For Quick Alerts
ALLOW NOTIFICATIONS  
For Daily Alerts

ಫಟಾಫಟ್ ರೆಸಿಪಿ: ಕ್ಷಣಾರ್ಧದಲ್ಲಿ ಬಿಸಿ ಬಿಸಿ ದೋಸೆ ರೆಡಿ!

By Jaya
|

ಬೆಳಗ್ಗಿನ ಉಪಹಾರವನ್ನು ಸಿದ್ಧಪಡಿಸುವುದು ಎಂದರೆ ಮನೆಯೊಡತಿಗೆ ಕೊಂಚ ತಲೆನೋವಿನ ಸಂಗತಿಯೇ. ಮನೆಯಲ್ಲಿರುವ ಪ್ರತಿಯೊಬ್ಬರ ಅಭಿರುಚಿಯನ್ನು ಅರಿತುಕೊಂಡೇ ಉಪಹಾರವನ್ನು ಸಿದ್ಧಪಡಿಸಬೇಕಾಗಿರುವುದರಿಂದ ಹಲವಾರು ಗೊಂದಲಗಳು ಉಂಟಾಗುವುದು ಸಹಜವೇ ಆಗಿದೆ.

ನೀವು ಮನೆಯಲ್ಲೇ ಇರುವವರು ಆಗಿರಿ ಅಥವಾ ಹೊರಕ್ಕೆ ಉದ್ಯೋಗಕ್ಕೆ ಹೋಗುವವರೇ ಆಗಿರಿ ಬೆಳಗ್ಗಿನ ತಿಂಡಿಗೆ ಏನು ಸಿದ್ಧಮಾಡುವುದು ಎಂಬುದಾಗಿ ರಾತ್ರಿಯೇ ನೀವು ಯೋಜನೆಯನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ದಿನವೂ ಒಂದೇ ಬಗೆಯ ಖಾದ್ಯವನ್ನು ತಯಾರಿಸಿದಲ್ಲಿ ಅದು ಬೇಜಾರು ಉಂಟುಮಾಡಬಹುದು. ಹಾಗಿದ್ದರೆ ಸ್ವಾದಿಷ್ಟವಾಗಿರುವ ಬೇರೆ ಖಾದ್ಯ ಯಾವುದು ಎಂಬ ಚಿಂತೆಯ ಹುಳ ನಿಮ್ಮ ತಲೆಯನ್ನು ಕೊರೆಯುತ್ತಿರುವುದು ಖಂಡಿತ. ಹೆಚ್ಚು ಚಿಂತಿಸದೇ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ ಸರಳ ತ್ವರಿತ ಗತಿಯ ದೋಸೆ ರೆಸಿಪಿಯನ್ನು ನಿಮಗೆ ತಯಾರಿಸಿಕೊಳ್ಳಬಹುದಲ್ಲವೇ? ಬಿಸಿ ಬಿಸಿಯಾದ ಗೋಧಿ ಹಿಟ್ಟಿನ ದೋಸೆ ರೆಸಿಪಿ

ಇದಕ್ಕೆ ಹೆಚ್ಚಿನ ಸಮಯ ಕೂಡ ತಗಲುವುದಿಲ್ಲ ಅಂತೆಯೇ ನಿಮಗೆ ದಣಿವೂ ಉಂಟಾಗುವುದಿಲ್ಲ. ಹಾಗಿದ್ದರೆ ಬನ್ನಿ ಅಕ್ಕಿಯನ್ನು ನೆನೆಸದೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಥಟ್ಟನೇ ತಯಾರಿಸುವ ದೋಸೆ ರೆಸಿಪಿಯನ್ನು ಇಲ್ಲಿ ತಿಳಿಸುತ್ತಿದ್ದೇವೆ. ಇದನ್ನು ಉಪಹಾರಕ್ಕೂ ತಯಾರಿಸಿ ಮಧ್ಯಾಹ್ನ ಬಾಕ್ಸ್‎ಗೂ ನಿಮಗೆ ಕೊಂಡೊಯ್ಯಬಹುದಾಗಿದೆ. ತೆಂಗಿನ ಕಾಯಿ ಚಟ್ನಿಯೊಂದಿಗೆ ಈ ದೋಸೆ ಇನ್ನಷ್ಟು ಸ್ವಾದಮಯವಾಗಿದ್ದು, ಇದನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ನೋಡಿ

