For Quick Alerts
ALLOW NOTIFICATIONS  
For Daily Alerts

ನಿಮ್ಮ ಟೇಸ್ಟೀ ಬ್ರೇಕ್‌ಫಾಸ್ಟ್‌ಗಾಗಿ ಕಾಂಚಿಪುರಮ್ ಇಡ್ಲಿ

|

ಕಾಂಚಿಪುರಮ್ ಇಡ್ಲಿಯು ಒಂದು ಸಾಂಪ್ರದಾಯಿಕ ತಿನಿಸಾಗಿದ್ದು ವೈಷ್ಣವರ ಮನೆಗಳಲ್ಲಿ ತಯಾರಾಗುವಂಥದ್ದಾಗಿದೆ. ತಮಿಳುನಾಡಿನ ಹೃದಯಭಾಗದಲ್ಲಿ ನೆಲೆಗೊಂಡಿರುವ ಕಾಂಚಿಪುರಮ್ ಊರಿನ ವಿಶೇಷ ಖಾದ್ಯವಾಗಿದೆ ಈ ಇಡ್ಲಿ.

ಈ ಯಮ್ಮಿ ಟೇಸ್ಟೀ ಇಡ್ಲಿಯನ್ನು ಅಲ್ಲಿನ ದೇವಸ್ಥಾನಗಳಿಗೆ ಹರಕೆಯಾಗಿ ಒಪ್ಪಿಸುತ್ತಾರೆ. ಮತ್ತು ಇದು ವಿಶ್ವದಾದ್ಯಂತ ಜನಪ್ರಿಯವಾಗಿದೆ. ಕಾಂಚಿಪುರಮ್ ಇಡ್ಲಿಯ ಮಹತ್ವವೆಂದರೆ ಅದರ ಮೃದುತ್ವ ಮತ್ತು ಬಾಯಲ್ಲಿ ಇಟ್ಟ ಕೂಡಲೇ ಕರಗುವ ಪರಿಯಾಗಿದೆ.

ಇದರಂತೆ ಏನಾದರೂ ವಿಶೇಷವಾದುದನ್ನು ನಿಮಗೆ ತಿನ್ನಬೇಕೆಂಬ ಬಯಕೆಯಾಗಿದ್ದರೆ ತಡ ಮಾಡದೇ ಕಾಂಚಿಪುರಮ್ ಇಡ್ಲಿಯ ಸವಿ ನೋಡಲು ಸಿದ್ಧಗೊಳ್ಳಿ. ಈ ಲೇಖನದಲ್ಲಿ ಕಾಂಚಿಪುರಮ್ ಇಡ್ಲಿ ರೆಸಿಪಿಯ ತಯಾರಿ ವಿಧಾನವನ್ನು ನಿಮಗೆ ತಿಳಿಸಿದ್ದು ನಿಮ್ಮ ಪ್ರಯತ್ನಕ್ಕೆ ನಾವು ಸಾಥ್ ನೀಡುತ್ತಿದ್ದೇವೆ.

Kanchipuram Idli Recipe For Breakfast

ಹಾಗಿದ್ದರೆ ತಡ ಮಾಡದೇ ಕಾಂಚಿಪುರಮ್ ಇಡ್ಲಿ ರೆಸಿಪಿಯ ವಿಧಾನದತ್ತ ಗಮನಕೊಡಿ ಮತ್ತು ಇದನ್ನು ಟ್ರೈ ಮಾಡಿ.
ರುಚಿಕರವಾದ ಸ್ಪೈಸಿ ಟೊಮೇಟೊ ದಾಲ್ ರೆಸಿಪಿ

ಪ್ರಮಾಣ: 3
ನೆನೆಯಿಸುವ ಸಮಯ: 4 ಗಂಟೆಗಳು
ಸಿದ್ಧತಾ ಸಮಯ: 15 ನಿಮಿಷಗಳು
ಅಡುಗೆಗೆ ಬೇಕಾಗುವ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
*ಉದ್ದಿನ ಬೇಳೆ - 1/4 ಕಪ್
*ಅಕ್ಕಿ - 1/2 ಕಪ್
*ಚನ್ನಾ ದಾಲ್ -1/4 ಸ್ಪೂನ್
*ಮೊಸರು - 1/8 ಕಪ್
*ಗೇರುಬೀಜ - 100 ಗ್ರಾಮ್ಸ್
*ಹಸಿಮೆಣಸು - 2 (ಸೀಳಿದ್ದು)
*ತೆಂಗಿನ ತುರಿ - 1/2 ಕಪ್
*ಶುಂಠಿ - 1/4 ಸ್ಪೂನ್
*ಪೆಪ್ಪರ್ ಪೌಡರ್ -1/2 ಸ್ಪೂನ್
*ಉಪ್ಪು ರುಚಿಗೆ ತಕ್ಕಷ್ಟು
*ಕರಿಬೇವಿನೆಲೆ - ಸ್ವಲ್ಪ
*ಎಣ್ಣೆ - 2 ಸ್ಪೂನ್
*ತುಪ್ಪ - 1 ಸ್ಪೂನ್

ಬೆಳಗಿನ ಬ್ರೇಕ್‌ಫಾಸ್ಟ್‌ಗೆ ತಯಾರಿಸಿ ಸ್ಪೆಶಲ್ ಬ್ರೆಡ್ ಉಪ್ಪಿಟ್ಟು

ಮಾಡುವ ವಿಧಾನ
1. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು 4 ಗಂಟೆಗಳ ಕಾಲ ನೆನೆಸಿ.

2.ಈಗ ಚನ್ನಾ ದಾಲ್ ಬೇರೆಯಾಗಿ ನೆನೆಸಿಡಿ.

3.ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ.

4.ಇದು ಹುದುಗು ಬರಲು 6 ರಿಂದ 8 ಗಂಟೆಗಳ ಕಾಲ ಬೆಚ್ಚಗಿನ ಜಾಗದಲ್ಲಿ ಮುಚ್ಚಿಡಿ.

5.ಮೊಸರು, ಗೇರುಬೀಜ, ಹಸಿಮೆಣಸು, ತೆಂಗಿನ ತುರಿ, ಶುಂಠಿ,ಪೆಪ್ಪರ್ ಪೌಡರ್,ಕರಿಬೇವಿನೆಲೆ,ತುಪ್ಪ,ಉಪ್ಪು ಮತ್ತು ನೆನೆಸಿದ ಚನ್ನಾ ದಾಲ್ ಅನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

6.ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ ಮತ್ತು 10-12 ನಿಮಿಷಗಳ ಕಾಲ ಇಡ್ಲಿ ಬೇಯಲಿ.

7. ಉಳಿದ ಹಿಟ್ಟಿಗೂ ಇದೇ ಕ್ರಮವನ್ನು ಅನುಸರಿಸಿ.

ನಿಮ್ಮ ಕಾಂಚಿಪುರಮ್ ಇಡ್ಲಿ ರೆಸಿಪಿ ಸವಿಯಲು ಸಿದ್ಧವಾಗಿದೆ. ಟೊಮೇಟೊ ಅಥವಾ ಪುದೀನಾ ಚಟ್ನಿಯೊಂದಿಗೆ ಈ ಯಮ್ಮೀ ಇಡ್ಲಿಯನ್ನು ಸವಿಯಲು ನೀಡಿ.

Story first published: Wednesday, June 4, 2014, 14:38 [IST]
X
Desktop Bottom Promotion