For Quick Alerts
ALLOW NOTIFICATIONS  
For Daily Alerts

ಮೂಲಂಗಿ ವಾಸನೆ ಇಲ್ಲದ ಮೂಲಂಗಿ ಚಪಾತಿ

|

ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೂಲವ್ಯಾಧಿಯಂತಹ ಸಮಸ್ಯೆ ಬರದಂತೆ ತಡೆಯುತ್ತದೆ, ಬಂದವರಿಗೆ ಅದನ್ನು ಹೋಗಲಾಡಿಸುವ ಮನೆ ಮದ್ದಾಗಿದೆ. ಆದರೆ ಈ ಮೂಲಂಗಿಯನ್ನು ಹೆಚ್ಚಿನವರು ತಿನ್ನುವುದಿಲ್ಲ, ತಿನ್ನದಿರಲು ಪ್ರಮುಖ ಕಾರಣ ಅದರ ವಾಸನೆ.

ಮೂಲಂಗಿ ಸಾರಿನ ವಾಸನೆ ಆಗದವರು ಅದರಿಂದ ಚಪಾತಿ ಮಾಡಿ ತಿನ್ನಬಹುದು. ಏಕೆಂದರೆ ಮೂಲಂಗಿ ಹಾಕಿ ಮಾಡಿದ ಚಪಾತಿ ಮೂಲಂಗಿಯ ವಾಸನೆ ಬೀರುವುದಿಲ್ಲ. ಮೂಲಂಗಿ ಹಾಕಿ ಚಪಾತಿ ಮಾಡುವುದು ಹೇಗೆ ಎಂದು ವಿವರಿಸಲಾಗಿದೆ ನೋಡಿ:

Mooli Chapathi: Breakfast Recipe

ಬೇಕಾಗುವ ಸಾಮಾಗ್ರಿಗಳು
ಮೂಲಂಗಿ 2
ಈರುಳ್ಳಿ 1
ಹಸಿ ಮೆಣಸಿನ ಕಾಯಿ 2
ಸ್ವಲ್ಪ ಕೊತ್ತಂಬರಿ ಸೊಪ್ಪು
ಚಾಟ್ ಮಸಾಲ 1 ಚಮಚ
ಜೀರಿಗೆ ಅರ್ಧ ಚಮಚ
ಗೋಧಿ ಹಿಟ್ಟು 2 ಕಪ್'ಮೈದಾ ಅರ್ಧ ಕಪ್
ಚಿಟಿಕೆಯಷ್ಟು ಅಜ್ವೈನ್
ತುಪ್ಪ 2 ಚಮಚ
ಎಣ್ಣೆ 1 ಚಮಚ
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಜೀರಿಗೆ ಮತ್ತು ಹಸಿ ಮೆಣಸಿನ ಕಾಯಿ ಹಾಕಿ 1 ನಿಮಿಷದ ಬಳಿಕ ಈರುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ತುರಿದ ಮೂಲಂಗಿಯನ್ನು ಹಾಕಿ ಕಡಿಮೆ ಉರಿಯಲ್ಲಿ 8-10 ನಿಮಿಷ ಹುರಿಯಿರಿ.

* ಈಗ ಉಪ್ಪು, ಚಾಟ್ ಮಸಾಲ, ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪ ಹೊತ್ತು ಹುರಿಯಿರಿ. ಇಳಿಸಿ.

* ಈಗ ಗೋಧಿ ಹಿಟ್ಟು ಮತ್ತು ಮೈದಾಹಿಟ್ಟು ಹಾಕಿ ಚೆನ್ನಾಗಿ ಕಲೆಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ. ನಂತರ ಮೂಲಂಗಿ ಮಿಶ್ರಣವನ್ನು ಅದರ ಜೊತೆ ಹಾಕಿ ಚೆನ್ನಾಗಿ ಕಲೆಸಿ. ಈಗ ಚಪಾತಿಗೆ ತಟ್ಟಿ,

* ತವಾವನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಎಣ್ಣೆ ಸವರಿ ಅದರಲ್ಲಿ ಚಪಾತಿಯ ಎರಡನ್ನುಅದನ್ನು ತವಾದಲ್ಲಿ ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿದರೆ ಮೂಲಂಗಿ ಚಪಾತಿ ರೆಡಿ.

ಇದನ್ನು ಚಟ್ನಿ, ಗ್ರೆವಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.

English summary

Mooli Chapathi: Breakfast Recipe| Variety Of Breakfast Recipe | ಮೂಲಂಗಿ ಚಪಾತಿ: ಬ್ರೇಕ್ ಫಾಸ್ಟ್ ರೆಸಿಪಿ | ಅನೇಕ ಬಗೆಯ ಬ್ರೇಕ್ ಫಾಸ್ಟ್ ರೆಸಿಪಿ

Mooli Chapathi is a very special dish that is popular as an Indian breakfast. Mooli paratha is filled with a stuffing of deliciously spiced radishes. Basically, radishes are called 'mooli' in Hindi.
Story first published: Wednesday, January 30, 2013, 12:06 [IST]
X
Desktop Bottom Promotion