For Quick Alerts
ALLOW NOTIFICATIONS  
For Daily Alerts

ಆಲೂ ಪರೋಟ, ಆಹಾ ಎಂಥ ರುಚಿ ಅಂತೀರಾ...

By Jayasubramanya
|

ಭೂಮಿಯ ಮೇಲಿರುವ ಬೇರೆ ಎಲ್ಲಾ ಜೀವಿಗಳಿಗೆ ಹೋಲಿಸಿ ನೋಡಿದಾಗ ತಿನ್ನುವ ವಿಷಯದಲ್ಲಿ ಮಾನವರದು ಎತ್ತಿದ ಕೈ. ಏಕೆಂದರೆ ನಿತ್ಯವೂ ಒಂದೇ ಬಗೆಯ ಆಹಾರವನ್ನು ನಾವು ಸೇವಿಸಲಾರೆವು ಮತ್ತು ಬೇರೆ ಬೇರೆ ರುಚಿಗಳನ್ನು ನಾಲಗೆಗೆ ದಯಪಾಲಿಸುವ ತಿಂಡಿಪೋತರು. ಅದು ಮಾಂಸಾಹಾರವೇ ಆಗಿರಲಿ ಸಸ್ಯಾಹಾರವೇ ಆಗಿರಲಿ ನಾವಂತೂ ಬಾಯಲ್ಲಿ ನೀರೂರಿಸುವ ಖಾದ್ಯಗಳ ರುಚಿ ಸವಿಯಲು ಯಾವಾಗಲೂ ತಯಾರಾಗಿರುತ್ತೇವೆ.

ಭಾರತೀಯ ಪಾಕ ಪ್ರಪಂಚ ಹೆಚ್ಚು ವೈವಿಧ್ಯಮಯವಾಗಿರುವಂತಹದ್ದು. ಹೊರದೇಶಗಳಲ್ಲಿ ಪಿಜ್ಜಾ, ಬರ್ಗರ್, ಹಾಟ್ ಡಾಗ್ಸ್, ಫಿಂಗರ್ ಚಿಪ್ಸ್ ಫೇಮಸ್ ಎಂದೆನಿಸಿದ್ದರೆ ನಮ್ಮದು ಒಂದೇ ಬಗೆಯಲ್ಲಿ ಹಲವು ವೈವಿಧ್ಯಗಳನ್ನು ತೋರಿಸುವಂತಹ ರುಚಿಯ ಜಗತ್ತಾಗಿದೆ. ವಿದೇಶದಲ್ಲಿ ವಾಸಿಸುವವರಿಗೂ ಕೂಡ ಅಲ್ಲಿನ ಕೊಬ್ಬಿನ ಆಹಾರ ತಿಂದು ನಾಲಗೆ ಜಡ್ಡುಗಟ್ಟಿದೆ ಎಂದು ಹೇಳಿ ಭಾರತೀಯ ತಿಂಡಿಗಳ ರುಚಿ ನೋಡಿ ಆಹಾ ಎಂದು ಹೊಗಳಿದ ಸಾಕಷ್ಟು ಉದಾಹರಣೆಗಳಿವೆ.

ಪ್ರತಿಯೊಂದು ಹಬ್ಬಕ್ಕೂ ವಿಧ ವಿಧ ಬಗೆಯ ಸಿಹಿ, ಖಾರ, ಅನ್ನಗಳ ಭಕ್ಷ್ಯ ಭೋಜನಗಳನ್ನು ನಾವು ಸಿದ್ಧಪಡಿಸುತ್ತೇವೆ. ಗೊಜ್ಜನ್ನ ಚಿತ್ರಾನ್ನ, ಮೊಸರನ್ನ, ಹುಳಿಯನ್ನು ಪುಳಿಯೊಗರೆ ಹೀಗೆ ಖಾರದಿಂದ ಹಿಡಿಸು ಸಿಹಿಗಳಾದ ಪಾಯಸ, ಕೇಸರಿ ಬಾತ್, ಹಲ್ವಾ, ರಸಾಯನ, ಮೈಸೂರ್ ಪಾಕ್, ಜಿಲೇಬಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹೀಗೆ ಬಗೆ ಬಗೆಯ ಖಾದ್ಯಗಳನ್ನು ಮಾಡಿ ಉಣಬಡಿಸಿ ಮೆಚ್ಚುಗೆಗಳಿಸಿಕೊಳ್ಳಲು ನಾವು ಯಾವಾಗಲೂ ರೆಡಿ!!! ಪರೋಟದಲ್ಲಿ ಭಿನ್ನ ರುಚಿ-ಕಾರ್ನ್ ಪರೋಟ

Fastest Way To Make Aloo Parathas!

