For Quick Alerts
ALLOW NOTIFICATIONS  
For Daily Alerts

ಸವಿರುಚಿಯ ಹೆಸರು ಕಾಳಿನ ದೋಸೆ

|

ದೋಸೆಗೆ ಬಳಸುವ ಸಾಮಾಗ್ರಿಗಳ ರುಚಿ ಬದಲಾದಂತೆ ದೋಸೆಗಳ ರುಚಿಯೂ ಬದಲಾಗುವುದು. ಬರೀ ಸಾಮಾಗ್ರಿ ಮಾತ್ರವಲ್ಲ ಅದಕ್ಕೆ ತಯಾರಿಸುವ ಹಿಟ್ಟನ ಹದದ ಮೇಲೂ ರುಚಿ ಬದಲಾಗುವುದು. ಸೆಟ್ ದೋಸೆಯಾದರೆ ಹಿಂದಿನ ದಿನವೇ ರುಬ್ಬಿ, ಹುದುಗು ಬರಲು ಇಡಬೇಕು, ಕೆಲವು ದೋಸೆಗಳನ್ನು ಹಿಟ್ಟನ್ನು ರುಬ್ಬಿದ ತಕ್ಷಣ ಮಾಡಬಹುದು.

ಇಲ್ಲಿ ನಾವು ಹಿಟ್ಟನ್ನು ರುಬ್ಬಿದ ತಕ್ಷಣ ಮಾಡಬಹುದಾದ ಹೆಸರುಕಾಳಿನ ದೋಸೆಯ ರೆಸಿಪಿ ನೀಡಿದ್ದೇವೆ, ಇದನ್ನು ಪೆಸರಿಟ್ಟು ಎಂದು ಕೂಡ ಕರೆಯುತ್ತಾರೆ. ಈ ದೋಸೆಯನ್ನು ಮಾಡುವ ವಿಧಾನ ನೋಡಿ ಇಲ್ಲಿದೆ:

Moong Dal Dosa Recipe

ಬೇಕಾಗುವ ಪದಾರ್ಥಗಳು
ಹೆಸರು ಕಾಳು ಒಂದು ಲೋಟ
ರವೆ ಅಥವಾ ಅಕ್ಕಿ ಕಾಲು ಲೋಟ
ಸಾಧಾರಣ ಗಾತ್ರದ ಈರುಳ್ಳಿ 1
ಹಸಿ ಮೆಣಸು 2-3
ಒಂದು ಇಂಚಿನಷ್ಟು ದೊಡ್ಡದಿರುವ ಹಸಿ ಶುಂಠಿ
ಕೊತ್ತಂಬರಿ ಸೊಪ್ಪು 2 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ

ಮಾಡುವ ವಿಧಾನ :

1. ಅಕ್ಕಿ ಮತ್ತು ಹೆಸರು ಕಾಳನ್ನು ತೊಳೆದು, ನೀರಿನಲ್ಲಿ ಸುಮಾರು ಎಂಟು ಗಂಟೆಗಳ ಕಾಲ ನೆನೆಸಬೇಕು. (ರವೆಯಾದರೆ ಹೆಸರು ಕಾಳನ್ನು ರುಬ್ಬಿದ ನಂತರ ಸೇರಿಸಿದರೆ ಸಾಕು).

2. ಈಗ ನೆನೆಸಿದ ಹೆಸರು ಕಾಳನನ್ಉ ಮಿಕ್ಸಿಯಲ್ಲಿ ಹಾಕಿ, ಅದಕ್ಕೆ ಅಕ್ಕಿ ನೆನೆ ಹಾಕಿದ್ದರೆ ಅಕ್ಕಿ ಹಾಗೂ ಹಸಿ ಶು೦ಠಿ ,ಈರುಳ್ಳಿ,ಹಸಿ ಮೆಣಸು, ರುಚಿಗೆ ತಕ್ಕ ಉಪ್ಪು ಹಾಕಿ ನುಣ್ಣಗೆ ರುಬ್ಬಿ.

3. ಈಗ ತವಾವನ್ನು ಬಿಸಿ ಮಾಡಲು ಇಡಿ. ನಂತರ ಅದಕ್ಕೆ ಎಣ್ಣೆ ಸವರಿ ಒಂದು ದೋಸೆ ಹುಯ್ಯಬೇಕು. ದೋಸೆಯ ಒಂದು ಬದಿ ಬೆಂದ ಮೇಲೆ, ಮಗುಚಿ ಹಾಕಿ ಮತ್ತೊಂದು ಬದಿಯನ್ನೂ ಬೇಯಿಸಿ. ಈ ರೀತಿ ಉಳಿದ ಹಿಟ್ಟಿನಿಂದ ದೋಸೆಗಳನ್ನು ತಯಾರಿಸಿ.

* ತಯಾರಾದ ದೋಸೆಯನ್ನು ಖಾರ ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

English summary

Moong Dal Dosa Recipe

You can try n no of Dosa Recipe, by adding different ingredients. Her,e we are given the recipe of moong dal dosa, Try it, share your experience with us.
X
Desktop Bottom Promotion