For Quick Alerts
ALLOW NOTIFICATIONS  
For Daily Alerts

ತೆಳ್ಳಗೆ-ಬೆಳ್ಳಗಿನ ನೀರು ದೋಸೆ

|

ನೀರು ದೋಸೆ ಬರೀ ಅಕ್ಕಿಯಿಂದ ಮಾಡುವ ದೋಸೆಯಾಗಿದೆ. ಇದು ನೋಡಲು ತೆಳ್ಳಗೆ ಪೇಪರ್ ನಂತೆ ಇದ್ದು, ತಿನ್ನಲು ತುಂಬಾ ರುಚಿಯಾಗಿರುತ್ತದೆ. ಈ ದೋಸೆ ಮಾಡಲು ಉದ್ದಿನ ಬೇಳೆ, ಮೆಂತೆ ಯಾವುದೂ ಬಳಸುವುದಿಲ್ಲ, ಕೆಲವರು ಅಕ್ಕಿಯ ಜೊತೆಯ ತೆಂಗಿನ ಕಾಯಿ ಹಾಕಿ ರುಬ್ಬಿ ಈ ದೋಸೆ ತಯಾರಿಸುತ್ತಾರೆ. ಬರೀ ಅಕ್ಕಿ ರುಬ್ಬಿ ಮಾಡುವ ದೋಸೆಗಿಂತ ಸ್ವಲ್ಪ ತೆಂಗಿನ ಕಾಯಿ ಹಾಕಿ ಮಾಡುವ ದೋಸೆ ಹೆಚ್ಚು ರುಚಿಕರವಾಗಿರುತ್ತದೆ.

ದೋಸೆ ಹಿಟ್ಟನ್ನು ತುಂಬಾ ತೆಳ್ಳಗೆ ಮಾಡಿ ಈ ದೋಸೆಯನ್ನು ತಯಾರಿಸಲಾಗುವುದು. ಈ ದೋಸೆಯನ್ನು ತೆಂಗಿನ ಹಾಲು, ಜೇನು, ಚಟ್ನಿ, ಸಾರು, ನಾನ್ ವೆಜ್ ಸಾರುಗಳ ಜೊತೆ ತಿನ್ನಬಹುದು. ಈ ನೀರು ದೋಸೆ ಮಾಡುವ ರೆಸಿಪಿ ನೋಡಿ ಇಲ್ಲಿದೆ.

Neeru Dosa Recipe

ಬೇಕಾಗುವ ಸಾಮಾಗ್ರಿಗಳು
ಅಕ್ಕಿ 2 ಕಪ್( ನಾಲ್ಕು ಜನರಿಗೆ ಸಾಕಾಗುತ್ತದೆ)
ತೆಂಗಿನಕಾಯಿ(ಬೇಕಿದ್ದರೆ)
ರುಚಿಗೆ ತಕ್ಕ ಉಪ್ಪು

ಮಾಡುವ ಬಗೆ
* ರಾತ್ರಿ ಅಕ್ಕಿಯನ್ನು ನೆನೆ ಹಾಕಿಡಿ. ನಂತರ ಬೆಳಗ್ಗೆ ಅಕ್ಕಿಯನ್ನು ನುಣ್ಣಗೆ ರುಬ್ಬಿ (ತೆಂಗಿನಕಾಯಿ ಹಾಕುವುದಾದರೆ ಅಕ್ಕಿ ಜೊತೆ ಹಾಕಿ ರುಬ್ಬಿ).
* ನಂತರ ಅದನ್ನು ಪಾತ್ರೆಗೆ ಹಾಕಿ ಹಿಟ್ಟಿಗೆ ನೀರು ಹಾಗೂ ಉಪ್ಪು ಹಾಕಿ ಕಲೆಸಿ. ಈ ಹಿಟ್ಟು ನೀರು-ನೀರಾಗಿರಲಿ.
* ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿರಿ. ನಂತರ ತವಾವನ್ನು ಮತ್ತೊಂದು ಪಾತ್ರೆಯಿಂದ ಮುಚ್ಚಿ. ನಂತರ ದೋಸೆಯನ್ನು ಮಡಚಿ ತಟ್ಟೆಗೆ ಹಾಕಿ. ನೀರು ದೋಸೆ ಎರಡೇ ನಿಮಿಷದಲ್ಲಿ ರೆಡಿ.

ಇತರ ಟಿಪ್ಸ್
* ದೋಸೆ ತುಂಬಾ ಮೃದುವಾಗಿರಲು ನೀರು ಹಾಕುವಾಗ ಬಿಸಿ ನೀರನ್ನು ಹಾಕಿ.
* ಹಿಟ್ಟು ಅರೆಯುವಾಗ ನೀರಿನ ಬದಲು ತೆಂಗಿನಕಾಯಿಯ ನೀರನ್ನು ಹಾಕಿದರೆ ದೋಸೆ ಹೆಚ್ಚು ರುಚಿಕರವಾಗಿರುತ್ತದೆ.
* ಬೆಲ್ಲದ ನೀರು ಅಥವಾ ಕಬ್ಬಿನ ಹಾಲು ಬೆರೆಸಿದರೆ ಸಿಹಿ ನೀರು ದೋಸೆಯಾಗುತ್ತದೆ. ಸಿಹಿ ದೋಸೆ ಮಾಡುವುದಾದರೆ ಬಿಸಿ ನೀರು ಹಾಕಬೇಡಿ.

English summary

Neeru Dosa Recipe | Variety Of Dosa Recipe | ನೀರು ದೋಸೆ ರೆಸಿಪಿ | ಅನೇಕ ಬಗೆಯ ದೋಸೆಯ ರೆಸಿಪಿ

You want to prepare variety in dosa we will suggest you this unique dosa recipe which is tasty, low in calories than masala dosa and most importantly healthy.
X
Desktop Bottom Promotion