ಇಂದಿನ ಲೇಖನದಲ್ಲಿ ಉತ್ತರ ಭಾರತದಲ್ಲಿ ಕೊಂಚ ಹೆಸರುವಾಸಿಯಾಗಿರುವ ಆಲೋ ಪರೋಟಾ ರೆಸಿಪಿಯನ್ನು ನಾವು ಓದುಗರ ಮುಂದಿಡುತ್ತಿದ್ದೇವೆ. ದಕ್ಷಿಣದಲ್ಲಿ ದೋಸೆ, ಇಡ್ಲಿ ಹೇಗೆ ಖ್ಯಾತಿಯನ್ನು ಪಡೆದುಕೊಂಡಿದೆಯೋ ಅಂತೆಯೇ ಉತ್ತರದಲ್ಲಿ ಆಲೂ ಪರೋಟಾ ಅಲ್ಲಿನವರಿಗೆ ಹೆಚ್ಚು ಪ್ರಿಯವಾದುದು. ಆಲೂಗಡ್ಡೆ ಪಲ್ಯದೊಂದಿಗೆ ತಯಾರು ಮಾಡಲಾದ ಈ ಪರೋಟಾ ರೆಸಿಪಿ ಆರೋಗ್ಯಕರ ಬ್ರೇಕ್ ಫಾಸ್‌ನಂತೆ ಕೂಡ ಸೇವಿಸಬಹುದು ಮಧ್ಯಾಹ್ನದೂಟಕ್ಕೂ ಓಕೆಯಾಗಿರುವಂತಹದ್ದು, ಹಾಗಿದ್ದರೆ ಅತಿ ಸರಳ ವಿಧಾನದಲ್ಲಿ ಆಲೂ ಪರೋಟಾವನ್ನು ತಯಾರು ಮಾಡುವುದು ಹೇಗೆ ಎಂಬುದನ್ನು ತಿಳಿಸಲಿದ್ದೇವೆ. ಈವತ್ತಿನ ಸ್ಪೆಷಲ್‌ ಕ್ಯಾರೆಟ್ ಪರೋಟ

ಬೇಕಾಗುವ ಸಾಮಾಗ್ರಿಗಳು
*3-4 ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆ
*1 ಅಥವಾ 2 ಹಸಿಮೆಣಸು
*1/2 ಚಮಚ ಮೆಣಸಿನ ಹುಡಿ
*1/2 ಚಮಚ ಅಮೆಚೂರ್ ಹುಡಿ
*2 ರಿಂದ 3 ಚಮಚ ಕೊತ್ತಂಬರಿ ಸೊಪ್ಪು ಸಣ್ಣಗೆ ಹೆಚ್ಚಿದ್ದು
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ ಅಥವಾ ತುಪ್ಪ ಪರೋಟಾ ಬೇಯಿಸಲು

