For Quick Alerts
ALLOW NOTIFICATIONS  
For Daily Alerts

ಯಾವ ನೂಡಲ್ಸ್ ಈ ಇಡಿಯಪ್ಪ ರುಚಿಗೆ ಸಾಟಿಯಲ್ಲ

|

ಈ ಇಡಿಯಪ್ಪ ಕರ್ನಾಟಕದಲ್ಲಿ ಅಷ್ಟೇನು ಚಿರಪರಿಚಿತವಲ್ಲ, ಆದರೆ ಕೇರಳದ ಸ್ಪೆಷಲ್ ಅಡುಗೆಗಳಲ್ಲಿ ಈ ಇಡಿಯಪ್ಪ ಕೂಡ ಒಂದಾಗಿದೆ.

ಈ ಇಡಿಯಪ್ಪದ ರುಚಿಯ ಮುಂದೆ ಯಾವ ನೂಡಲ್ಸ್ ನಿಲ್ಲುವುದಿಲ್ಲ, ಅಷ್ಟೊಂದು ರುಚಿಕರವಾಗಿರುತ್ತದೆ. ಇದನ್ನು ಮಾಡುವ ಸಾಧನ (ಇಡಿಯಪ್ಪ ಪಾತ್ರೆ ಅಥವಾ idiyappa maker)ಇದ್ದರೆ ಇದನ್ನು ಸುಲಭವಾಗಿ ಮಾಡಬಹುದು.

ಇದು ನೂಲು- ನೂಲಾಗಿರುವುದರಿಂದ ನೂಲ್ ಪುಟ್ಟು ಎಂದು ಕೂಡ ಕರೆಯುತ್ತಾರೆ. ಬನ್ನಿ ಈ ಇಡಿಯಪ್ಪ ಮಾಡುವುದು ಹೇಗೆ ಎಂದು ನೋಡೋಣವೇ?

ಬೇಕಾಗುವ ಸಾಮಾಗ್ರಿಗಳು
ಇಡಿಯಪ್ಪ ಹಿಟ್ಟು 1 ಕಪ್
ತೆಂಗಿನ ತುರಿ 1 ಕಪ್
ಬಿಸಿ ನೀರು 1 ಕಪ್
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ

ತಯಾರಿಸುವ ವಿಧಾನ:

* ಇಡಿಯಪ್ಪಾ ಹಿಟ್ಟಿಗೆ ನ ಬಿಸಿ ನೀರು ಹಾಕಿ ರುಚಿಗೆ ತಕ್ಕ ಉಪ್ಪು ಮತ್ತು ತೆಂಗಿನ ತುರಿ ಹಾಕಿ ಚೆನ್ನಾಗಿ ಕಲೆಸಿ. ಹಿಟ್ಟನ್ನು ಮೃದುವಾಗಿ ಕಲೆಸಿ.

* ಇಡಿಯಪ್ಪ ಮಾಡಲು ಒಂದು ಉಪಕರಣ ದೊರೆಯುತ್ತಾರೆ(idiyappa maker). ಕೆಳಭಾಗದಲ್ಲಿ ರಂಧ್ರಗಳಿರುವ ಕೊಳವೆಯಂತಹ ಪಾತ್ರೆಗೆ ಈ ಹಿಟ್ಟನ್ನು ಹಾಕಿ ಪ್ರೆಸ್ ಮಾಡಲು ಒಂದು ಉಪಕರಣವಿರುತ್ತದೆ. ಅದರಿಂದ ಪ್ರೆಸ್ ಮಾಡಬೇಕು. ಆಗ ನೂಲು- ನೂಲು ಆಕಾರದಲ್ಲಿ ಹಿಟ್ಟು ಬೀಳುತ್ತದೆ. ಆ ನೂಲು- ನೂಲು ಹಿಟ್ಟನ್ನು ಇಡ್ಲಿ ಪ್ಲೇಟ್ ಗೆ ಎಣ್ಣೆ ಸವರಿ ಅದರಲ್ಲಿ ಹಾಕಿ.

* ಇಡ್ಲಿ ಪಾತ್ರೆಗೆ ಅರ್ಧದಷ್ಟು ನೀರು ಹಾಕಿ ಕುದಿಸಿ, ನಂತರ ಇಡ್ಲಿ ಪ್ಲೇಟ್ ಇಟ್ಟು ಪಾತ್ರೆಯ ಬಾಯಿ ಮುಚ್ಚಿ ಇಡ್ಲಿ ಬೇಯುವಷ್ಟು ಹೊತ್ತು ಬೇಯಿಸಿ. ಇಷ್ಟು ಮಾಡಿದರೆ ಇಡಿಯಪ್ಪ ರೆಡಿಯಾಗುವುದು.

* ಈ ರೆಡಿಯಾದ ಇಡಿಯಪ್ಪವನ್ನು ತೆಂಗಿನ ಹಾಲಿಗೆ ಸ್ವಲ್ಪ ಸಕ್ಕರೆ ಹಾಕಿ ಅದರಲ್ಲಿ ಕಲೆಸಿಕೊಂಡು ತಿನ್ನಲು ತುಂಬಾ ರುಚಿಯಾಗಿರುತ್ತದೆ.

ನಾನ್ ವೆಜ್ ಜೊತೆಯಾದರೆ ಚಿಕನ್ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಸಲಹೆ

ಇಡಿಯಪ್ಪ ಹಿಟ್ಟನ್ನು ನೀವೇ ತಯಾರಿಸಬಹುದು. ಅಕ್ಕಿಯನ್ನು ತೊಳೆದು ಒಣಗಿಸಿ, ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣನೆ ಪುಡಿ ಮಾಡಿದರೆ ಇಡಿಯಪ್ಪ ಹಿಟ್ಟು ರೆಡಿ.

English summary

Idiyappam : Kerala's Famous Recipe

Today, we live in a fast pace world and everything is available readymade. The Idiyappam batter can be purchased from any local store. But, adding the essence to this Idiyappam Kerala special recipe is to be made by you.
X
Desktop Bottom Promotion