For Quick Alerts
ALLOW NOTIFICATIONS  
For Daily Alerts

ಮಶ್ರೂಮ್ ಆಮ್ಲೇಟ್ ರೆಸಿಪಿ

|

ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ಒಂದು ಮೊಟ್ಟೆ ಅಥವಾ ಮೊಟ್ಟೆ ಆಮ್ಲೇಟ್ ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಿನಾ ಒಂದೇ ರುಚಿಯಲ್ಲಿ ಆಮ್ಲೇಟ್ ಮಾಡಿ ತಿನ್ನುವುದಕ್ಕಿಂತ ಅದನ್ನು ಆರೋಗ್ಯಕರವಾಗಿ ಅನೇಕ ರುಚಿಯಲ್ಲಿ ತಯಾರಿಸಬಹುದು.

ಇಲ್ಲಿ ನಾವು ಅಣಬೆ ಹಾಕಿ ಮಾಡುವ ಆಮ್ಲೇಟ್ ರೆಸಿಪಿ ನೀಡಿದ್ದೇವೆ ನೋಡಿ:

Mushroom Omelet Recipe

ಬೇಕಾಗುವ ಸಾಮಾಗ್ರಿಗಳು
ಎಣ್ಣೆ 3 ಚಮಚ
ಹಸಿ ಮೆಣಸಿನಕಾಯಿ 1
ಶುಂಠಿ 1 ಚಮಚ(ಚಿಕ್ಕದಾಗಿ ಕತ್ತರಿಸಿದ್ದು)
ಅಣಬೆ 6-7
ಈರುಳ್ಳಿ 1- 2
ಮೊಟ್ಟೆ 6
ರುಚಿಗೆ ತಕ್ಕ ಉಪ್ಪು
ಹಸಿ ಮೆಣಸು 2 -3

ತಯಾರಿಸುವ ವಿಧಾನ:

* ಒಂದು ಬಟ್ಟಲಿಗೆ ಮೊಟ್ಟೆ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಹಾಕಿ ರುಚಿಗೆ ತಕ್ಕ ಉಪ್ಪು ಸೇರಿಸಿ ಚೆನ್ನಾಗಿ ಕದಡಿ.

* ಈಗ ತವಾವನ್ನು ಬಿಸಿ ಮಾಡಿ ಅದರಲ್ಲಿ ಎಳ್ಳೆ ಎಣ್ಣೆ ಹಾಕಿ ಚಿಕ್ಕದಾಗಿ ಕತ್ತರಿಸಿದ ಅಣಬೆ ಹಾಕಿ, ಅಣಬೆ ಬೇಯುವವರೆಗೆ ಫ್ರೈ ಮಾಡಿ, ಆ ಅಣಬೆಯನ್ನು ಕದಡಿದ ಮೊಟ್ಟೆಯಲ್ಲಿ ಹಾಕಿ ಮತ್ತೊಮ್ಮೆ ಚೆನ್ನಾಗಿ ಕದಡಿ.

* ನಂತರ ತವಾಕ್ಕೆ ಎಣ್ಣೆ ಹಾಕಿ ಈ ಮೊಟ್ಟೆಯ ಮಿಶ್ರಣವನ್ನು ಹಾಕಿ ತವಾವನ್ನು ಪಾತ್ರೆಯಿಂದ ಮುಚ್ಚಿ, ಸಾಧಾರಣ ಉರಿಯಲ್ಲಿ 5 ನಿಮಿಷ ಬೇಯಿಸಿ, ನಂತರ ಅದನ್ನೊಮ್ಮೆ ಮಗುಚಿ ಹಾಕಿ. ಈ ರೀತಿ ಮಾಡಿದರೆ ಮಶ್ರೂಮ್ ಆಮ್ಲೇಟ್ ರೆಡಿ.

6 ಮೊಟ್ಟೆಯಿಂದ 3 ಆಮ್ಲೇಟ್ ಮಾಡಬಹುದು.

English summary

Mushroom Omlette Recipe

Mushroom omlette is one of the tastiest meals you can have for morning. With the mushroom omelette you can start your day energetically.
X
Desktop Bottom Promotion