For Quick Alerts
ALLOW NOTIFICATIONS  
For Daily Alerts

ಪನೀರ್ ಅವಲಕ್ಕಿ ಒಗ್ಗರಣೆ

|

ಅವಲಕ್ಕಿ ಉಪ್ಪಿಟ್ಟು ನೀವು ರುಚಿ ನೋಡಿರುತ್ತೀರಿ ಅಲ್ವಾ? ಈವತ್ತು ಅದನ್ನೇ ಸ್ವಲ್ಪ ಬೇರೆ ರೀತಿಯಲ್ಲಿ ಮಾಡಿದರೆ ಹೇಗೆ? ಹೇಗೆ ಅಂದ್ರೆ ಅವಲಕ್ಕಿ ಉಪ್ಪಿಟ್ಟಿಗೆ ಪನ್ನೀರ್ ಸೇರಿಸೊದರಿಂದ ಇದಕ್ಕೆ ಹೊಸ ರುಚಿ ಬರುತ್ತೆ.

ಬೋಲ್ಡ್ ಸ್ಕೈ ಈವತ್ತು ಕೇವಲ 10-15 ನಿಮಿಷದಲ್ಲಿ ತಯಾರು ಮಾಡಬಹುದಾದ ಈ ಪನ್ನೀರ್ ಅವಲಕ್ಕಿ ಉಪ್ಪಿಟ್ಟನ್ನು ಮಾಡೋದು ಹೇಗೆ ಅಂತ ತಿಳಿಸಲಿದೆ. ಮತ್ತೇಕೆ ತಡ ಬನ್ನಿ.

Paneer Kanda Poha Recipe For Breakfast

ಬೇಕಾಗುವ ಸಾಮಗ್ರಿಗಳು

1. ಅವಲಕ್ಕಿ- 2 ಕಪ್
2. ಪನ್ನೀರ್- 1/2 ಕಪ್ (ಕತ್ತರಿಸಿಕೊಳ್ಳಿ)
3. ಈರುಳ್ಳಿ- 1 (ಕತ್ತರಿಸಿಕೊಳ್ಳಿ)
4. ಹಸಿಮೆಣಸಿನ ಕಾಯಿ- 2 (ಕತ್ತರಿಸಿಕೊಳ್ಳಿ)
5. ಗೋಡಂಬಿ- 12-15 (ತುಂಡು ಮಾಡಿಟ್ಟುಕೊಳ್ಳಿ)
6. ಎಣ್ಣೆ- 1 ಟೀಚಮಚ
7. ಜೀರಿಗೆ- 1/2 ಟೀಚಮಚ
8. ಕರಿಬೇವು ಎಲೆಗಳು- ಸ್ವಲ್ಪ
9. ಅರಿಶಿಣ ಪುಡಿ- 1/2 ಟೀಚಮಚ
10. ಉಪ್ಪು- ರುಚಿಗೆ ತಕ್ಕಷ್ಟು
11. ಮೆಣಸು- 1/4 ಟೀಚಮಚ (ಪುಡಿ ಮಾಡಿಕೊಳ್ಳಿ)
12. ನಿಂಬೆ ರಸ- 1/2 ಟೀಚಮಚ
13. ಸಕ್ಕರೆ- 1/2 ಟೀಚಮಚ
14. ಕೊತ್ತಂಬರಿ ಸೊಪ್ಪು- ಸ್ವಲ್ಪ

ಮಾಡುವ ವಿಧಾನ
1. ಅವಲಕ್ಕಿಯನ್ನು ನೆನೆಸಿ ಮೆತ್ತಗಾದ ನಂತರ ನೀರನ್ನು ಸೋಸಿಕೊಳ್ಳಿ.
2. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಜೀರಿಗೆಯನ್ನು ಹಾಕಿ
3. ನಂತರ ಈರುಳ್ಳಿ, ಹಸಿಮೆಣಸಿನ ಕಾಯಿ, ಕರಿಬೇವು ಎಲೆಗಳನ್ನು ಸೇರಿಸಿ ಈರುಳ್ಳಿ ಕೆಂಪಾಗುವವರೆಗೆ ಹುರಿಯಿರಿ.
4. ಇದಕ್ಕೆ ಗೋಡಂಬಿಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ.
5. ನಂತರ ಪನ್ನೀರನ್ನು ಸೇರಿಸಿ ಅದು ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಇವೆಲ್ಲವನ್ನು 2 ನಿಮಿಷಗಳವರೆಗೆ ಬೇಯಿಸಿ.
6. ನಂತರ ಅರಿಶಿಣ ಮತ್ತು ಉಪ್ಪನ್ನು ಸೇರಿಸಿ ಕಲಸಿ.
7. ಇದಕ್ಕೆ ನೆಂದ ಅವಲಕ್ಕಿಯನ್ನು ಸೇರಿಸಿ ಅದರೊಂದಿಗೆ ಪುಡಿಮಾಡಿಟ್ಟುಕೊಂಡ ಅವಲಕ್ಕಿ, ಸಕ್ಕರೆ, ನಿಂಬೆ ರಸವನ್ನು ಹಾಕಿ ಕಲಸಿ ಒಂದೆರಡು ನಿಮಿಷ ಬೇಯಿಸಿ.
8. ನಂತರ ಒಲೆ ಆರಿಸಿ ಕೊತ್ತಂಬರಿ ಸೊಪ್ಪನ್ನು ಅದಕ್ಕೆ ಹಾಕಿ ಕಲಸಿ.

ಪನೀರ್ ಅವಲಕ್ಕಿ ಉಪ್ಪಿಟ್ಟು ರೆಡಿ. ಕಾಫಿ ಜೊತೆ ಬಿಸಿ ಬಿಸಿ ಹೊಸ ರುಚಿಯನ್ನು ಸವಿಯಿರಿ.

English summary

Paneer Kanda Poha Recipe For Breakfast

This morning, wake up to prepare something light and easy for your family to enjoy. You must be bored of the same old poha recipe too, so this morning we give you something new that you can try out.
Story first published: Saturday, December 14, 2013, 10:28 [IST]
X
Desktop Bottom Promotion