For Quick Alerts
ALLOW NOTIFICATIONS  
For Daily Alerts

ಸರಳ ತಯಾರಿಕೆಯ ಹರಿಕಾರ ಸಬ್ಬಕ್ಕಿ ದೋಸೆ

|

ಬೆಳಗಿನ ತಿಂಡಿ ಯಾವಾಗಲೂ ಹಗುರವಾಗಿರಬೇಕು ಮತ್ತು ಅದು ನಮಗೆ ದಿನವಿಡೀ ಉತ್ಸಾಹವನ್ನು ನೀಡಬೇಕು ಎಂಬುದು ಪರಿಣಿತರ ಸಲಹೆಯಾಗಿದೆ. ಬೆಳಗಿನ ತಿಂಡಿ ಸರಳವಾಗಿದ್ದಷ್ಟು ನಮ್ಮಲ್ಲಿ ಸೇರುವ ಕೊಬ್ಬಿನ ಪ್ರಮಾಣ ಕಡಿಮೆಯಾಗಿರುತ್ತದೆ ಮತ್ತು ಆರೋಗ್ಯವಂತ ಕಾಯವನ್ನು ನಾವು ಪಡೆಯುತ್ತೇವೆ.

ನಾವೆಲ್ಲರೂ ರುಚಿಕರವಾದ ಆಹಾರ ಪದಾರ್ಥಗಳನ್ನು ಬಯಸುವುದು ಸಹಜ. ಆದರೆ ಈ ಆಹಾರ ಪದಾರ್ಥಗಳು ಆರೋಗ್ಯಕರವಾಗಿದ್ದಷ್ಟೂ ನಾವು ರೋಗ ರುಜಿನಗಳಿಂದ ದೂರ ಇರುತ್ತೇವೆ. ನಾಲಿಗೆಯ ರುಚಿ ತಣಿಸಲು ವಿಪರೀತವಾಗಿ ಕರಿದ ತಿಂಡಿಗಳು, ಪ್ರೋಟೀನ್ ರಹಿತ ಆಹಾರಗಳನ್ನು ಸೇವಿಸಿದರೆ ನಮ್ಮ ದೇಹವನ್ನು ನಾವೇ ದಂಡಿಸಿದಂತೆ. ಹಾಗಿದ್ದರೆ ಆರೋಗ್ಯಕರವಾಗಿರುವುದನ್ನು ನಮ್ಮ ದೇಹಕ್ಕೆ ನೀಡುವುದು ಹೇಗೆ?

ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಜೊತೆಗೆ ರುಚಿಕರವಾಗಿರುವ ಆಹಾರಗಳನ್ನು ತಯಾರಿಸುವುದು ಕಷ್ಟದ ಮಾತಲ್ಲ. ಆದರೆ ಇದನ್ನು ತಯಾರಿಸಲು ನೀವು ಕೊಂಚ ಆಲೋಚನೆ ಮಾಡಬೇಕಾಗುತ್ತದೆ ಮತ್ತು ಅದನ್ನು ತಯಾರಿಸಲು ಕೊಂಚ ಸಮಯವನ್ನು ವ್ಯಯಿಸಬೇಕಾಗುತ್ತದೆ. ಕೊನೆಗೆ ನಿಮಗೆ ಇದರಿಂದ ದೊರಕುವ ಫಲಿತಾಂಶ ಮಾತ್ರ ಮಾನಸಿಕ ಮತ್ತು ದೈಹಿಕ ಆರೋಗ್ಯ ಎಂಬುದನ್ನು ಮರೆಯದಿರಿ.

Mouthwatering Sabudana Dosa Recipe

ಇಂದಿನ ಲೇಖನದಲ್ಲಿ ಸಾಬುದಾನ ಅಥವಾ ಸಬ್ಬಕ್ಕಿಯಿಂದ ತಯಾರಿಸಲಾದ ರುಚಿಕರ ದೋಸೆ ಖಾದ್ಯದ ರೆಸಿಪಿ ವಿಧಾನವನ್ನು ನಾವು ನಿಮಗೆ ತಿಳಿಸಲಿದ್ದೇವೆ. ಸ್ನಾಯುಗಳ ಬೆಳವಣಿಗೆ, ರಕ್ತದೊತ್ತಡ ನಿಯಂತ್ರಣೆ, ತೂಕ ಇಳಿಸುವಲ್ಲಿ ಸಬ್ಬಕ್ಕಿ ಅತ್ಯುತ್ತಮ ಎಂದೆನಿಸಿದೆ. ನಿಮ್ಮ ಜೀರ್ಣಕ್ರಿಯೆಯನ್ನು ವೃದ್ಧಿಸಿ ನಿಮಗೆ ಅತ್ಯುತ್ತಮ ಆರೋಗ್ಯವನ್ನು ಒದಗಿಸುವಲ್ಲಿ ಸಾಬಕ್ಕಿ ಕಾರಣವಾಗಿದೆ. ಬನ್ನಿ ಇಂದಿನ ಲೇಖನದಲ್ಲಿ ಈ ದೋಸೆ ತಯಾರಿ ಹೇಗೆ ಎಂಬುದನ್ನು ಅರಿತುಕೊಳ್ಳೋಣ.

