For Quick Alerts
ALLOW NOTIFICATIONS  
For Daily Alerts

ಅಡುಗೆ ಮನೆಯಲ್ಲಿ ಅರಳಿದ ಘಮ್ಮೆನ್ನುವ ಓಟ್ಸ್ ಇಡ್ಲಿ

By manu
|

ಓಟ್ಸ್ ನಮ್ಮ ಉಪಾಹಾರದಲ್ಲಿ ನುಸುಳಿ ಹೆಚ್ಚು ಸಮಯವಾಗಿಲ್ಲ, ಆಗಲೇ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡುಬಿಟ್ಟಿದೆ. ಬೆಳಿಗ್ಗೆ ಕಚೇರಿಗೆ ಹೊರಡುವ ಧಾವಂತದಲ್ಲಿ ಬೇಗನೇ ತಯಾರಿಸಬಹುದಾದ, ಸ್ವಾದಿಷ್ಟ ಮತ್ತು ಪೌಷ್ಠಿಕವಾದ ಆಹಾರವಾದುದರಿಂದ ಯುವಜನತೆಗಂತೂ ಅನಿವಾರ್ಯವಾದ ಉಪಾಹಾರವಾಗಿಬಿಟ್ಟಿದೆ. ಅಲ್ಲದೇ ಮಧ್ಯಾಹ್ನದ ಊಟದವರೆಗೂ ಅಗತ್ಯವಾದ ಶಕ್ತಿ ನೀಡುವ ಮೂಲಕ ಹಾಗೂ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ.

ಅಷ್ಟೇ ಏಕೆ, ಇದು ನಿಧಾನವಾಗಿ ಜೀರ್ಣವಾಗುವ ಕಾರಣ ದೇಹಕ್ಕೆ ನಿಧಾನವಾಗಿ ಶಕ್ತಿಯನ್ನು ನೀಡುತ್ತಾ ಹೆಚ್ಚು ಹೊತ್ತು ಚಟುವಟಿಕೆಯಿಂದಿರಲು ನೆರವಾಗುತ್ತದೆ. ಇದರಿಂದ ಮಧ್ಯಾಹ್ನದವರೆಗೂ ಹಸಿವಾಗದೇ ಅನಗತ್ಯವಾಗಿ ತೂಕವನ್ನು ಹೆಚ್ಚಿಸಲು ಕಾರಣವಾಗುವ ಇತರ ಆಹಾರಗಳನ್ನು ತಿನ್ನುವ ಬಯಕೆ ಮೂಡದೇ ತನ್ಮೂಲಕ ತೂಕವನ್ನು ಹೆಚ್ಚಿಸದಿರಲು ನೆರವಾಗುತ್ತದೆ. ಬಿಸಿ ಬಿಸಿ ಮಸಾಲ ರವೆ ಇಡ್ಲಿ

ಆದರೆ ಬರೆಯ ಓಟ್ಸ್ ಅನ್ನು ಹಾಲಿನಲ್ಲಿ ಮುಳುಗಿಸಿ ತಿನ್ನುವುದಕ್ಕಿಂತ ದೋಸೆ ಅಥವಾ ಇಡ್ಲಿಯ ರೂಪದಲ್ಲಿ ಸೇವಿಸಿದರೆ ಇನ್ನಷ್ಟು ಪೌಷ್ಠಿಕ ಮತ್ತು ರುಚಿಕರವಾಗಿರುತ್ತದೆ. ಮಕ್ಕಳಂತೂ ಈ ಇಡ್ಲಿಯನ್ನು ಇನ್ನಿಲ್ಲದಷ್ಟು ಇಷ್ಟಪಡುತ್ತಾರೆ. ಇದರ ಉತ್ತಮ ಗುಣವೆಂದರೆ ಇದನ್ನು ಚಟ್ನಿ, ಸಾಂಬಾರ್, ಚಟ್ನಿಪುಡಿ, ಸಕ್ಕರೆ, ಬೆಲ್ಲ, ಜೇನು, ಜಾಮ್ ಅಷ್ಟೇ ಏಕೆ, ಹಾಲು ಮತ್ತು ಮೊಸರಿನ ಜೊತೆಗೂ ಸೇವಿಸಬಹುದು. ಅತಿಥಿಗಳಿಗೆ ಇದನ್ನು ಓಟ್ಸ್ ನಿಂದ ಮಾಡಿದ್ದು ಎಂದು ಹೇಳಿದ ಹೊರತು ಅವರು ಇದನ್ನು ಅಕ್ಕಿಯಿಂದಲೇ ತಯಾರಿಸಿದ್ದು ಎಂಬ ತೀರ್ಮಾನಕ್ಕೆ ಬಂದುಬಿಡುತ್ತಾರೆ. ರುಚಿಕರವಾದ ಉಬ್ಬಿದ ಓಟ್ಸ್ ಇಡ್ಲಿ ಮಾಡುವ ಬಗೆಯನ್ನು ಕೆಳಗೆ ವಿವರಿಸಲಾಗಿದೆ:

