For Quick Alerts
ALLOW NOTIFICATIONS  
For Daily Alerts

ಕುಟ್ಟು ಕಿ ಪೂರಿ, ಟೇಸ್ಟ್ ಮಾಡಿರುವಿರಾ?

|

ಪೂರಿಯನ್ನು ಬರೀ ಮೈದಾ, ಗೋಧಿಯಿಂದ ಮಾಡುವ ಬದಲು ಬೇರೆ-ಬೇರೆ ಹಿಟ್ಟು ಬಳಸಿ ಹೊಸ ರುಚಿಯ ಪೂರಿ ಟ್ರೈ ಮಾಡಬಯಸುವಿರಾ? ಹಾಗಾದರೆ ಇಲ್ಲಿದೆ ನೋಡಿ ನಿಮಗೆ ಸೂಕ್ತವಾದ ರೆಸಿಪಿ.

ಇದನ್ನು buck wheat Powder ಬಳಸಿ ಮಾಡಲಾಗುವುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣವೇ?

Kuttu Ki Puri Recipe

ಬೇಕಾಗುವ ಸಾಮಾಗ್ರಿಗಳು
ಕುಟ್ಟು ಕಿ ಆಟಾ ಪುಡಿ (Buck wheat) 2 ಕಪ್
ಆಲೂಗಡ್ಡೆ 2
ಕಲ್ಲುಪ್ಪು, ಕರಿ ಮೆಣಸಿನ ಪುಡಿ ಅರ್ಧ ಚಮಚ
ಎಣ್ಣೆ

ಸೂಚನೆ: ಕುಟ್ಟು ಕಿ ಆಟಾದ ಕನ್ನಡ ಪದ ಗೊತ್ತಿಲ್ಲ, ಆದರೆ ಈ ಪುಡಿ ಸೂಪರ್ ಮಾರ್ಕೆಟ್ ಗಳಲ್ಲಿ ದೊರೆಯುತ್ತದೆ.

ಮಾಡುವ ವಿಧಾನ

* ಆಲೂಗಡ್ಡೆಯನ್ನು ತೊಳೆದು ಬೇಯಿಸಿ, ನಂತರ ಅದರ ಸಿಪ್ಪೆ ಸುಲಿದು ಮ್ಯಾಶ್ ಮಾಡಿ.

* ಈಗ ಪಾತ್ರೆಗೆ ಹಾಕಿ ಕುಟ್ಟು ಕಿ ಆಟಾ ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು, ಕರಿ ಮೆಣಸಿನ ಪುಡಿ ಹಾಗೂ ಮ್ಯಾಶ್ ಮಾಡಿದ ಆಲೂಗಡ್ಡೆ, ಸ್ವಲ್ಪ ನೀರು ಹಾಕಿ ಚಪಾತಿಯ ಹದಕ್ಕೆ ಕಲೆಸಿ 10-15 ನಿಮಿಷ ಬಿಡಿ.

* ಈಗ ಅದರಿಂದ ಚಿಕ್ಕ-ಚಿಕ್ಕ ಉಂಡೆ ಕಟ್ಟಿ, ತಟ್ಟಿ .

* ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ಅದರಲ್ಲಿ ತಟ್ಟಿದ ಹಿಟ್ಟನ್ನು ಹಾಕಿ ಪೂರಿ ತಯಾರಿಸಿ.
ಇದನ್ನು ಸಾಗು ಅಥವಾ ಆಲೂ ಸಬ್ಜಿ ಜೊತೆ ಸವಿಯಿರಿ.

English summary

Kuttu Ki Puri Recipe

Here is the kuttu ki puri recipe. The dough is kneaded with kuttu ka atta and rolled small puris are then fried in steaming hot oil. The kuttu ki puris can be served with boiled potato sabzi.
 
 
X
Desktop Bottom Promotion