*ಸಿದ್ಧತಾ ಸಮಯ: 1/2 ಗಂಟೆ
*ಅಡುಗೆಗೆ ಬೇಕಾದ ಸಮಯ: 1 ಗಂಟೆ

ಸಾಮಾಗ್ರಿಗಳು
*ಸಬ್ಬಕ್ಕಿ-1/2 ಕಪ್
*ಅಕ್ಕಿ ಹುಡಿ -1/2 ಕಪ್
*ಮೊಸರು- 1/3 ಭಾಗ
*ಹಸಿಮೆಣಸು- 2-3
*ಕೊತ್ತಂಬರಿ ಸೊಪ್ಪು - 2 ಎಸಳು
*ತುರಿದ ಕ್ಯಾರೆಟ್ - 1
*ಈರುಳ್ಳಿ - 2
*ತೆಂಗಿನ ತುರಿ - 1/2 ಕಪ್
*ಉಪ್ಪು-ರುಚಿಗೆ ತಕ್ಕಷ್ಟು
*ಎಣ್ಣೆ/ತುಪ್ಪ

ಮಾಡುವ ವಿಧಾನ
1. ಮೊದಲಿಗೆ ಸಬ್ಬಕ್ಕಿಯನ್ನು 3-4 ಗಂಟೆಗಳ ಕಾಲ ನೆನೆಸಿ.
2. ನಂತರ ಅದನ್ನು ಚೆನ್ನಾಗಿ ತೊಳೆದುಕೊಳ್ಳಿ. ಇನ್ನು ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಕ್ಯಾರೆಟ್ ಕರಿಬೇವಿನೆಸಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
3. ನಂತರ ನೆನಸಿಟ್ಟ ಸಬ್ಬಕ್ಕಿಗೆ ಮೊಸರು, ಅಕ್ಕಿಹುಡಿ ತೆಂಗಿನ ತುರಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಅಗತ್ಯವಿದ್ದಷ್ಟು ನೀರನ್ನು ಮಿಶ್ರ ಮಾಡಿಕೊಳ್ಳಿ
4. ದೋಸೆ ಹಿಟ್ಟು ಹಾಲಿನಷ್ಟು ಗಟ್ಟಿಯಾಗಿರಲಿ. ನಂತರ ಹೆಚ್ಚಿಟ್ಟ ತರಕಾರಿಗಳನ್ನು ದೋಸೆ ಮಿಶ್ರಣಕ್ಕೆ ಸೇರಿಸಿ. ತವಾ ಬಿಸಿಯಾಗುತ್ತಿದ್ದಂತೆ ಸ್ವಲ್ಪ ಎಣ್ಣೆ ಸವರಿ ದೋಸೆ ಹಿಟ್ಟನ್ನು ಹರಡಿಸಿ ಹುಯ್ಯಿರಿ.
5. ದೋಸೆಯನ್ನು 3-4 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ಎರಡು ಬದಿಗೆ ಎಣ್ಣೆ ಸವರಬೇಕು.
6. ಚಟ್ನಿ ಅಥವಾ ಸಾಂಬಾರ್ ನೊಂದಿಗೆ ಬಿಸಿ ಬಿಸಿ ದೋಸೆಯನ್ನು ಸವಿಯಲು ನೀಡಿ.

English summary

Mouthwatering Sabudana Dosa Recipe

Sabudana dosa, also known as saggubiyyam dosa, sabakki dosa or sago dosa, is a delicious food. A positive note about this food is that grinding is not required to prepare the batter. What's more, in the sabudana dosa recipe, the main ingredient to make this dish is sabudana, which is said to give health benefits.
X
Desktop Bottom Promotion