For Quick Alerts
ALLOW NOTIFICATIONS  
For Daily Alerts

ಇಡ್ಲಿಯಲ್ಲಿ ಹೊಸ ರುಚಿ ಬೇಕೆನ್ನುವವರಿಗಾಗಿ-ಬಟಾಣಿ ಇಡ್ಲಿ

|

ಇಡ್ಲಿ ದಕ್ಷಿಣ ಭಾರತದ ಫೇಮಸ್ ಅಡುಗೆಗಳಲ್ಲಿ ಒಂದು. ಇದನ್ನು ಅನೇಕ ರುಚಿಯಲ್ಲಿ ತಯಾರಿಸುತ್ತಾರೆ. ಸಾಮಾನ್ಯವಾಗಿ ಸಾಮಾನ್ಯ ಇಡ್ಲಿ ಅಥವಾ ರವೆ ಇಡ್ಲಿಯನ್ನು ಮಾಡುತ್ತೇವೆ. ಈ ಎರಡು ರುಚಿಯನ್ನು ಹೊರತು ಪಡಿಸಿ ಹೊಸ ರುಚಿ ಬೇಕೆನ್ನುವವರು ಬಟಾಣಿ ಇಡ್ಲಿಯನ್ನು ಟ್ರೈ ಮಾಡಬಹುದು.

ಬಟಾಣಿಯನ್ನು ಬೇಯಿಸಿ ರುಬ್ಬಿ ಮಾಡುವ ಈ ಇಡ್ಲಿ ತಿನ್ನಲು ಸ್ವಾದಿಷ್ಟವಾಗಿರುತ್ತದೆ.

Green Peas Idli With Mint Chutney

ಬೇಕಾಗುವ ಸಾಮಾಗ್ರಿಗಳು
ರವೆ 2 ಕಪ್
ಬಟಾಣಿ 1 ಕಪ್ (ನೀರಿನಲ್ಲಿ ನೆನೆ ಹಾಕಿರಬೇಕು)
ಮೆಂತೆ ಸೊಪ್ಪು 1 ಚಿಕ್ಕ ಕಟ್ಟು
ಮೊಸರು ಅರ್ಧ ಕಪ್
ಓಟ್ಸ್ ಚಮಚ(ಬೇಕಿದ್ದರೆ ಹಾಕಬಹುದು)
ಹಾಗಲಕಾಯಿ ಸಿಪ್ಪೆ 2 ಚಮಚ (ಬೇಕಿದ್ದರೆ ಹಾಕಬಹುದು)
ಹಸಿ ಮೆಣಸಿನಕಾಯಿ 2(ಪೇಸ್ಟ್ ಮಾಡಬೇಕು)
ರುಚಿಗೆ ತಕ್ಕ ಉಪ್ಪು

ಚಟ್ನಿ ಮಾಡಲು ಸಾಮಾಗ್ರಿಗಳು

ಮೊಸರು 2 ಕಪ್
ಕತ್ತರಿಸಿದ ಸ್ಟ್ರಾಬರಿ 1 ಕಪ್ ( ಬೇಕಿದ್ದರೆ ಹಾಕಬಹುದು)
ಜೇನು 3 ಚಮಚ
ಪುದೀನಾ ಎಲೆ 1 ಕಟ್ಟು
ರುಚಿಗೆ ತಕ್ಕ ಉಪ್ಪು
ಕರಿ ಮೆಣಸಿನ ಪುಡಿ 1 ಚಮಚ
ಸ್ವಲ್ಪ ಕರಿಬೇವಿನ ಎಲೆ
ಸ್ವಲ್ಪ ಸಾಸಿವೆ
1 ಚಮಚ ಎಣ್ಣೆ

ಚಟ್ನಿ ಮಾಡುವ ವಿಧಾನ
ಎಲ್ಲಾ ಸಾಮಾಗ್ರಿಗಳನ್ನು ಹಾಕಿ ಮಿಕ್ಸಿಯಲ್ಲಿ ಹಾಕಿ ರುಬ್ಬಿದರೆ ಚಟ್ನಿ ರೆಡಿ. ಇದಕ್ಕೆ ಒಗ್ಗರಣೆ ಕೊಡಿ.

ಇಡ್ಲಿ ಮಾಡುವ ವಿಧಾನ:
* ಬಟಾಣಿಯನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿ.

* ಈಗ ರವೆಯನ್ನು ಪಾತ್ರೆಯಲ್ಲಿ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿ, ಮೆಂತೆ ಸೊಪ್ಪು, ರುಬ್ಬಿದ ಬಟಾಣಿ, ಹಾಗಾಲಕಾಯಿ ಸಿಪ್ಪೆ, ಓಟ್ಸ್, ಶುಂಠಿ ಮತ್ತು ಮೆಣಸಿನಕಾಯಿ ಪೇಸ್ಟ್ ಹಾಕಿ ಚೆನ್ನಾಗಿ ಕಲೆಸಿ. ನಂತರ ಮೊಸರು ಹಾಕಿ ಕಲೆಸಿ. 10-15 ನಿಮಿಷ ಇಡಿ.

* ನಂತರ ಮಿಶ್ರಣವನ್ನು ಇಡ್ಲಿ ಪಾತ್ರೆಗೆ ಬೇಯಿಸಿದರೆ ಬಟಾಣಿ ಇಡ್ಲಿ ರೆಡಿ. ಇದನ್ನು ಮೇಲೆ ಹೇಳಿದ ರೀತಿಯಲ್ಲಿ ಚಟ್ನಿ ತಯಾರಿಸಿ ಅದರ ಜೊತೆ ತಿಂದರೆ ಸೂಪರ್ ಆಗಿರುತ್ತದೆ.

English summary

Green Peas Idli With Mint Chutney | Variety Of Breakfast Recipe |ಪುದೀನಾ ಚಟ್ನಿ ಜೊತೆ ಬಟಾಣಿ ಇಡ್ಲಿ ಸವಿದು ನೋಡಿ | ಅನೇಕ ಬಗೆಯ ಬ್ರೇಕ್ ಫಾಸ್ಟ್ ರೆಸಿಪಿ

Green peas idli, basically made of green vegetables like peas, bitter gourd and mint leaves provides not just taste but also provides proper nutrition. Moreover, is also good for the overall health.
X
Desktop Bottom Promotion