For Quick Alerts
ALLOW NOTIFICATIONS  
For Daily Alerts

ಮಕ್ಕಳ ಸ್ವಾಸ್ಥ್ಯಕ್ಕಾಗಿ ಆರೋಗ್ಯಕರ ಮೆಕ್ಕೆಜೋಳದ ಇಡ್ಲಿ

By Staff
|

ಈಗತಾನೇ ಅಂಬೆಗಾಲಿಕ್ಕುತ್ತಿರುವ ಮಕ್ಕಳಿಗೆ ಹಾಲಿನ ಜೊತೆಗೆ ಸ್ವಲ್ಪ ಹೆಚ್ಚಿನ ಪೌಷ್ಟಿಕಾಂಶಗಳಿರುವ ಆಹಾರದ ಅಗತ್ಯವಿದೆ. ಇದಕ್ಕೆ ಮೆಕ್ಕೆಜೋಳ ಅತ್ಯಂತ ಸಮರ್ಪಕವಾದ ಆಹಾರವಾಗಿದೆ. ಆದರೆ ಇದನ್ನು ಪಾಯಸದ ರೂಪದಲ್ಲಿ ನೀಡಿದರೆ ಮಕ್ಕಳು ಅಷ್ಟು ಇಷ್ಟಪಡುವುದಿಲ್ಲ. ಬದಲಿಗೆ ಇದರ ಇಡ್ಲಿಯನ್ನು ಮಾಡಿ ತಿನ್ನಿಸಿದರೆ ಇಷ್ಟಪಟ್ಟು ತಿನ್ನುತ್ತವೆ. ಇದೇ ಆಹಾರವನ್ನು ಮನೆಯ ವೃದ್ಧರಿಗೂ ನೀಡಬಹುದು.

ಇದರಲ್ಲಿರುವ ಹೆಚ್ಚಿನ ಪ್ರೋಟೀನ್ ಮತ್ತು ಪೋಷಕಾಂಶಗಳು ಮಗುವಿನ ಬೆಳವಣಿಗೆಗೆ ಸಹಕಾರಿಯಾಗಿದೆ ಹಾಗೂ ಕಲಿಯುವಿಕೆಯಲ್ಲಿಯೂ ನೆರವಾಗುತ್ತದೆ. ಮಗುವಿನ ಮತ್ತು ತಾಯಿಯ ನಡುವಣ ಬಾಂಧವ್ಯವನ್ನು ಬೆಸೆಯುವಲ್ಲಿ ಈ ಇಡ್ಲಿ ಒಂದು ಸೇತುವೆಯಂತಿದ್ದು ಇದನ್ನು ಪ್ರಸ್ತುತಪಡಿಸಲು ಬೋಲ್ಡ್ ಸ್ಕೈ ಹೆಮ್ಮೆ ಪಡುತ್ತಿದೆ. ಈ ಇಡ್ಲಿ ತಯಾರಿಸುವ ವಿಧಾನವನ್ನು ನೋಡೋಣ... ಹೊಸರುಚಿ : ಸೌತೆಕಾಯಿ ಇಡ್ಲಿ

*ಪ್ರಮಾಣ: ಮೂರು ಬಾರಿ ಉಣಿಸುವಷ್ಟು
*ತಯಾರಿಸಲು ಹಿಡಿಯುವ ಸಮಯ: ಹದಿನೈದು ನಿಮಿಷಗಳು
*ಬೇಯಲು ಅಗತ್ಯವಾದ ಸಮಯ: ಇಪ್ಪತ್ತು ನಿಮಿಷಗಳು

