For Quick Alerts
ALLOW NOTIFICATIONS  
For Daily Alerts

ಮಟರ್ ಕಚೊರಿ ಮಾಡಿ ನೋಡಿ

|

ಬೆಳ್ಳಂ ಬೆಳಗ್ಗೆ ಒಂದಿಷ್ಟು ಖಾರವಾದ ಗರಿಗರಿಯಾದ ತಿಂದರೆ ಈ ಚಳಿಗೆ ಮಜವಾಗಿರುತ್ತೆ ಅಲ್ವಾ. ಹಾಗಿದ್ದರೆ ಮಟರ್ ಕಚೊರಿ ಒಳ್ಳೆಯ ಆಯ್ಕೆ. ಇದು ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ. ಯಾಕೆಂದರೆ ಇದರೊಳಗಿನ ಬಟಾಣಿ ಮಸಾಲೆ ಜೊತೆ ತಿನ್ನಲು ರುಚಿಯಾಗಿರುತ್ತೆ. ಇದರೊಂದಿಗೆ ನಿಮ್ಮ ದಿನವನ್ನು ಆರಂಭಿಸಿ. ಸಂಜೆಯ ಕಾಫಿ ಸಮಯಕ್ಕೆ ಕೂಡ ಇದು ಹೊಂದುತ್ತೆ. ಮಕ್ಕಳು ಕೂಡ ಇದನ್ನ ಇಷ್ಟಪಡುತ್ತಾರೆ.
ನಾವು ಈವತ್ತು ನಿಮಗೆ ಈ ರುಚಿಯಾದ ಮಟರ್ ಕಚೊರಿ ಮಾಡುವುದು ಹೇಗೆ ಅಂತ ಹೇಳುತ್ತೇವೆ.

Matar Ki Kachori Recipe For Breakfast
ಬೇಕಾಗುವ ಸಾಮಗ್ರಿಗಳು
1. ಗೋಧಿ ಹಿಟ್ಟು- 1 1/2 ಕಪ್
2. ಉಪ್ಪು- ಸ್ವಲ್ಪ
3. ತುಪ್ಪ- 5 ಟೀಚಮಚ
4. ಬಟಾಣಿ- 1 ಕಪ್ (ಬೇಯಿಸಿಕೊಳ್ಳಿ)
5. ಹಸಿಮೆಣಸಿನಕಾಯಿ- 2 (ಕತ್ತರಿಸಿಕೊಳ್ಳಿ)
6. ಧನಿಯ- 2 ಟೀಚಮಚ
7. ಕಡಲೆ ಬೇಳೆ- 1 ಟೀಚಮಚ
8. ಎಣ್ಣೆ- 1 ಟೀಚಮಚ
9. ಜೀರಿಗೆ- 1 ಟೀಚಮಚ
10. ಮೆಂತ್ಯೆ- 1 ಟೀಚಮಚ
11. ಇಂಗು- ಒಂದು ಚಿಟಿಕೆ
12. ಗರಂಮಸಾಲ- 1 ಟೀಚಮಚ
13. ಚಾಟ್ ಮಸಾಲ- 1/2 ಟೀಚಮಚ
14. ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ
1. ಮೊದಲು ಗೋಧಿಹಿಟ್ಟು, ಉಪ್ಪು ಮತ್ತು ತುಪ್ಪ ಸೇರಿಸಿ ಕಲಸಿ 30 ನಿಮಿಷ ನೆನಸಿಡಿ/
2. ನಂತರ ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಜೀರಿಗೆ ,ಧನಿಯ ಮತ್ತು ಮೆಂತ್ಯೆ ಹಾಕಿ.
3. ಅದರೊಂದಿಗೆ ಹಸಿಮೆಣಸಿಕಾಯಿ ಹಾಕಿ ಹುರಿಯಿರಿ.
4. ಇದಕ್ಕೆ ಬೇಯಿಸಿದ ಬಟಾಣಿ ಮತ್ತು ಚಿಟಿಕೆ ಇಂಗು ಸೇರಿಸಿ ಚೆನ್ನಾಗಿ ಕಲಸಿ
5. ಇದಕ್ಕೆ ಕಡಲೆಬೇಳೆ ಹಿಟ್ಟು, ಗರಂಮಸಾಲ, ಚಾಟ್ ಮಸಾಲ ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿ.
6. ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಹಾಕಿ ಕಲಸಿಟ್ಟುಕೊಳ್ಳಿ. ಇದನ್ನು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಳ್ಳಿ.
7. ಗೋಧಿ ಹಿಟ್ಟನ್ನು ಪೂರಿಗೆ ಲಟ್ಟಿಸಿಕೊಳ್ಳುವ ಹಾಗೆ ಚಿಕ್ಕದಾಗಿ ಲಟ್ಟಿಸಿಕೊಂಡು ಅದರೊಳಗೆ ಈ ಉಂಡೆಗಳನ್ನು ಇಟ್ಟು ಮುಚ್ಚಿ.
8. ಬಾಣಲೆಯಲ್ಲಿ ಎಣ್ಣೆ ಹಾಕಿ ಅದು ಕಾದನಂತರ ಈ ಉಂಡೆಗಳನ್ನು ಎಣ್ಣೆಗೆ ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
ಗರಿಗರಿಯಾದ ಮಟರ್ ಕಚೊರಿ ತಿನ್ನಲು ರೆಡಿ.

Read more about: breakfast ತಿಂಡಿ
English summary

Matar Ki Kachori Recipe For Breakfast

One of the best things to eat in the morning is something spicy, crispy and delicious. Today, we would like to share with you one of the most delectable breakfast recipes of all time is Matar Ki Kachori.
Story first published: Wednesday, December 4, 2013, 13:19 [IST]
X
Desktop Bottom Promotion