ಹರ್ಬ್ಸ್ ಆಮ್ಲೇಟ್-ಮಕ್ಕಳ ರೆಸಿಪಿ

By:
Subscribe to Boldsky

ಸಾಕಷ್ಟು ತಾಯಿಯರಿಗೆ ತಮ್ಮ ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಎಂಬ ಚಿಂತೆ ಇರುತ್ತದೆ. ಕೆಲವು ಮಕ್ಕಳು ಬರೀ ಕರುಕಲು ತಿಂಡಿಗಳನ್ನು ಬಿಟ್ಟರೆ ಬೇರೆ ಆಹಾರಗಳನ್ನು ತಿನ್ನುವುದಿಲ್ಲ. ಆದರೆ ಈ ರೀತಿಯ ತಿಂಡಿಗಳು ಮಕ್ಕಳ ಆರೋಗ್ಯಕ್ಕೆ ಹಾಗೂ ಬೆಳವಣಿಗೆಗೆ ಒಳ್ಳೆಯದಲ್ಲ. ಆದ್ದರಿಂದ ಕುರುಕಲು ತಿಂಡಿಯಷ್ಟೇ ರುಚಿಕರವಾದ ಆರೋಗ್ಯಕರವಾದ ತಿಂಡಿಗಳನ್ನು ಮಾಡಿಕೊಡಬೇಕು.

ಅದರಲ್ಲೂ ಬೆಳಗಿನ ಬ್ರೇಕ್ ಫಾಸ್ಟ್ ಗೆ ಮೊಟ್ಟೆ ಕೊಟ್ಟರೆ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ಬುದ್ಧಿ ಶಕ್ತಿಯ ಸಾಮರ್ಥ್ಯ ಕೂಡ ಹೆಚ್ಚಾಗುತ್ತದೆ. ಆದರೆ ಮೊಟ್ಟೆಯ ಹಳದಿ ದೇಹದಲ್ಲಿ ಕೊಬ್ಬಿನಂಶ ಹೆಚ್ಚು ಮಾಡುತ್ತದೆ. ಆದ್ದರಿಂದ ಮೊಟ್ಟೆಯ ಬಿಳಿ ಹಾಗೂ ಹರ್ಬ್ಸ್ (ಗಿಡಮೂಲಿಕೆ) ಹಾಕಿ ತಯಾರಿಸುವ ಆರೋಗ್ಯಕರ ರೆಸಿಪಿ ನೀಡಲಾಗಿದೆ ನೋಡಿ:

Herbs Omelette Kids Recipe

ಬೇಕಾಗುವ ಸಾಮಾಗ್ರಿಗಳು:
* ಮೊಟ್ಟೆ 3 ( ಅದರ ಬಿಳಿ ಮಾತ್ರ ಹಾಕಬೇಕು)
* ಹಾಲು 1 ಚಮಚ
* ಕರಿ ಮೆಣಸಿನ ಪುಡಿ 1 ಚಮಚ
* ಈರುಳ್ಳಿ ಅರ್ಧ (ಚಿಕ್ಕದಾಗಿ ಕತ್ತರಿಸಿದ್ದು)
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಚಿಟಿಕೆಯಷ್ಟು ಅರಿಶಿಣ
* ಸ್ವಲ್ಪ ಪುದೀನಾ ಎಲೆ
* ರುಚಿಗೆ ತಕ್ಕ ಉಪ್ಪು
* ಆಲೀವ್ ಎಣ್ಣೆ

ತಯಾರಿಸುವ ವಿಧಾನ:

1. ಈ ಆಮ್ಲೇಟ್ ತಯಾರಿಸಲು ಮೊಟ್ಟೆಯ ಬಿಳಿ ಮಾತ್ರ ಹಾಕಿ, ನಂತರ ಅದಕ್ಕೆ ಪುದೀನಾ ಎಲೆ, ಕರಿ ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಈರುಳ್ಳಿ, ಚಿಟಿಕೆಯಷ್ಟು ಅರಿಶಿಣ, ರುಚಿಗೆ ತಕ್ಕ ಉಪ್ಪು ಹಾಕಿ ಚೆನ್ನಾಗಿ ಕದಡಬೇಕು.

2. ನಂತರ ತವಾವನ್ನು ಬಿಸಿ ಮಾಡಿ 2 ಚಮಚ ಹಾಕಿಅ ದು ಸ್ವಲ್ಪ ಬಿಸಿಯಾದಾಗ ಮೊಟ್ಟೆಯ ಮಿಶ್ರಣವನ್ನು ಹಾಕಿ ಬೇಯಿಸಿ ನಂತರ ಒಮ್ಮೆ ಮಗುಚಿ ಹಾಕಿದರೆ ಮಕ್ಕಳಿಗೆ ಕೊಡಲು ರುಚಿಕರವಾದ ಹಾಗೂ ಆರೋಗ್ಯಕರವಾದ ಹರ್ಬ್ಸ್ ಆಮ್ಲೇಟ್ ರೆಡಿ.

Story first published: Wednesday, November 21, 2012, 11:15 [IST]
English summary

Herbs Omelette Kids Recipe | Variety Of Egg Recipe | ಹರ್ಬಲ್ ಆಮ್ಲೇಟ್ ಮಕ್ಕಳ ರೆಸಿಪಿ | ಅನೇಕ ಬಗೆಯ ಮೊಟ್ಟೆಯ ರೆಸಿಪಿ

When use only the white portion of egg in an omelette recipe, you get white omelette. It is one of the healthiest and easiet breakfast recipes. Most people find white omelettes very drab but you make it taste delicious by adding a variety of herbs.
Please Wait while comments are loading...
Subscribe Newsletter