For Quick Alerts
ALLOW NOTIFICATIONS  
For Daily Alerts

ಯಮ್ಮಿ ಬ್ರೇಕ್‌ಫಾಸ್ಟ್ ಡಿಶ್ ಮಶ್ರೂಮ್ ಟೊಮೇಟೊ ಪರೋಟಾ

|

ಮಶ್ರೂಮ್ ಅನ್ನು ನೀವು ಎಂದಾದರೂ ಟೊಮೇಟೊದೊಂದಿಗೆ ಟ್ರೈ ಮಾಡಿದ್ದೀರಾ? ನೀವು ಮಾಡಿಲ್ಲವೆಂದರೆ ನಿಮಗಾಗಿ ಹೊಸ ರುಚಿಯನ್ನು ಈ ಲೇಖನದಲ್ಲಿ ನಾವು ನಿಡುತ್ತಿದ್ದೇವೆ. ಅದುವೇ ಮಶ್ರೂಮ್ ಟೊಮೇಟೊ ಪರೋಟಾ. ಪ್ರತಿಯೊಬ್ಬರೂ ಇಷ್ಟಪಡುವ ಡಿಶ್ ಇದಾಗಿದ್ದು ಯಮ್ಮಿ ಮತ್ತು ರುಚಿಕರವಾದ ತಿನಿಸಾಗಿದೆ.

ರಾಯಿತದೊಂದಿಗೆ ಈ ಯಮ್ಮಿ ಡಿಶ್ ಅನ್ನು ಸವಿಯುದೆಂದರೆ ವಾಹ್ ಅದರ ರುಚಿ ಬಣ್ಣಿಸಲು ಸಾಧ್ಯವಿಲ್ಲ. ಟೊಮೇಟೋ ಮಶ್ರೂ‌ಮ್‌ನೊಂದಿಗೆ ಬೆರೆತು ನಿಮ್ಮ ನಾಲಿಗೆಗೆ ಹಬ್ಬವನ್ನುಂಟು ಮಾಡುತ್ತದೆ. ಬನ್ನಿ ಮತ್ತೇಕೆ ತಡ, ಪಟ್ಟನೆ ಈ ರೆಸಿಪಿಯನ್ನು ನೋಟ್‌ಡೌನ್ ಮಾಡಿಕೊಳ್ಳಿ ಮತ್ತು ಬ್ರೇಕ್‌ಫಾಸ್ಟ್ ಅನ್ನು ರುಚಿಕರವನ್ನಾಗಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್!

Mushroom Tomato Paratha Recipe For Breakfast

ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು:
ಗೋಧಿ ಹುಡಿ - 2 ಕಪ್
ಮಶ್ರೂಮ್‌ಗಳು - 200 ಗ್ರಾಮ್ಸ್
ಟೊಮೇಟೊ - 2 (ಹೆಚ್ಚಿದ್ದು)
ಈರುಳ್ಳಿ - 1 (ಹೆಚ್ಚಿದ್ದು)
ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಸ್ಪೂನ್
ಮೆಣಸಿನ ಹುಡಿ - 1 ಸ್ಪೂನ್
ಗರಂ ಮಸಾಲಾ - ಸ್ವಲ್ಪ
ಎಣ್ಣೆ - 1 ಸ್ಪೂನ್
ನೀರು - 1 ಕಪ್ (ಹಿಟ್ಟು ತಯಾರಿಸಿಕೊಳ್ಳಲು)

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗ್ಗಿನ ರುಚಿಕರ ತಿನಿಸು ವ್ರೇಪ್

ಮಾಡುವ ವಿಧಾನ:

1. ಮೊದಲು ಹಿಟ್ಟನ್ನು ತಯಾರು ಮಾಡಿಕೊಳ್ಳಬೇಕು. ಹಿಟ್ಟು ಸಿದ್ಧಮಾಡಿಕೊಳ್ಳುವಾಗ ಸ್ವಲ್ಪ ಉಪ್ಪು ಸೇರಿಸಿ. ಹಿಟ್ಟು ಸಿದ್ಧಗೊಳ್ಳುತ್ತಿದ್ದಂತೆ ಅದನ್ನು ಪಕ್ಕದಲ್ಲಿರಿಸಿ.

2.ಈಗ, ಪ್ಯಾನ್‌ನಲ್ಲಿ ಎಣ್ಣೆ ಇಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ, ಹೆಚ್ಚಿದ ಈರುಳ್ಳಿ ಸೇರಿಸಿ ಹಾಗೂ ಚಿನ್ನದ ಬಣ್ಣ ಬರುವವರೆಗೆ ಹುರಿಯಿರಿ.

