For Quick Alerts
ALLOW NOTIFICATIONS  
For Daily Alerts

ಗ್ರೇವಿ/ಪಲ್ಯ ಜೊತೆ ಸವಿಯಿರಿ ಮೆಂತೆ ಸೊಪ್ಪಿನ ಚಪಾತಿ

|

ಚಪಾತಿ ಎಲ್ಲರ ಮನೆಗಳಲ್ಲಿ ಮಾಡುವ ಸಾಮಾನ್ಯವಾದ ಅಡುಗೆ. ಈ ಸಾಮಾನ್ಯ ಚಪಾತಿಗೆ ಮಾಮೂಲಿ ಬಳಸುವ ಸಾಮಾಗ್ರಿಗಳ ಜೊತೆ, ಇನ್ನೂ ಕೆಲವೊಂದು ಸಾಮಾಗ್ರಿಗಳನ್ನು ಸೇರಿಸಿದರೆ ಹೊಸ ರುಚಿಯ ಅಡುಗೆಯಾಗುವುದು.

ಇಲ್ಲಿ ನಾವು ಗೋಧಿ ಹಿಟ್ಟಿಗೆ ಮೆಂತೆ ಸೊಪ್ಪು ಮತ್ತು ಕಡಲೆ ಹಿಟ್ಟು ಸೇರಿಸಿ ಮಾಡುವ ಸ್ವಾದಿಷ್ಟಕರ ಚಪಾತಿಯ ರೆಸಿಪಿಯನ್ನು ನೀಡಿದ್ದೇವೆ ನೋಡಿ, ಇದನ್ನು ಮಾಡಿ ಆನಂದಿಸಿ.

ಬೇಕಾಗುವ ಸಾಮಾಗ್ರಿಗಳು
ಮೆಂತೆ ಸೊಪ್ಪು 1 ಕಟ್ಟು
ಗೋಧಿ ಹಿಟ್ಟು 2 ಕಪ್
ಕಡಲೆ ಹಿಟ್ಟು 1 ಕಪ್
ಹಸಿ ಮೆಣಸಿನ ಕಾಯಿ 2 (ಕತ್ತರಿಸಿದ್ದು)
ಈರುಳ್ಳಿ 1
ಏಲಕ್ಕಿ ಅರ್ಧ ಚಮಚ
ಖಾರದ ಪುಡಿ ಅರ್ಧ ಚಮಚ
ರುಚಿಗೆ ತಕ್ಕ ಉಪ್ಪು
ನೀರು ಅರ್ಧ ಕಪ್
ಎಣ್ಣೆ ಅಥವಾ ತುಪ್ಪ

ತಯಾರಿಸುವ ವಿಧಾನ:

* ಮೇಲೆ ಹೇಳಿದ ಸಾಮಾಗ್ರಿಗಳಲ್ಲಿ ಎಣ್ಣೆಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಒಂದು ಬಟ್ಟಲಿಗೆ ಹಾಕಿ (ಮೆಂತೆ ಸೊಪ್ಪನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ), ನಂತರ 1 ಚಮಚ ಎಣ್ನೆ ಸೇರಿಸಿ, ಮೊದಲಿಗೆ ಸ್ವಲ್ಪ ನೀರು ಹಾಕಿ ಕಲೆಸಿ. ಏಕೆಂದರೆ ಮೆಂತೆ ಸೊಪ್ಪು ಹಾಕಿರುವುದರಿಂದ ಅದು ಕೂಡ ನೀರು ಬಿಡುವುದರಿಂದ ಸ್ವಲ್ಪ ನೀರು ಹಾಕಿ ಕಲೆಸಿ, ನಂತರ ನೀರಿನ ಅವಶ್ಯಕತೆ ಬಿದ್ದರೆ ಇನ್ನು ಸ್ವಲ್ಪ ನೀರು ಸೇರಿಸಿ ಚಪಾತಿಯ ಹದಕ್ಕೆ ಕಲೆಸಿ.

* ಈಗ ಅವುಗಳಿಂದ ಚಪಾತಿ ಉಂಡೆಗಳನ್ನು ಕಟ್ಟಿ, ನಂತರ ಚಪಾತಿಗೆ ತಟ್ಟುವ ರೀತಿಯಲ್ಲಿ ತಟ್ಟಿ.

* ತವಾವನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಅಥವಾ ಎಣ್ಣೆ ಸವರಿ ಅದರಲ್ಲಿ ತಟ್ಟಿದ ಹಿಟ್ಟನ್ನು ಹಾಕಿ ಬೇಯಿಸಿ. ಚಪಾತಿಯ ಎರಡೂ ಬದಿ ಬೆಂದ ಮೇಲೆ ತವಾದಿಂದ ತೆಗೆದು ನೀರಿನಂಶ ಇಲ್ಲದ ಪಾತ್ರೆಗೆ ಹಾಕಿ. ಇದೇ ರೀತಿ ಉಳಿದ ಚಪಾತಿಗಳನ್ನು ಮಾಡಿ.

ಈಗ ತಯಾರಾದ ಚಪಾತಿಯನ್ನು ಗ್ರೇವಿ ಅಥವಾ ಪಲ್ಯ ಜೊತೆ ಸವಿಯಿರಿ.

English summary

Methi Missi Chapathi

We have added a twist to this recipe by adding fresh fenugreek leaves which makes this dish packed with nutrition. You can experiment further by adding spinach to it if you want to make it more healthy.
X
Desktop Bottom Promotion