For Quick Alerts
ALLOW NOTIFICATIONS  
For Daily Alerts

ಇದನ್ನು ದೋಸೆ ಎಂದು ತಪ್ಪು ತಿಳಿಯಬೇಡಿ ಪ್ಲೀಸ್!

|

ಅಪ್ಪಂ ಇದು ಕೇರಳ ಶೈಲಿಯ ಅಡುಗೆ. ನೋಡಲು ದೋಸೆ ರೀತಿ ಇದ್ದರು ಇದರ ರುಚಿ ಹಾಗೂ ಮಾಡುವ ವಿಧಾನ ಭಿನ್ನವಾಗಿರುತ್ತದೆ. ಈ ಅಪ್ಪಾಂನ ಸ್ಪೆಷಾಲಿಟಿ ಅಂದರೆ ಇದನ್ನು ಕಲೆಸಲು ನೀರು ಬದಲು ಎಳನೀರು ಬಳಸಲಾಗುವುದು.

ಈ ಅಪ್ಪಂ ರುಚಿ ಒಮ್ಮೆ ನೋಡಿದರೆ ಇದನ್ನು ಮತ್ತೆ -ಮತ್ತೆ ತಿನ್ನಬೇಕೆನಿಸುವಷ್ಟು ರುಚಿಕರವಾಗಿರುತ್ತದೆ. ಇದನ್ನು ಸಾಮಾನ್ಯವಾಗಿ ಬ್ರೇಕ್ ಫಾಸ್ಟ್ ಗೆ ಮಾಡಲಾಗುವುದು, ಆದರೆ ಇದನ್ನು ರಾತ್ರಿ ಡಿನ್ನರ್ ಗೂ ಮಾಡಬಹುದು. ಬನ್ನಿ, ಅಪ್ಪಂ ಮಾಡುವ ವಿಧಾನ ತಿಳಿಯೋಣ:

Kerala Style Appams Recipe

ಬೇಕಾಗುವ ಸಾಮಾಗ್ರಿಗಳು
ಬೆಳ್ತಕ್ಕಿ 2 ಕಪ್
ಎಳನೀರು
ತೆಂಗಿನ ತುರಿ ಅರ್ಧ ಕಪ್
ಚಿಟಿಕೆಯಷ್ಟು ಉಪ್ಪು

ಮಾಡುವ ವಿಧಾನ

* ಅಕ್ಕಿಯನ್ನು ರಾತ್ರಿ ನೀರಿನಲ್ಲಿ ನೆನೆ ಹಾಕಬೇಕು. ನಂತರ ಬೆಳಗ್ಗೆ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ. ತೆಂಗಿನ ತುರಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ, ಹಿಟ್ಟಿಗೆ ಹಾಕಿ ಮಿಕ್ಸ್ ಮಾಡಿ. ರುಚಿಗೆ ತಕ್ಕ ಉಪ್ಪು ಸೇರಿಸಿ.

*ಈ ದೋಸೆ ಹಿಟ್ಟನ್ನು ಅರೆಯುವಾಗ ನೀರಿನ ಬದಲು ಎಳನೀರನ್ನು ಸೇರಿಸಿ. ಕಲೆಸುವಾಗಲೂ ಎಳನೀರು ಹಾಕಿಯೇ ಕಲೆಸಬೇಕು. ಅಂದರೆ ಮಾತ್ರ ಈ ಅಪ್ಪಂ ತುಂಬಾ ರುಚಿಕರವಾಗಿರುತ್ತದೆ. (ಕಲೆಸಿದ ಹಿಟ್ಟು ತುಂಬಾ ಗಟ್ಟಿಯಾಗಿಯೂ ಇರಬಾರದು, ತುಂಬಾ ತೆಳುವಾಗಿಯೂ ಇರಬಾರದು).

* ಈಗ ಚಿಕ್ಕ ಬಾಣಲೆಯನ್ನು ಉರಿ ಮೇಲೆ ಇಡಿ. ಅದಕ್ಕೆ ಎಣ್ಣೆ ಸವರಿ, ಈಗ ಒಂದು ಸೌಟ್ ಹಿಟ್ಟನ್ನು ಅದಕ್ಕೆ ಹಾಕಿ ಬಾಣಲೆಯನ್ನು ಒಮ್ಮೆ ಎತ್ತಿ ಮಿಶ್ರಣ ವೃತ್ತಾಕಾರವಾಗಿ, ಸ್ವಲ್ಪ ಅಗಲವಾಗಿ ಬರುವಂತೆ ಬಾಣಲೆಯನ್ನು ನಿಮ್ಮ ಕೈಯಿಂದ ತಿರುಗಿಸಿ (ಹಿಟ್ಟು ಮುಟ್ಟಬೇಡಿ, ಬರೀ ಬಾಣಲೆಯನ್ನು ತಿರುಗಿಸಿದರೆ ಸಾಕು), ನಂತರ ಸಾಧಾರಣ ಉರಿ ಮೇಲೆ ಇಟ್ಟು ಬಾಣಲೆಯನ್ನು ಮುಚ್ಚಿ. 2-3 ನಿಮಿಷ ಸಾಕು ಬೇಯಲು.

* ಈಗ ಹಿಟ್ಟು ಬೆಂದು ಮೇಲೆ ಅದನ್ನು ತೆಗೆದು ಪಾತ್ರೆಯಲ್ಲಿ ಹಾಕಿ. ಈ ರೀತಿ ಉಳಿದ ಹಿಟ್ಟಿನಿಂದಲೂ ಮಾಡಿ.

ತಯಾರಾದ ರುಚಿಯಾದ ಅಪ್ಪಂ ಅನ್ನು ತೆಂಗಿನಕಾಯಿ ಚಟ್ನಿ ಜೊತೆ ತಿನ್ನಲು ರುಚಿಕರವಾಗಿರುತ್ತದೆ.

ನಾನ್ ವೆಜ್ ತಿನ್ನುವವರು ಕೋಳಿ ಸಾರು ಜೊತೆ ತಿಂದರೆ ಅಪ್ಪಂ ರುಚಿ ಮತ್ತಷ್ಟು ಹೆಚ್ಚುವುದು.

English summary

Kerala Style Appams Recipe | Variety Of Breakfast Recipe | ಅಪ್ಪಂ-ಕೇರಳ ಶೈಲಿಯ ರೆಸಿಪಿ | ಅನೇಕ ಬಗೆಯ ಬ್ರೇಕ್ ಪಾಸ್ಟ್ ರೆಸಿಪಿ

Kerala style appams make a very interesting and easy breakfast. If you prepare the appam batter at night, then the breakfast recipe becomes easy and quick. Kerala appams are some of the best South Indian foods to have for breakfast.
X
Desktop Bottom Promotion