3.ಇದೀಗ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತು ಸ್ವಲ್ಪ ಮೆಣಸಿನ ಹುಡಿ ಹಾಕಿ. ಪೇಸ್ಟ್‌ನಂತೆ ಸಾಮಾಗ್ರಿಗಳನ್ನು ಹುರಿದುಕೊಳ್ಳಿ.

4.ಹೆಚ್ಚಿದ ಟೊಮೇಟೊವನ್ನು ಪ್ಯಾನ್‌ಗೆ ಹಾಕಿ ಮತ್ತು ಚೆನ್ನಾಗಿ ಮಿಶ್ರ ಮಾಡಿ.

5.ಟೊಮೇಟೊ ಬೇಯುತ್ತಿದ್ದಂತೆ ಸಣ್ಣ ಗುಳ್ಳೆಗಳು ಬರಲಾರಂಭಿಸುತ್ತವೆ ಆಗ ಮಶ್ರೂಮ್ ಸೇರಿಸಿ.

6.ಉಳಿದ ಸಾಮಾಗ್ರಿಗಳೊಂದಿಗೆ ಮಶ್ರೂಮ್ ಅನ್ನು ತಿರುಗಿಸುತ್ತಿರಿ. ಬೇಯುತ್ತಿದ್ದಂತೆ ಅವು ಗಾತ್ರದಲ್ಲಿ ಸಣ್ಣದಾಗುತ್ತವೆ.

7.ಉಪ್ಪು ಸೇರಿಸಿ ಮತ್ತು ಮಶ್ರೂಮ್‌ಗಳನ್ನು ಚೆನ್ನಾಗಿ ತಿರುಗಿಸಿ.

8.ಮಶ್ರೂಮ್ ಬೇಯುತ್ತಿರುವಾಗ, ಗರಂ ಮಸಾಲಾವನ್ನು ಅದರ ಮೇಲೆ ಚಿಮುಕಿಸಿ ಮತ್ತು ಕೊನೆಯ ಬಾರಿಗೆ ಮತ್ತೊಮ್ಮೆ ತಿರುಗಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈವತ್ತಿನ ಸ್ಪೆಷಲ್ ಕ್ಯಾರೆಟ್ ಪರೋಟ

*ಫಿಲ್ಲಿಂಗ್ ಮಾಡಲು

ಹಿಟ್ಟಿನಿಂದ ಸಣ್ಣ ಉಂಟೆಗಳನ್ನು ಮಾಡಿಕೊಳ್ಳಿ ಮತ್ತು ರೋಲರ್ ಬಳಸಿಕೊಂಡು ಅದನ್ನು ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ.

ಮಶ್ರೂಮ್ ತುಂಬಿಸಿ ಪುನಃ ಉಂಡೆ ಮಾಡಿಕೊಳ್ಳಿ ಹಾಗೂ ಪುನಃ ಚಪ್ಪಟೆಯಾಗಿ ಲಟ್ಟಿಸಿಕೊಳ್ಳಿ. ಪರೋಟಾದ ಆಕಾರದಲ್ಲಿ ಫಿಲ್ಲಿಂಗ್ ಅನ್ನು ಲಟ್ಟಿಸಿಕೊಳ್ಳಿ.

ಪೂರ್ತಿ ಆದಾಗ, ಮಧ್ಯಮ ಉರಿಯಲ್ಲಿ ಪ್ಯಾನ್‌ನಲ್ಲಿ ಪರೋಟಾವನ್ನು ಬೇಯಿಸಿ. ಪರೋಟಾದ ಎರಡೂ ಬದಿ ಎಣ್ಣೆ ಸವರಿ.

ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದ್ದಂತೆ ನಿಮ್ಮ ಮಶ್ರೂಮ್ ಪರೋಟಾ ಸಿದ್ಧವಾಗಿದೆ ಎಂದರ್ಥ. ನಿಮ್ಮ ರುಚಿಕರವಾದ ಮಶ್ರೂಮ್ ಪರೋಟಾ ಸವಿಯಲು ಸಿದ್ಧವಾಗಿದೆ. ರಾಯಿತದೊಂದಿಗೆ ಬಿಸಿಯಾಗಿ ಸವಿಯಲು ನೀಡಿ.

English summary

Mushroom Tomato Paratha Recipe For Breakfast

Have you tried making mushroom parathas with tomatoes? If you haven't, then you can make use of this recipe of mushroom tomato paratha. It is yummy and tangy and loved most by the elderly folk in the house.This soft mushroom tomato parathas is all the more delicious when eaten with raitha.
Story first published: Tuesday, March 11, 2014, 13:45 [IST]
X
Desktop Bottom Promotion