For Quick Alerts
ALLOW NOTIFICATIONS  
For Daily Alerts

ಬ್ರೇಕ್ ಫಾಸ್ಟ್ ಕಂ ಸ್ನ್ಯಾಕ್ಸ್- ಬಟಾಣಿ ಕಟ್ಲೇಟ್

|

ಹಸಿ ಬಟಾಣಿಯಿಂದ ಕಟ್ಲೇಟ್ ತಿನ್ನಲು ತುಂಬಾ ರುಚಿಯಾಗಿರುತ್ತದೆ. ಎಣ್ಣೆ ಸ್ವಲ್ಪ ಬಳಸಿ ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಇದನ್ನು ಬೆಳಗ್ಗಿನ ತಿಂಡಿಯಾಗಿ ಕೂಡ ತಿನ್ನಬಹುದು, ಮಕ್ಕಳಿಗೆ ಸ್ನ್ಯಾಕ್ಸ್ ಡಬ್ಬಿಯಲ್ಲಿ ಕೂಡ ತುಂಬಿ ಕಳುಹಿಸಬಹುದು.

ಹಸಿ ಬಟಾಣಿಯಿಂದ ಕಟ್ಲೇಟ್ ಮಾಡುವ ವಿಧಾನ ಸುಲಭವಾಗಿದ್ದು ರೆಸಿಪಿ ನೋಡಿ ಇಲ್ಲಿದೆ.

Green Peas Cutlet

ಬೇಕಾಗುವ ಸಾಮಾಗ್ರಿಗಳು
ಹಸಿ ಬಟಾಣಿ 1 ಕಪ್
ಅಕ್ಕಿ ಹಿಟ್ಟು ಅರ್ಧ ಕಪ್
ಕಡಲೆ ಹಿಟ್ಟು ಅರ್ಧ ಕಪ್
ಅರಿಶಿಣ ಪುಡಿ 1/4 ಚಮಚ
ಹಸಿ ಮೆಣಸಿನ ಕಾಯಿ 1 ಚಮಚ
ಎಣ್ಣೆ
ಪನ್ನೀರ್ 1/4 ಕಪ್
ತುರಿದ ಕ್ಯಾರೆಟ್ ಅರ್ಧ ಕಪ್
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ

* ಹಸಿ ಬಟಾಣಿಯಲ್ಲಿ 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ, ಅದನ್ನು ಎರಡು ವಿಷಲ್ ವರೆಗೆ ಬೇಯಿಸಿ. ನಂತರ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ, ಸ್ವಲ್ಪ ತರಿತರಿಯಾಗಿ ಇರುವಂತೆ ರುಬ್ಬಿ ಒಂದು ಬಟ್ಟಲಿಗೆ ಹಾಕಿ.

* ಆ ಬಟ್ಟಲಿಗೆ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಅರಿಶಿಣ ಪುಡಿ, ಹಸಿ ಮೆಣಸಿನ ಕಾಯಿ ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ, ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲೆಸಿ.

* ಈಗ ಅವುಗಳಿಂದ ಚಿಕ್ಕ, ಚಿಕ್ಕ ಉಂಡೆ ಕಟ್ಟಿ ಕಟ್ಲೇಟ್ ಗೆ ತಟ್ಟುವ ರೀತಿಯಲ್ಲಿ ತಟ್ಟಿ.

* ಈಗ ತವಾವನ್ನು ಉರಿ ಮೇಲೆಟ್ಟು ಅದಕ್ಕೆ ಎಣ್ಣೆ ಸವರಿ ಬಿಸಿ ಮಾಡಿ ಅದರಲ್ಲಿ ತಟ್ಟಿದ ಹಿಟ್ಟನ್ನು ಹಾಕಿ, ತವಾದ ಬಾಯಿಯನ್ನು ಮುಚ್ಚಿ 2 ನಿಮಿಷ ಬೇಯಿಸಿ. ನಂತರ ಆ ಕಟ್ಲೇಟ್ ಅನ್ನು ಮಗುಚಿ ಹಾಕಿ. ಎರಡೂ ಕಡೆ ಕಂದು ಬಣ್ಣದ ಮೇಲೆ ಒಂದು ಬದಿಯ ಮೇಲೆ ಪನ್ನೀರ್, ಕ್ಯಾರೆಟ್ ಉದುರಿಸಿದರೆ ಹಸಿ ಬಟಾಣಿಯ ಕಟ್ಲೇಟ್ ರೆಡಿ.

English summary

Green Peas Cutlet | Variety Of Snacks Recipe | ಹಸಿ ಬಟಾಣಿಯ ಕಟ್ಲೇಟ್ | ಅನೇಕ ಬಗೆಯ ತಿಂಡಿಯ ರೆಸಿಪಿ

Green peas cutlet is an ideal morning snack which boosts up high folic acid and fibre. These nutritional values makes green peas pancakes one of the most sought out breakfast recipes for people who are health conscious.
X
Desktop Bottom Promotion