For Quick Alerts
ALLOW NOTIFICATIONS  
For Daily Alerts

ಮೊಮೊಸ್-ಕಡಿಮೆ ಕ್ಯಾಲೋರಿಯ ಚೈನೀಸ್ ಫುಡ್

|

ಮೊಮೊಸ್ ಚೈನೀಸ್ ಅಡುಗೆಯಾಗಿದೆ. ಇದನ್ನು ಬೆಳಗಿನ ಬ್ರೆಕ್ ಫಾಸ್ಟ್ ಗೆ ತಯಾರಿಸಬಹುದು ಅಥವಾ ಸಂಜೆ ತಿಂಡಿಯಾಗಿ ಕೂಡ ಮಾಡಬಹುದು. ಇದರಲ್ಲಿ ಕೊಬ್ಬಿನಂಶ ಕಡಿಮೆ ಇದ್ದು, ಇದನ್ನು ಬೇಯಿಸಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ಇದನ್ನು ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Momos: Yummy Low Calorie Recipe

ಬೇಕಾಗುವ ಸಾಮಾಗ್ರಿಗಳು
ಮೈದಾ 2 ಕಪ್
ಅಡುಗೆ ಸೋಡಾ ಅರ್ಧ ಚಮಚ
ಈರುಳ್ಳಿ 4
ಎಲೆಕೋಸು (ಅರ್ಧದಷ್ಟು)
ಕ್ಯಾರೆಟ್ 4
ಬೆಣ್ಣೆ 2-3 ಚಮಚ
ಶುಂಠಿ ಪೇಸ್ಟ್ ಒಂದೂವರೆ ಚಮಚ
ಅಜ್ವೈನ್ ಚಿಟಿಕೆಯಷ್ಟು
ರುಚಿಗೆ ತಕ್ಕ ಉಪ್ಪು

ಸಾಸ್ ಮಾಡಲು
ಟೊಮೆಟೊ 2
ಬೆಳ್ಳುಳ್ಳಿ ಎಸಳು 2-3
ಹಸಿ ಮೆಣಸಿನ ಕಾಯಿ 1-2
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಮೈದಾಕ್ಕೆ ಸ್ವಲ್ಪ ನೀರು ಹಾಕಿ ಕಲೆಸಿ, ನಂತರ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲೆಸಿ ಒಂದು ಬದಿಯಲ್ಲಿಡಿ.

* ಈಗ ಈರುಳ್ಳಿ, ಎಲೆಕೋಸು, ಕ್ಯಾರೆಟ್ ಅನ್ನು ಚಿಕ್ಕದಾಗಿ ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿ. ಅದಕ್ಕೆ 1 ಚಮಚ ಬೆಣ್ಣೆ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ. ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ ಬೇಯಿಸಿ.

* ತರಕಾರಿ ಬೆಂದ ನಂತರ ಅದರ ನೀರು ಬಗ್ಗಿಸಿ.

* ಈಗ ತರಕಾರಿಗೆ 1 ಚಮಚ ಬೆಣ್ಣೆ ಮತ್ತು ಅಜ್ವೈನ್, ಶುಂಠಿ ಪೇಸ್ಟ್ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಬದಿಯಲ್ಲಿಡಿ.

* ಈಗ ಕಲೆಸಿಟ್ಟ ಮೈದಾದಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಮಾಡಿ.

* ಅದನ್ನು ಬೆರಳಿನಿಂದ ತೂತ ಮಾಡಿ ಅದರಲ್ಲಿ ತರಕಾರಿ ಹಾಕಿ ತುಂಬಿ. ನಂತರ ಅದರ ತುದಿಯನ್ನು ತಿರುಗಿಸಿ.

* ನಂತರ ಅವುಗಳನ್ನು 15-20 ನಿಮಿಷ ಆವಿಯಲ್ಲಿ ಬೇಯಿಸಿದರೆ ಮೊಮೊಸ್ ರೆಡಿ.

ಸಾಸ್ ಮಾಡುವುದು
ಟೊಮೆಟೊವನ್ನು ಗ್ಯಾಸ್ ನಲ್ಲಿ ಸುಟ್ಟು ಅದರ ಸಿಪ್ಪೆ ಸುಲಿದು ಮಿಕ್ಸರ್ ಗೆ ಹಾಕಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಮಿಕ್ಸಿಯಲ್ಲಿ ರುಬ್ಬಿದರೆ ಸಾಸ್ ರೆಡಿ.

ನಂತರ ಸಾಸ್ ಅನ್ನು ಮೊಮೊಸ್ ಗೆ ಹಾಕಿ ತಿಂದರೆ ತುಂಬಾ ರುಚಿಯಾಗಿರುತ್ತದೆ.

English summary

Momos: Yummy Low Calorie Recipe | Chinese Food Recipe | ಮೊಮೊಸ್ ಕಡಿಮೆ ಕ್ಯಾಲೋರಿಯ ಅಡುಗೆ | ಚೈನೀಸ್ ಅಡುಗೆಗಳ ರೆಸಿಪಿ

Low in calories, vegetarian momo is an outstanding choice for all dieters. The beautiful blend of the vegetables in the momo melts in mouth and gives a heavenly experience. Momos can also be made with a meat or cottage cheese filling.
X
Desktop Bottom Promotion