು ಮಂದವಾಗಿರಬೇಕು).

* ನಂತರ ಆ ಪಾತ್ರೆಯ ಬಾಯಿ ಮುಚ್ಚಿ 2 ಗಂಟೆಗಳ ಕಾಲ ಇಡಬೇಕು.

* ಟೊಮೆಟೊ, ಈರುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ. ನಂತರ ಇವುಗಳನ್ನು ಹಿಟ್ಟಿಗೆ ಹಾಕಿ ಕಲೆಸಿ.

* ಈಗ ನಾನ್ ಸ್ಟಿಕ್ ತವಾವನ್ನು ಉರಿ ಮೇಲಿಡಿ. ತವಾ ಬಿಸಿಯಾದಾಗ ಅದನ್ನು ಎಣ್ಣೆಯಿಂದ ಸವರಿ. ಈಗ ಒಂದು ಸೌಟ್ ಹಿಟ್ಟು ಹಾಕಿ ರೌಂಡ್ ಮಾಡಿ. 2-3 ನಿಮಿಷ ಬೆಂದ ನಂತರ ಮಗುಚಿ ಹಾಕಿ. ಇಷ್ಟು ಮಾಡಿದರೆ ಬಿಸಿಬಿಸಿಯಾದ ಉತ್ತಪ್ಪಂ ರೆಡಿ.

ಸಲಹೆ: ಹಿಟ್ಟು ತವಾಕ್ಕೆ ಅಂಟಿ ಹಿಡಿಯದಿರಲು ಎಣ್ಣೆ ಜೊತೆ ಸ್ವಲ್ಪ ಉಪ್ಪು ಸೇರಿಸಿ, ತವಾವನ್ನು ಸವರಿದರೆ ಸಾಕು.
ಕಡಿಮೆ ಉರಿಯಲ್ಲಿ ಬೆಂದ ಉತ್ತಪ್ಪಂ ಹೆಚ್ಚು ರುಚಿಕರವಾಗಿರುತ್ತದೆ.

English summary

Rava Uttapam Recipe | Variety Of Breakfast Recipe | ರವೆ ಉತ್ತಪ್ಪಂ ರೆಸಿಪಿ | ಅನೇಕ ಬಗೆಯ ಬ್ರೇಕ್ ಫಾಸ್ಟ್ ರೆಸಿಪಿ

Uttapam is one of the tasty breakfast. Here's a delicious, simple uttapam recipe easy to make. Learn how to make rava uttapam.
X
Desktop Bottom Promotion