For Quick Alerts
ALLOW NOTIFICATIONS  
For Daily Alerts

ಪೋಷಕಾಂಶಗಳ ವೃದ್ಧಿಗಾಗಿ ಸ್ವಾದಮಯ ಪಾಲಾಕ್ ಪೂರಿ

|

ಸ್ವಾದಿಷ್ಟ ಮತ್ತು ಆರೋಗ್ಯಕರ ಆಹಾರಗಳನ್ನು ಸೇವಿಸುವುದು ಆರೋಗ್ಯ ಭಾಗ್ಯವೆಂಬ ಮಹಾನ್ ತಿಜೋರಿಯ ಕೀಲಿ ಕೈಯಾಗಿದೆ. ಹೊರಗಿನ ಫಾಸ್ಟ್ ಫುಡ್‌ಗಳಿಗಿಂತ ಮನೆಯಲ್ಲೇ ತಯಾರಿಸುವ ತಿಂಡಿಗಳು ನಿಮ್ಮಲ್ಲಿ ರೋಗಗಳನ್ನು ಕಡಿಮೆ ಮಾಡಿ ಆರೋಗ್ಯಕರವಾದ ಜೀವನ ಶೈಲಿಗೆ ಬುನಾದಿಯನ್ನು ನೀಡುತ್ತದೆ.

ನಮ್ಮ ಆಹಾರದಲ್ಲಿ ಹೆಚ್ಚಿನ ಸೊಪ್ಪು ಮತ್ತು ತರಕಾರಿಗಳ ಬಳಕೆಯು ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಮತ್ತು ನಿಮ್ಮಲ್ಲಿ ಉತ್ಸಾಹವನ್ನು ತುಂಬಲು ಕಾರಣವಾಗುತ್ತದೆ. ವಿಟಮಿನ್ ಅಂಶಗಳು, ಹೇರಳವಾಗಿರುವ ಪ್ರೋಟೀನ್, ಕಾರ್ಬೋಹೈಡ್ರೇಡ್ ಅನ್ನು ಒದಗಿಸುವ ಸೊಪ್ಪುಗಳು ದೃಷ್ಟಿಯನ್ನು ತೀಕ್ಷ್ಣಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇಂದಿನ ಲೇಖನದಲ್ಲಿ ಕೂಡ ಸೊಪ್ಪನ್ನು ಬಳಸಿ ಸಿದ್ಧಪಡಿಸಿದ ಉಪಹಾರದೊಂದಿಗೆ ನಾವು ಬಂದಿರುವೆವು. ಪಾಲಾಕ್ ಸೊಪ್ಪನ್ನು ಬಳಸಿ ತಯಾರಿಸಿದ ಪೂರಿ ಇಂದಿನ ನಮ್ಮ ಲೇಖನದ ಪ್ರಮುಖ ವಿಶೇಷತೆಯಾಗಿದೆ. ದೇಹದಲ್ಲಿ ಪ್ರೋಟೀನ್ ನ್ಯೂಟ್ರೀನ್ ಅಂಶಗಳನ್ನು ಹೆಚ್ಚಿಸುವ ಪಾಲಾಕ್ ರುಚಿಯಲ್ಲಿ ಕೂಡ ವಿಶಿಷ್ಟತೆಯನ್ನು ಹೊಂದಿದೆ. ಹಾಗಿದ್ದರೆ ತಡ ಮಾಡದೇ ಕೆಳಗೆ ನಾವು ನೀಡಿರುವ ಪಾಲಾಕ್ ಪೂರಿ ಖಾದ್ಯ ತಯಾರಿ ವಿಧಾನವನ್ನು ಮನದಟ್ಟುಕೊಂಡು ಮಾಡಿಕೊಂಡು ಈ ಸರಳ ರೆಸಿಪಿಯನ್ನು ತಯಾರಿಸಿಕೊಳ್ಳಿ.

Mouthwatering Palak puri recipe

ರೋಸ್ಟ್ ಮಾಡಿದ ಆಲೂಗಡ್ಡೆಯ ರುಚಿ ನೋಡಿದ್ದೀರಾ?

ಪ್ರಮಾಣ: 3 ಜನರಿಗೆ
ಸಿದ್ಧತೆಗೆ ಬೇಕಾದ ಸಮಯ: 1/2 ಗಂಟೆ
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಗೋಧಿ ಹಿಟ್ಟು - 250 ಗ್ರಾಮ್
*ಹಸಿಮೆಣಸಿನ ಕಾಯಿ - 5 (ಕತ್ತರಿಸಿದ್ದು)
*ಪಾಲಾಕ್ ಸೊಪ್ಪು - 3 ಕಟ್ಟು
*ಜೀರಿಗೆ - 1/2 ಚಮಚ
*ಕೊತ್ತಂಬರಿ ಸೊಪ್ಪು - ಸ್ವಲ್ಪ (ಕತ್ತರಿಸಿದ್ದು)
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ ಕರಿಯಲು

ಮಾಡುವ ವಿಧಾನ
1. ಮೊದಲಿಗೆ ಸೊಪ್ಪಿಗೆ ಉಪ್ಪು ಬೆರೆಸಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.
2. ನಂತರ ಬಾಣಲೆಯಲ್ಲಿ ನೀರು ಹಾಕಿ ಅದನ್ನು ಕುದಿಸಿ ಪಾಲಾಕ್ ಸೊಪ್ಪನ್ನು ಅದರಲ್ಲಿ ಬೇಯಿಸಿಕೊಳ್ಳಿ.
3. ಸೊಪ್ಪು ಆರಿದ ನಂತರ ಇದಕ್ಕೆ ಜೀರಿಗೆ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
4. ಗೋಧಿ ಹಿಟ್ಟಿಗೆ ಈ ಪಾಲಾಕ್ ಮಿಶ್ರಣವನ್ನು ಸೇರಿಸಿ ಪೂರಿ ಹಿಟ್ಟನ್ನು ನಾದಿಕೊಳ್ಳಿ.
5. ಹಿಟ್ಟಿನಿಂದ ಪೂರಿಯನ್ನು ಸಿದ್ಧಪಡಿಸಿಕೊಳ್ಳಿ ಮತ್ತು ಎಣ್ಣೆಯಲ್ಲಿ ಕರಿಯಿರಿ.

ಪಾಲಾಕ್ ಪೂರಿ ಸವಿಯಲು ರೆಡಿಯಾಗಿದೆ. ಪಾಲಾಕ್ ಪೂರಿಯನ್ನು ಕಾಯಿ ಚಟ್ನಿ ಅಥವಾ ಸಾಗು ಜೊತೆ ಸವಿಯಲು ನೀಡಿ.

English summary

Mouthwatering Palak puri recipe

Palak puri is made by mixing wheat flour with pureed spinach and other spices. It is best enjoyed hot with mango chutney and chili pickle. Spinach puri served with potato curry makes a good lunchbox recipe. Learn how to make palak poori by following this easy recipe.
X
Desktop Bottom Promotion