For Quick Alerts
ALLOW NOTIFICATIONS  
For Daily Alerts

ಆರೋಗ್ಯಕ್ಕೆ ಒಳ್ಳೆಯದು ಓಟ್ಸ್ ಮಿಲ್ ದೋಸೆ

|

ನೀವೆಲ್ಲ ಓಟ್ಸ್ ಬಗ್ಗೆ ಕೇಳಿದ್ದೀರಿ ಅಲ್ಲವೆ? ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಹಲವಾರು ಕಾರಣಗಳಿಗಾಗಿ ಓಟ್ಸ್ ಅನ್ನು ತಮ್ಮ ದೈನಂದಿನ ಆಹಾರ ಕ್ರಮದ ಭಾಗವಾಗಿಸಿಕೊಂಡಿದ್ದಾರೆ. ತೂಕದ ಬಗ್ಗೆ ಕಾಳಜಿ ಇರುವವರು ಓಟ್ಸ್ ಅನ್ನೇ ತಮ್ಮ ನಿತ್ಯದ ಬೆಳಗಿನ ಉಪಹಾರವಾಗಿಸಿಕೊಂಡಿದ್ದಾರೆ. ಒಂದು ಕಪ್ ಓಟ್ಸ್ ನಿಮ್ಮ ದೇಹವನ್ನು ಆರೋಗ್ಯಕರವಾಗಿ ಇಡುತ್ತದೆ ಎಂದು ಹೇಳಲಾಗುತ್ತದೆ.

ಪರಿಣಿತರ ಪ್ರಕಾರ ಬೆಳಗಿನ ಉಪಹಾರಕ್ಕೆ ಓಟ್ಸ್ ಬಳಸುವುದು ಬಹಳ ಒಳ್ಳೆಯದು. ಬೋಲ್ಡ್ ಸ್ದೈ ಈ ಹಿಂದೆ ಓಟ್ಸ್ ಬಿಸಿಬೇಳೆಬಾತ್ ಮಾಡುವುದು ಹೇಗೆ ಎಂದು ನಿಮ್ಮೊಂದಿಗೆ ಹಂಚಿಕೊಂಡಿತ್ತು. ಇಂದು ಅದೇ ರೀತಿ ಓಟ್ಸ್ ಮಿಲ್ ದೋಸೆ ಮಾಡುವುದು ಹೇಗೆ ಎಂದು ಹೇಳಲಿದ್ದೇವೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಬಹಳ ಕಡಿಮೆ ಮತ್ತು ಸುಲಭವಾಗಿ ಮಾಡಬಹುದು.

Oatmeal Dosa Recipe For Healthy Morning

ಬೇಕಾಗುವ ಸಾಮಗ್ರಿಗಳು
1. ಓಟ್ಸ್- 1 ಕಪ್
2. ಅಕ್ಕಿ ಹಿಟ್ಟು- 1/4 ಕಪ್
3. ಸೋಜಿ- 1/4 ಕಪ್
4. ಮೊಸರು- 1/2 ಕಪ್
5. ಮೆಣಸು ಪುಡಿ- 1 ಟೀಚಮಚ
6. ಉಪ್ಪು ರುಚಿಗೆ ತಕ್ಕಷ್ಟು
7. ಎಣ್ಣೆ

ಮಾಡುವ ವಿಧಾನ

1. ಮೊದಲಿಗೆ ಓಟ್ಸ್, ಅಕ್ಕಿಹಿಟ್ಟು, ಸೋಜಿ, ಮೊಸರು, ಮೆಣಸು ಪುಡಿ ಮತ್ತು ಉಪ್ಪನ್ನು ಹಾಕಿ ಕಲಸಿಕೊಳ್ಳಿ. ದೋಸೆ ಹುಯ್ಯುವ ಹದಕ್ಕೆ ಬರುವ ಹಾಗೆ ನೀರನ್ನು ಹಾಕಿ ಕಲಸಿ 10-15 ನಿಮಿಷ ನೆನೆಸಿಡಿ.
2. ಹೆಂಚನ್ನು ಒಲೆಯ ಮೇಲಿಡಿ. ಕಾದ ನಂತರ ಹಿಟ್ಟನ್ನು ಬಳಸಿ ದೋಸೆ ಮಾಡಿ.
3. ಎಣ್ಣೆ ಹಾಕಿ ದೋಸೆಯನ್ನು ಎರಡೂ ಕಡೆ ಚೆನ್ನಾಗಿ ಬೇಯಿಸಿ.

ಓಟ್ಸ್ ಮೀಲ್ ದೋಸೆಯನ್ನು ನಿಮ್ಮಿಷ್ಟದ ಚಟ್ನಿಯೊಂದಿಗೆ ಸವಿಯಿರಿ. ರುಚಿಯು ಚೆನ್ನ ಆರೋಗ್ಯಕ್ಕೂ ಒಳ್ಳೆಯದು.

English summary

Oatmeal Dosa Recipe For Healthy Morning

This morning we would like for you to try out something healthy and tasty too. You may have heard of oats. There are a lot of people who turn to oats for numerous reasons.
Story first published: Wednesday, December 18, 2013, 17:00 [IST]
X
Desktop Bottom Promotion