For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟಮಯ ಹಾಗೂ ಆರೋಗ್ಯಯುತವಾದ ರವಾ ರೊಟ್ಟಿ ರೆಸಿಪಿ

|

ಬೆಳಗಿನ ನಾವು ಸೇವಿಸುವ ಉಪಹಾರ ಯಾವತ್ತಿಗೂ ಆರೋಗ್ಯಕರವಾಗಿಬೇಕು ಎಂದು ಹೇಳುತ್ತಾರೆ. ಏಕೆಂದರೆ ಬೆಳಗಿನ ನಾವು ಸೇವಿಸುವ ಆಹಾರ ಶಕ್ತಿದಾಯಕವಾಗಿದ್ದರೆ ಮಾತ್ರವೇ ನಮ್ಮ ದಿನ ಚೆನ್ನಾಗಿರುತ್ತದೆ. ಅಲ್ಲದೆ ಬೆಳಗಿನ ಕೆಲಸಗಳನ್ನು ಚಕಚಕನೇ ಮುಗಿಸುವ ತಾಕತ್ತು ಸಾಮರ್ಥ್ಯ ನಮ್ಮದಾಗುತ್ತದೆ. ಹಾಗಿದ್ದರೆ ಬೆಳಗಿನ ನಮ್ಮ ಉಪಹಾರ ರುಚಿಕರ ಮತ್ತು ಆರೋಗ್ಯಕರವಾಗಿದ್ದರೆ ಎಷ್ಟು ಚೆನ್ನ ಅಲ್ಲವೇ?

ಇಂದಿನ ಲೇಖನದಲ್ಲಿ ನಿಮ್ಮ ನಾಲಗೆಯ ರುಚಿಯನ್ನು ಹೆಚ್ಚಿಸುವ ಆರೋಗ್ಯಯುತ ತಿಂಡಿಯೊಂದಿಗೆ ನಾವು ಬಂದಿರುವೆವು. ಸರಳವಾಗಿ ಬೆಳಗಿನ ಉಪಹಾರಕ್ಕಾಗಿ ತಯಾರಿಸುವ ಈ ರವಾ ರೊಟ್ಟಿ ನಿಮ್ಮ ದಿನದ ಸೊಗಸನ್ನು ಇನ್ನಷ್ಟು ಪ್ರಜ್ವಲಿಸುವಂತೆ ಮಾಡುವುದು ಖಂಡಿತ. ಕೊಬ್ಬರಿ ಮತ್ತು ಹಸಿಮೆಣಸು ಮೊದಲಾದ ರುಚಿಯನ್ನು ಹೆಚ್ಚಿಸುವ ಸಾಮಾಗ್ರಿಗಳು ಇದರಲ್ಲಿ ಇರುವುದರಿಂದ ಇದು ನಿಮ್ಮ ದಿನವನ್ನು ತಾಜಾಗೊಳಿಸುತ್ತದೆ.

Must Try: Healthy Rava Roti Recipe

ಹಾಗಿದ್ದರೆ ಹೆಚ್ಚು ರುಚಿಕರ ಮತ್ತು ಸ್ವಾದಿಷ್ಟವಾಗಿರುವ ಈ ರವಾ ರೊಟ್ಟಿಯನ್ನು ಹೇಗೆ ತಯಾರಿಸುವುದು ಎಂಬ ಸುಲಭ ವಿಧಾನವನ್ನು ಕೆಳಗಿನ ಹಂತಗಳಲ್ಲಿ ನಾವು ನೀಡಿದ್ದು ಇದು ನಿಮ್ಮಲ್ಲಿ ತಿಂಡಿಯ ಸ್ವಾದವನ್ನು ಹೆಚ್ಚಿಸುವುದು ಖಂಡಿತ. ಹಾಗಿದ್ದರೆ ಈ ಸರಳ ತಯಾರಿ ವಿಧಾನವನ್ನು ನಿಮ್ಮದಾಗಿಸಿಕೊಂಡು ರವಾ ರೊಟ್ಟಿಯನ್ನು ತಯಾರಿಸಿಕೊಳ್ಳಿ.

ಪ್ರಮಾಣ: 4
*ಸಿದ್ಧತಾ ಸಮಯ: 20 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 24 ನಿಮಿಷಗಳು
ಅಕ್ಕಿ ಹುಡಿಯಿಂದ ಮಾಡಿದ ರುಚಿ ರುಚಿಯಾದ ರೊಟ್ಟಿ ರೆಸಿಪಿ

ಸಾಮಾಗ್ರಿಗಳು
*ರವಾ - 1 ಕಪ್ (ಹುರಿದದ್ದು)
*ತೆಂಗಿನ ತುರಿ - 3 ಚಮಚ
*ಶುಂಠಿ - 1/4 ಚಮಚ (ತುರಿದದ್ದು)
*ಮೆಣಸು - 2-3
*ಸಕ್ಕರೆ - 1 ಚಮಚ
*ಎಣ್ಣೆ - 2 ಚಮಚ
*ನೀರು - ಬೇಕಾದಷ್ಟು

ಮಾಡುವ ವಿಧಾನ
1. ಮೊದಲಿಗೆ ನೀರನ್ನು ಬಳಸಿಕೊಂಡು ಮೇಲೆ ತಿಳಿಸಿರುವ ಎಲ್ಲಾ ಸಾಮಾಗ್ರಿಗಳನ್ನು ಕಲಸಿ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ.
2. ಪೂರ್ತಿ ತಯಾರಾದ ನಂತರ, ಹಿಟ್ಟನ್ನು 20 ನಿಮಿಷಗಳ ಕಾಲ ಹಾಗೆಯೇ ಇರಿಸಿ.
3. ಈ ಸಮಯದಲ್ಲಿ, ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ತೆಗೆದುಕೊಂಡು ವೃತ್ತಾಕಾರದ ರೊಟ್ಟಿಗಳನ್ನು ತಯಾರಿಸಿಕೊಳ್ಳಿ.
4. ತಯಾರಾಗುತ್ತಿದ್ದಂತೆ ತವಾವನ್ನು ಇರಿಸಿ ತವಾ ಕಾದ ಕೂಡಲೇ ರೊಟ್ಟಿಯನ್ನು ಬೇಯಿಸಿ.
5. ಸಣ್ಣ ಉರಿಯಲ್ಲಿ ರೊಟ್ಟಿಯ ಎರಡೂ ಬದಿಗಳನ್ನು ಕೆಂಪಗಾಗುವರೆಗೆ ಬೇಯಿಸಿಕೊಳ್ಳಿ.
6. ರೊಟ್ಟಿ ಬೆಂದ ನಂತರ ಅದನ್ನು ತಟ್ಟೆಗೆ ವರ್ಗಾಯಿಸಿಕೊಳ್ಳಿ.
ರುಚಿಯಾದ ರವಾ ರೊಟ್ಟಿ ಸವಿಯಲು ಸಿದ್ಧವಾಗಿದೆ. ಬಿಸಿ ಬಿಸಿ ರೊಟ್ಟಿಯನ್ನು ತೆಂಗಿನಕಾಯಿ ಚಟ್ನಿಯೊಂದಿಗೆ ಸವಿಯಲು ಮನೆಮಂದಿಗೆ ನೀಡಿ.

English summary

Must Try: Healthy Rava Roti Recipe

This morning, we have a surprise for you - rava roti! In South India, rava roti is a common breakfast meal which is generally loved by all. Kids of all ages indulge in this healthy breakfast treat for stamina through the day. To make this yummy and healthy rava roti recipe, here is a simple procedure for you to follow. Take a look:
X
Desktop Bottom Promotion