For Quick Alerts
ALLOW NOTIFICATIONS  
For Daily Alerts

ಚಟ್ನಿ ಜೊತೆ ಸವಿಯಿರಿ ಖಾರಾ ಪೊಂಗಲ್

|
Khara Pongal Recipe
ಖಾರಾ ಪೊಂಗಲ್ ರುಚಿಕರವಾದ ಬ್ರೇಕ್ ಫಾಸ್ಟ್ ಅಡುಗೆಯಾಗಿದೆ. ಇದನ್ನು ತಯಾರಿಸುವ ವಿಧಾನ ಕೂಡ ಹೆಚ್ಚೇನು ಶ್ರಮದಾಯಕವಾಗಿಲ್ಲ. ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುವ ಸಾಮಾಗ್ರಿಗಳಿಂದಲೇ ಇದನ್ನು ತಯಾರಿಸಬಹುದು.

ಖಾರಾ ಪೊಂಗಲ್ ಮಾಡಿ ಅದರ ಜೊತೆ ಸ್ವಲ್ಪ ಚಟ್ನಿ ಅಥವಾ ಉಪ್ಪಿನ ಕಾಯಿ ಹಾಕಿ ತಿಂದರೆ ರುಚಿ ಸೂಪರ್ ಆಗಿರುತ್ತದೆ. ಇದನ್ನು ಮಾಡುವ ವಿಧಾನದ ಬಗ್ಗೆ ಈ ಕೆಳಗೆ ಹೇಳಲಾಗಿದೆ ನೋಡಿ:

ಬೇಕಾಗುವ ಸಾಮಾಗ್ರಿಗಳು

ಹೆಸರು ಬೇಳೆ 1 ಕಪ್
ಅಕ್ಕಿ 1 ಕಪ್
ಗೋಂಡಂಬಿ 10-12
ಜೀರಿಗೆ 1 ಚಮಚ
ಕರಿ ಮೆಣಸಿನ ಪುಡಿ 1 ಚಮಚ
ಕತ್ತರಿಸಿದ ಹಸಿ ಮೆಣಸಿನ ಕಾಯಿ 3-4
ಸ್ವಲ್ಪ ತುರಿ ತೆಂಗಿನಕಾಯಿ
ಕತ್ತರಿಸಿದ ಹಸಿ ಮೆಣಸಿನ ಕಾಯಿ (ಖಾರಕ್ಕೆ ತಕ್ಕಷ್ಟು)
ಅರಿಶಿಣ ಪುಡಿ ಅರ್ಧಚಮಚ
ರುಚಿಗೆ ತಕ್ಕ ಉಪ್ಪು
ತುಪ್ಪ ಅಥವಾ ಎಣ್ಣೆ 2 ಚಮಚ
ನೀರು 3 ಅಥವಾ 3 1/2 ಕಪ್


ತಯಾರಿಸುವ ವಿಧಾನ

* ಕುಕ್ಕರ್ ಗೆ 2 ಚಮಚ ತುಪ್ಪ ಹಾಕಿ ಸವರಬೇಕು.

* ಹೆಸರು ಬೇಳೆ ಮತ್ತು ಅಕ್ಕಿಯನ್ನು ತೊಳೆದು ಪ್ರತ್ಯೇಕವಾಗಿ ಇಡಬೇಕು.

* ಗೋಡಂಬಿಯನ್ನು ಎಣ್ಣೆಯಲ್ಲಿ ಹಾಕಿ ಸ್ವಲ್ಪ ಹುರಿಯಿರಿ. ನಂತರ ಅದನ್ನು ಒಂದು ಬದಿಯಲ್ಲಿಡಿ.

* ಈಗ ತುಪ್ಪಕ್ಕೆ ಸಾಸಿವೆ ಮತ್ತು ಜೀರಿಗೆ ಹಾಕಿ, ಸಾಸಿವೆ ಚಟಾಪಟಾ ಶಬ್ದ ಬರುವಾಗ ಹಸಿ ಮೆಣಸಿನ ಕಾಯಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ.

* ನಂತರ ಹೆಸರು ಬೇಳೆಯನ್ನು ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.

* ಈಗ ನೀರು ಹಾಕಿ ಅಕ್ಕಿಯನ್ನು ಹಾಕಬೇಕು. ನಂತರ ತುರಿದ ತೆಂಗಿನ ಕಾಯಿ, ಅರಿಶಿಣ, ರುಚಿಗೆ ತಕ್ಕ ಉಪ್ಪು ಹಾಕಿ 2-3 ವಿಶಲ್ ವರೆಗೆ ಬೇಯಸಿ.

* ನಂತರ ಹುರಿದ ಗೋಡಂಬಿ ಮತ್ತು ಕರಿ ಮೆಣಸಿನ ಪುಡಿ ಬೇಕಿದ್ದರೆ ಕೊತ್ತಂಬರಿ ಸೊಪ್ಪು ಹಾಕಿದರೆ ಖಾರ ಪೊಂಗಲ್ ರೆಡಿ.

English summary

Khara Pongal Recipe | Variety Of Breakfast Recipe | ಖಾರಾ ಪೊಂಗಲ್ ರೆಸಿಪಿ | ಅನೇಕ ಬಗೆಯ ಪೊಂಗಲ್ ರೆಸಿಪಿ

Khara pongal one of the tasty breakfast recipe. You can made it by using simple ingrediants. Pickleand chutney will add the taste to khara pongal. If you want to try here is a recipe.
X
Desktop Bottom Promotion