For Quick Alerts
ALLOW NOTIFICATIONS  
For Daily Alerts

ಬೆಳಗಿನ ಸ್ವಾದಮಯ ಉಪಹಾರಕ್ಕಾಗಿ ಅಡೆ ದೋಸೆ ರೆಸಿಪಿ

|

ಇಂದಿನ ಧಾವಂತ ಜೀವನದಲ್ಲಿ ಬೆಳಗಿನ ತಿಂಡಿಯನ್ನು ಸಿದ್ಧಪಡಿಸುವುದು ತುಸು ಪ್ರಯಾಸದ ಕೆಲಸವೇ ಸರಿ. ಅದರಲ್ಲೂ ಮನೆಯ ಗೃಹಿಣಿ ಹೊರಗೆ ಕಾರ್ಯನಿರ್ವಹಿಸುವವರಾಗಿದ್ದರೆ ನಿಜಕ್ಕೂ ಕಷ್ಟಕರ ಕೆಲಸವಾಗಿರುತ್ತದೆ. ಮನೆಯವರಿಗೆ ತಿಂಡಿ ಸಿದ್ಧ ಮಾಡಿ ತಮಗೂ ಮಾಡಿ ತೆಗೆದುಕೊಂಡು ಹೋಗುವ ಅವಸರ ಉಂಟಾಗುವುದು ಸಹಜವೇ. ಆದ್ದರಿಂದ ಈ ಗೃಹಿಣಿಯರಿಗೆ ಬೆಳಗಿನ ತಿಂಡಿ ಎಂದರೆ ದೊಡ್ಡ ತಲೆನೋವು ಆಗಿರುತ್ತದೆ.

ಆದ್ದರಿಂದಲೇ ಈ ತಲೆನೋವನ್ನು ಹೋಗಲಾಡಿಸುವ ಒಂದು ಸರಳ ಖಾದ್ಯದೊಂದಿಗೆ ನಾವು ಇಂದು ಬಂದಿರುವೆವು. ಈ ದೋಸೆ ಖಾದ್ಯ ನಿಜಕ್ಕೂ ಆರೋಗ್ಯಯುತವಾಗಿದ್ದು ಬಾಯಿಗೆ ಸವಿಯನ್ನು ನೀಡುವುದರ ಜೊತೆಗೆ ಆರೋಗ್ಯದ ಮೇಲೂ ಅದ್ಭುತ ಪರಿಣಾಮವನ್ನು ಉಂಟುಮಾಡುತ್ತದೆ. ಸಣ್ಣವರಿಂದ ಹಿಡಿದು ದೊಡ್ಡವರೂ ಇಷ್ಟಪಡುವ ಈ ದೋಸೆ ಖಾದ್ಯದ ಹೆಸರು ಅಡೆ ದೋಸೆಯಾಗಿದೆ.

ಅಡೆ ದೋಸೆಯಲ್ಲಿ ಅಕ್ಕಿ ಜೊತೆಗೆ ಬೇಳೆಗಳೂ ಪ್ರಧಾನ ಪಾತ್ರವನ್ನು ವಹಿಸುತ್ತವೆ. ಕಡಲೆ, ಉದ್ದು, ತೊಗರಿ ಹೀಗೆ ಬೇಳೆಗಳ ವಿವಿಧ ಪಾಕ ಅಸದಳ ರುಚಿಯನ್ನು ಅಡೆ ದೋಸೆಗೆ ನೀಡುವುದರಿಂದ ಈ ದೋಸೆ ಖಾದ್ಯ ಆರೋಗ್ಯಯುತ ಮತ್ತು ರುಚಿಕರವಾಗಿದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಅಡೆ ದೋಸೆ ಖಾದ್ಯದ ತಯಾರಿ ವಿಧಾನವನ್ನು ಅರಿತುಕೊಳ್ಳಿ.