Fluffy Oats Idli Recipe For Breakfast

ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಇಪ್ಪತ್ತು ನಿಮಿಷಗಳು. ಮೆಂತ್ಯ ಇಡ್ಲಿ ಜೊತೆ ಹುರಿದ ಬೇಳೆ ಸಾಂಬಾರ್

ಅಗತ್ಯವಿರುವ ಸಾಮಾಗ್ರಿಗಳು:
*ಓಟ್ಸ್ - ಕಾಲು ಕಪ್
*ಉದ್ದಿನ ಬೇಳೆ - ಒಂದು ಕಪ್
*ಉಪ್ಪು-ರುಚಿಗನುಸಾರ
*ಶುಂಠಿಯ ಪೇಸ್ಟ್ - ಅರ್ಧ ಚಿಕ್ಕಚಮಚ
*ಹಸಿಮೆಣಸಿನ ಪೇಸ್ಟ್ - ಒಂದು ಚಿಕ್ಕ ಚಮಚ
*ಸವರಲು ಎಣ್ಣೆ - ಕಾಲು ಚಮಚ ಅಥವಾ ಅಗತ್ಯಕ್ಕೆ ತಕ್ಕಂತೆ
*ನೀರು - ಒಂದೂವರೆ ಕಪ್

ವಿಧಾನ:
1) ಓಟ್ಸ್ ಮತ್ತು ಉದ್ದಿನ ಬೇಳೆಯನ್ನು ಒಣದಾಗಿರುವಂತೆಯೇ ಮಿಕ್ಸಿಯ ಚಿಕ್ಕ ಜಾರ್ ನಲ್ಲಿ ನುಣ್ಣಗೆ ಪುಡಿಮಾಡಿ
2) ಇದಕ್ಕೆ ನೀರು ಹಾಕಿ ಕಲಕಿ ನುಣ್ಣನೆಯ ಮಿಶ್ರಣ ತಯಾರಿಸಿ. ಇದಕ್ಕೆ ಉಪ್ಪು ಮತ್ತು ಹಸಿಮೆಣಸಿನ ಪೇಸ್ಟ್ ಸೇರಿಸಿ ಕಲಕಿ. ಇದು ಸುಮಾರು ಇಡ್ಲಿಹಿಟ್ಟಿನ ಹದಕ್ಕೆ ಬರಬೇಕು.
3) ಈ ಪಾತ್ರೆಯನ್ನು ಸುಮಾರು ಒಂದು ಘಂಟೆ ಕಾಲ ಮುಚ್ಚಿಡಿ.
4) ಒಂದು ಗಂಟೆಯ ಬಳಿಕ ಇಡ್ಲಿಪಾತ್ರೆಯ ಲೋಟ (ಅಥವಾ ಅಚ್ಚು) ಗಳ ಒಳಭಾಗಕ್ಕೆ ಕೊಂಚ ಎಣ್ಣೆ ಸವರಿ ಪ್ರತಿ ಅಚ್ಚಿನಲ್ಲಿಯೂ ತುಂಬುವಷ್ಟು ಹಿಟ್ಟನ್ನು ತುಂಬಿ.
5) ಇಡ್ಲಿಗಳನ್ನು ಇಡ್ಲಿಪಾತ್ರೆಯಲ್ಲಿ ಸುಮಾರು ಎಂಟರಿಂದ ಹತ್ತು ನಿಮಿಷಗಳವರೆಗೆ ಹಬೆಯಲ್ಲಿ ಬೇಯಿಸಿ.
6) ಅಚ್ಚುಗಳಿಂದ ಹೊರತೆಗೆದ ಇಡ್ಲಿಗಳನ್ನು ಬಿಸಿಬಿಸಿಯಿರುವಂತೆಯೇ ಬಡಿಸಿ, ಮೆಚ್ಚುಗೆ ಗಳಿಸಿ.

ಸಲಹೆ:
ಇದು ಅಪ್ಪಟ ಸಸ್ಯಾಹಾರಿಯಾದುದರಿಂದ ಮತ್ತು ಸುಲಭವಾಗಿ ಜೀರ್ಣವಾಗುವ ಕಾರಣ ಎಲ್ಲಾ ವಯಸ್ಸಿನವರಿಗೆ ಹಾಗೂ ಅಶಕ್ತರು, ರೋಗಿಗಳಿಗೂ ಸೂಕ್ತವಾಗಿದೆ. ಹೆಚ್ಚಿನ ರುಚಿಗಾಗಿ ಕೊತ್ತಂಬರಿ ಸೊಪ್ಪಿನ ಕೆಲವು ಎಲೆಗಳನ್ನೂ ಚಿಕ್ಕದಾಗಿ ಹೆಚ್ಚಿ ಸೇರಿಸಬಹುದು.

English summary

Fluffy Oats Idli Recipe For Breakfast

Oats idli is simple to make and one will not even find the difference when compared to rice idli. The best thing about oats idly is that it you can enjoy it with any side chutney. To prepare the oats idli, you will need a lot of time on your hands. Here is the oats idli recipe, take a look:
X
Desktop Bottom Promotion