For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರಕ್ಕೆ ಬಾಳೆ ಹಣ್ಣಿನ ಪ್ಯಾನ್ ಕೇಕ್ಸ್

|

ದಿನ ಬೆಳಗ್ಗೆ ಯಾವ ತಿಂಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಅನ್ನೋ ಯೋಚನೆ ಬರುತ್ತೆ ಅಲ್ವಾ? ಇದಕ್ಕೆ ಒಂದು ಒಳ್ಳೆಯ ಆಯ್ಕೆ ಹನಿ ಬನಾನ ಪ್ಯಾನ್ ಕೇಕ್ಸ್. ಇದು ನಿಮಗೆ ಟನ್ ಗಟ್ಟಲೆ ಶಕ್ತಿಯನ್ನು ಕೊಡುತ್ತೆ ಮತ್ತು ದಿನವಿಡೀ ಚುರುಕಾಗಿಟ್ಟಿರುತ್ತೆ.
ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಹೆಚ್ಚಿರುತ್ತದೆ. ಇದರಿಂದ ನಿಮ್ಮ ದೇಹ ಸಾಕಷ್ಟು ಪ್ರಮಾಣದಲ್ಲಿ ಪೊಟ್ಯಾಶಿಯಂ ಪಡೆಯಬಹುದು.

Honey Banana Pancakes For Breakfast
ಬೇಕಾಗುವ ಸಾಮಗ್ರಿಗಳು
1. ಬಾಳೇಹಣ್ಣು- 2 (ಹೆಚ್ಚಿಕೊಳ್ಳಿ)
2. ಹಿಟ್ಟು- 125 ಗ್ರಾಂ
3. ದಾಲ್ಚಿನ್ನಿ ಪುಡಿ- 1 ಟೀಚಮಚ
4. ಬೂರಾ ಸಕ್ಕರೆ- 3 ಟೀಚಮಚ
5. ಮೊಟ್ಟೆ- 2 (ಒಡೆದಿಟ್ಟುಕೊಳ್ಳಿ)
6. ಹಾಲು- 120 ಮಿಲಿ
7. ಎಣ್ಣೆ
8. ಮೇಲೆ ಹಾಕಲು ಜೇನು ತುಪ್ಪ
ಮಾಡುವ ವಿಧಾನ
1. ಬಾಳೆಹಣ್ಣನ್ನು ಕತ್ತರಿಸಿಕೊಳ್ಳಿ.
2. ಒಂದು ಪಾತ್ರೆಗೆ ಹಿಟ್ಟು, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ ಮತ್ತು ಸಕ್ಕರೆ ಸೇರಿಸಿ ಮಿಶ್ರ ಮಾಡಿ.
3. ಈ ಮಿಶ್ರಣಕ್ಕೆ ಒಡೆದಿಟ್ಟುಕೊಂಡ ಮೊಟ್ಟೆಯ ತಿರುಳನ್ನು ಹಾಕಿ ಕಲಸಿ.
4. ನಂತರ ಅದಕ್ಕೆ ಹಾಲನ್ನು ಸೇರಿಸಿ ಒಂದು ಹದಕ್ಕೆ ಬರುವಂತೆ ನಯವಾಗಿ ಕಲಸಿಕೊಳ್ಳಿ.
5. ಈ ಮಿಶ್ರಣಕ್ಕೆ ಬಾಳೆಹಣ್ಣನ್ನು ಸೇರಿಸಿ.
6. ಹೆಂಚಿನ ಮೇಲೆ ಒಂದು ಚಮಚ ಎಣ್ಣೆ ಹಾಕಿ ಅದು ಕಾದ ನಂತರ ಕಲಸಿಟ್ಟುಕೊಂಡ ಮಿಶ್ರಣವನ್ನು ಅದರ ಮೇಲೆ ಹಾಕಿ.
7. ಅದನ್ನು ದೋಸೆಯ ಹಾಗೆ ಹೆಂಚಿನ ತುಂಬ ವೃತ್ತಾಕಾರದಲ್ಲಿ ಪಸರಿಸಿ ಕೆಂಪಾಗುವವರೆಗೆ ಸುಡಿ.
8. ದೋಸೆ ಹುಯ್ಯುವಂತೆ ಇವುಗಳನ್ನು ತಯಾರಿಸಿ ಒಂದು ಚಮಚ ಜೇನುತುಪ್ಪವನ್ನು ಎಲ್ಲದರ ಮೇಲೆ ಹಾಕಿ.
ನಿಮ್ಮ ಬೆಳಗಿನ ಉಪಹಾರ ಸವಿಯಲು ರೆಡಿ.
English summary

Honey Banana Pancakes For Breakfast

Each morning you might be wondering what to eat in order to start a healthy day. One of the best options we can give to you is honey banana pancakes. It is considered to be healthy as it will provide to you tons of energy and healthy fats to keep you active.
Story first published: Saturday, November 30, 2013, 16:20 [IST]
X
Desktop Bottom Promotion