Mouthwatering Ade Dosa recipe for breakfast

ಬೆಳಗಿನ ಉಪಹಾರಕ್ಕಾಗಿ ರುಚಿಯಾದ ಅವಲಕ್ಕಿ ದೋಸೆ

ಪ್ರಮಾಣ: 2
*ಸಿದ್ಧತಾ ಸಮಯ: 10 ನಿಮಿಷಗಳು
*ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು
*ಅಕ್ಕಿ - 1 ಕಪ್
*ತೊಗರಿ ಬೇಳೆ - 1/2 ಕಪ್
*ಉದ್ದಿನ ಬೇಳೆ - 1/2 ಕಪ್
*ಕಡಲೆ ಬೇಳೆ - 1/2 ಕಪ್
*ಹಸಿಮೆಣಸು - 4
*ಕಾಳುಮೆಣಸು - 3-4
*ಕೆಂಪು ಮೆಣಸು
*ಸೋರೆ ಕಾಯಿ 1/2 ಕಪ್
*ಕರಿಬೇವಿನೆಲೆ - 1/4
*ತೆಂಗಿನ ತುರಿ - 1/2 ಕಪ್
*ಕೊತ್ತಂಬರಿ - 1 ಚಮಚ
*ಇಂಗು - ಸ್ವಲ್ಪ
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - ಸ್ವಲ್ಪ

ಮಾಡುವ ವಿಧಾನ
*ಅಕ್ಕಿ ಮತ್ತು ಎಲ್ಲಾ ಬೇಳೆಗಳನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ.
*ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು (ಎಣ್ಣೆಯನ್ನು ಹೊರತುಪಡಿಸಿ) ಮತ್ತೆಲ್ಲವನ್ನೂ ನುಣ್ಣಗೆ ರುಬ್ಬಿ
* ತದನಂತರ ಕಾವಲಿಯನ್ನು ಬಿಸಿ ಮಾಡಿಕೊಳ್ಳಿ, ಹಾಗೂ ಮಧ್ಯಭಾಗಕ್ಕೆ ಒಂದು ಕೈಲಿನಷ್ಟು (ದೋಸೆ ಚಮಚದಷ್ಟು) ಹಿಟ್ಟನ್ನು ಸುರುವಿಕೊಳ್ಳಿ ಮತ್ತು ಕೈಲಿನ ಹಿಂಭಾಗದಿಂದ ದೋಸೆಯನ್ನು ವೃತ್ತಾಕಾರವಾಗಿ ಹುಯ್ಯಿರಿ. ಇದಕ್ಕೆ ಮುಚ್ಚಳವನ್ನು ಮುಚ್ಚಿ ಮತ್ತು ದೋಸೆಯ ಎರಡೂ ಭಾಗ ಬೇಯುವುದಕ್ಕಾಗಿ 1 ನಿಮಿಷ ಹಾಗೆಯೇ ಬಿಡಿ.
*ದೋಸೆ ಬೇಯುತ್ತಾ ಬಂದಂತೆ ಸ್ವಲ್ಪ ಎಣ್ಣೆ ಹುಯ್ಯಿರಿ
*ದೋಸೆಯ ಎರಡೂ ಬದಿ ಚಿನ್ನದ ಬಣ್ಣಕ್ಕೆ ಬರುವಂತೆ ಬೇಯಿಸಿಕೊಳ್ಳಿ
ನಿಮ್ಮ ಅಡೆ ದೋಸೆ ಸವಿಯಲು ಸಿದ್ಧವಾಗಿದೆ. ಇದನ್ನು ಬೆಣ್ಣೆ ಅಥವಾ ತುಪ್ಪದೊಂದಿಗೆ ನಿಮ್ಮ ಮನೆಮಂದಿಗೆ ಸವಿಯಲು ನೀಡಿ. ನಿಜಕ್ಕೂ ಇದೊಂದು ಆರೋಗ್ಯಯುತ ದೋಸೆಯಾಗಿದೆ.

English summary

Mouthwatering Ade Dosa recipe for breakfast

Karnataka is famous for different type of dosas and one of its kind is the "Ade Dosa Recipe". Ade dosa is very nutritious as it is prepared with different type of dals. The dosa is best with butter and ghee and doesn't even require any curry as side dish. Take a look at how prepare the tasty Ade dosa recipe.
Story first published: Tuesday, September 2, 2014, 16:16 [IST]
X
Desktop Bottom Promotion