ಅಗತ್ಯ ಸಾಮಾಗ್ರಿಗಳು
*ಮೆಕ್ಕೆ ಜೋಳ: ಒಂದೂವರೆ ಕಪ್
+ಉದ್ದಿನ ಬೇಳೆ : ಮುಕ್ಕಾಲು ಕಪ್
*ಹುರಿದ ಕಡ್ಲೆಬೇಳೆ: ಒಂದು ದೊಡ್ಡ ಚಮಚ
*ಹಸಿ ಮೆಣಸು: ಐದು
*ತುರಿದ ತೆಂಗಿನಕಾಯಿ: ಎರಡು ದೊಡ್ಡ ಚಮಚ
*ಸಾಸಿವೆ: ಒಂದು ಚಿಕ್ಕ ಚಮಚ
*ಇಂಗು: ಅರ್ಧ ಚಿಕ್ಕ ಚಮಚ
*ಕೊತ್ತಂಬರಿ ಸೊಪ್ಪು-ಚಿಕ್ಕದಾಗಿ ಹೆಚ್ಚಿದ್ದು-ಒಂದು ಚಿಕ್ಕ ಚಮಚ
*ಎಣ್ಣೆ- ಎರದು ಚಿಕ್ಕ ಚಮಚ
*ಉಪ್ಪು -ರುಚಿಗೆ ತಕ್ಕಷ್ಟು

ವಿಧಾನ:
1) ಮೆಕ್ಕೆಜೋಳ, ಉದ್ದಿನ ಬೇಳೆಗಳನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ
2) ಬಳಿಕ ನೀರನ್ನು ಸೋಸಿ ಹುರಿದ ಕಡಲೆ ಬೇಳೆ ಮತ್ತು ಹಸಿಮೆಣಸಿನೊಂದಿಗೆ ರುಬ್ಬಿಕೊಳ್ಳಿ
3) ಇಡ್ಲಿಯ ಹದಕ್ಕೆ ಬರುವವರೆಗೂ ನುಣ್ಣಗೆ ರುಬ್ಬಿ
4) ಈಗ ತೆಂಗಿನ ತುರಿ, ಉಪ್ಪು ಹಾಕಿ ಕಲಸಿ
5) ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಸಾಸಿವೆ ಸಿಡಿಸಿ, ಇಂಗು ಸೇರಿಸಿ
6) ಈ ಒಗ್ಗರಣೆಗೆ ರುಬ್ಬಿದ ಹಿಟ್ಟನ್ನು ಹಾಕಿ ಕೊತ್ತಂಬರಿ ಸೊಪ್ಪನ್ನು ಸೇರಿಸಿ ದೊಡ್ಡ ಮತ್ತು ಅಗಲವಾದ ಚಮಚದಿಂದ ಚೆನ್ನಾಗಿ ಕಲಸಿ.
7) ಈ ಹಿಟ್ಟನ್ನು ಇಡ್ಲಿಪಾತ್ರೆಯಲ್ಲಿ ಹಾಕಿ ಬೇಯಿಸಿ.
8) ಬೆಂದ ಬಳಿಕ ಇಳಿಸಿ ಬಿಸಿಯಿರುವಾಗಲೇ ಬಡಿಸಿ

ಸಲಹೆ
1)ಮೆಕ್ಕೆಜೋಳದಲ್ಲಿ ಎಳ್ಳಷ್ಟೂ ಕೊಲೆಸ್ಟ್ರಾಲ್ ಇಲ್ಲದಿರುವುದರಿಂದ ಮಧುಮೇಹಿಗಳಿಗೆ ಮತ್ತು ಅತಿ ಒತ್ತಡದಿಂದ ಬಳಲುತ್ತಿರುವವರಿಗೆ ಸೂಕ್ತವಾಗಿದೆ.
2) ಉತ್ತಮ ಫಲಿತಾಂಶಕ್ಕಾಗಿ ಇಡ್ಲಿಯ ಹಿಟ್ಟು ತಯಾರಾದ ತಕ್ಷಣ ಇಡ್ಲಿ ಪಾತ್ರೆಯಲ್ಲಿ ಬೇಯಲು ಇಡಿ. ತಡವಾದಷ್ಟೂ ಇಡ್ಲಿ ಹೆಚ್ಚು ಧೃಢವಾಗುತ್ತಾ ಹೋಗುತ್ತದೆ.

English summary

Healthy Corn Idli Recipe For Toddlers

Corn is one of those few ingredients most kids love. To make this morning a special one for them, try out this yummy and easy corn idli recipe. The best thing about this treat is that even the old folk in your home can indulge into it with ease.
X
Desktop Bottom Promotion