Instant Dosa Recipe For Breakfast

ಪ್ರಮಾಣ - 3
*ಅಡುಗೆಗೆ ಬೇಕಾದ ಸಮಯ - 10 ನಿಮಿಷಗಳು
*ಸಿದ್ಧತಾ ಸಮಯ - 10 ನಿಮಿಷಗಳು

ಸಾಮಾಗ್ರಿಗಳು
*ಗೋಧಿ ಹುಡಿ - 2 ಕಪ್‎ಗಳು
*ಅಕ್ಕಿ ಹುಡಿ - 1 ಕಪ್
*ಕೊತ್ತಂಬರಿ ಎಳೆಗಳು - 1 ಚಮಚ
*ಹಸಿಮೆಣಸು ಅಥವಾ ಕೆಂಪು ಮೆಣಸು - 4 ರಿಂದ 5
*ಕರಿಬೇವು - 8 ರಿಂದ 10
*ಕಡ್ಲೆ ಹುಡಿ - 1/2 ಕಪ್
*ಜೀರಿಗೆ - 1/2 ಚಮಚ
*ಉಪ್ಪು- ರುಚಿಗೆ ತಕ್ಕಷ್ಟು ಆಹಾ, ಬಿಸಿ ಬಿಸಿಯಾದ ಸೆಟ್ ದೋಸೆ ರೆಸಿಪಿ

ಮಾಡುವ ವಿಧಾನ
1. ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹುಡಿ, ಅಕ್ಕಿ ಹುಡಿ ಮತ್ತು ಕಡಲೆ ಹಿಟ್ಟನ್ನು ಇದಕ್ಕೆ ಹಾಕಿ.
2. ಇದೀಗ, ಹೆಚ್ಚಿಟ್ಟ ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು ಮತ್ತು ಜೀರಿಗೆ ಹಾಗೂ ಉಪನ್ನು ಪಾತ್ರೆಗೆ ಹಾಕಿ.
3. ಚೆನ್ನಾಗಿ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ.
4. ಮಿಶ್ರಣವನ್ನು ಕಲಸಿಕೊಳ್ಳಲು ಬೇಕಾದಷ್ಟು ನೀರನ್ನು ಹಾಕಿ
5. ಇದೀಗ ದೋಸೆ ಕಾವಲಿ ತೆಗೆದುಕೊಂಡು ಬಿಸಿಯಾಗಲು ಬಿಡಿ
6. ಕೊಂಚ ಹೊತ್ತಿನ ಬಳಿಕ ಪ್ಯಾನ್ ಬಿಸಿಯಾದೊಡನೆ ಪ್ಯಾನ್‎ಗೆ ಎಣ್ಣೆ ಹಾಕಿ.
7. ಇನ್ನು ದೋಸೆ ಕಾವಲಿಗೆ ಹಿಟ್ಟನ್ನು ಹುಯ್ಯಿರಿ ಮತ್ತು ಎಣ್ಣೆಯನ್ನು ಹಾಕಿ.
8. 2 ನಿಮಿಷಗಳ ತರುವಾಯ ದೋಸೆಯನ್ನು ಮುಗುಚಿ, ಇದು ಕಂದು ಬಣ್ಣಕ್ಕೆ ತಿರುಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
9. ಇದು ಕೆಂಪಗೆ ಕಂದು ಬಣ್ಣಕ್ಕೆ ಬಂತು ಎಂದಾದಲ್ಲಿ, ಸರ್ವಿಂಗ್ ಪ್ಲೇಟ್‎ಗೆ ದೋಸೆಯನ್ನು ವರ್ಗಾಯಿಸಿ.

ಬಿಸಿಬಿಸಿಯಾಗಿ ತೆಂಗಿನ ಚಟ್ನಿಯೊಂದಿಗೆ ದೋಸೆಯನ್ನು ಸೇವಿಸಲು ನೀಡಿ. ಈ ತ್ವರಿತ ದೋಸೆ ರೆಸಿಪಿಯನ್ನು ತಯಾರಿಸಿಕೊಂಡು ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

English summary

Instant Dosa Recipe For Breakfast

Did you have a very tiring day last evening and could not plan a specific dish for the next morning? Relax, we have a solution for you!You don't have to go to the market to buy those extra ingredients or spices to prepare your breakfast. We have a simple and quick recipe just for you!.So, let's take a look at how to prepare an instant dosa recipe for breakfast.
X
Desktop Bottom Promotion