ಪರೋಟಾ ತಯಾರಿಗೆ
*2 ಕಪ್ ಗೋಧಿ ಹಿಟ್ಟು
*1/2 ಚಮಚ ಉಪ್ಪು
*1-2 ಚಮಚ ತುಪ್ಪ ಅಥವಾ ಎಣ್ಣೆ
*ಹಿಟ್ಟು ಕಲಸಲು ಸಾಕಷ್ಟು ನೀರು
*ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದಿಟ್ಟುಕೊಳ್ಳಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಹಸನಾಗಿಸಿಕೊಳ್ಳಿ
* ಆಲೂಗಡ್ಡೆಯನ್ನು ಚೆನ್ನಾಗಿ ಹಿಸುಕಿಕೊಂಡಿರಿ ಯಾವುದೇ ಗಂಟುಗಳಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
* ಇದೀಗ ಸಣ್ಣಗೆ ಹೆಚ್ಚಿದ ಹಸಿಮೆಣಸನ್ನು, ಗರಮ್ ಮಸಾಲಾ ಪೌಡರ್, ಮೆಣಸಿನ ಹುಡಿ, ಅಮೆಚೂರ್ ಹುಡಿ ಮತ್ತು ಉಪ್ಪನ್ನು ಆಲೂ ಪಲ್ಯಕ್ಕೆ ಸೇರಿಸಿ, ಬೇಕಾದಲ್ಲಿ ಕರಿಬೇವು ಮತ್ತು ಸಣ್ಣಗೆ ಹೆಚ್ಚಿನ ಈರುಳ್ಳಿಯನ್ನು ಆಲೂ ಜೊತೆಗೆ ಮಿಶ್ರ ಮಾಡಿಕೊಳ್ಳಿ.
*ಪರೋಟಾಗಾಗಿ ಗೋಧಿ ಹಿಟ್ಟು ಕಲಸುವ ವಿಧಾನ -ಪಾತ್ರೆಯಲ್ಲಿ, ಗೋಧಿ ಹಿಟ್ಟನ್ನು ತೆಗೆದುಕೊಂಡು ಉಪ್ಪು ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಸ್ವಲ್ಪ ಸಮಯ ಕಲಸಿದ ಹಿಟ್ಟನ್ನು ಹಾಗೆಯೇ ತೆಗೆದಿಡಿ.

ಮಾಡುವ ವಿಧಾನ
1. ಮೊದಲಿಗೆ ನಾದಿದ ಚಪಾತಿ ಹಿಟ್ಟನ್ನು ಪೂರಿ ಗಾತ್ರಕ್ಕೆ ಲಟ್ಟಿಸಿಕೊಳ್ಳಿ. ನಂತರ ಮಧ್ಯಭಾಗಕ್ಕೆ ಆಲೂ ಪಲ್ಯವನ್ನಿಟ್ಟು ನಾಲ್ಕೂ ಭಾಗ ಮಡಚಿಕೊಳ್ಳಿ.
2. ಸ್ವಲ್ಪ ಗೋಧಿ ಹಿಟ್ಟನ್ನು ತೆಗೆದುಕೊಂಡು ಕಲಸಿದ ಉಂಡೆಯನ್ನು ಲಟ್ಟಿಸಿಕೊಳ್ಳಿ ಆದಷ್ಟು ಮೃದುವಾಗಿ ಲಟ್ಟಿಸಿ. ಬಿರುಸಾಗಿ ಲಟ್ಟಿಸಿದಲ್ಲಿ ಪಲ್ಯ ಹೊರಕ್ಕೆ ಬರಬಹುದು.
3. ಗ್ಯಾಸ್‌ನಲ್ಲಿ ತವಾ ಇಟ್ಟುಕೊಂಡು 1/2 ಚಮಚದಷ್ಟು ಎಣ್ಣೆ ಹಾಕಿ. ತವಾ ಕಾಯುತ್ತಿದ್ದಂತೆ ನಿಧಾನವಾಗಿ ಲಟ್ಟಿಸಿದ ಪರೋಟಾವನ್ನು ತವಾದಲ್ಲಿರಿಸಿ. ಬೇಕಾದಷ್ಟು ಎಣ್ಣೆಯನ್ನು ಹಾಕಿ ಎರಡೂ ಬದಿ ಚೆನ್ನಾಗಿ ಬೇಯಿಸಿಕೊಳ್ಳಿ.
4.ಇದೇ ರೀತಿ ಉಳಿದ ಪರೋಟಾಗಳನ್ನು ಸಿದ್ಧಪಡಿಸಿಕೊಳ್ಳಿ.

English summary

Fastest Way To Make Aloo Parathas!

Aloo paratha is almost everyone's favourite Indian recipe. But how often do you manage to make it for your office lunch box? Not too often, do you? You just miss this Indian recipe because of short deadlines in the morning. But, we give you 5 simple steps to prepare delicious aloo paranthas in just few minutes. Lunch box recipes needs to be quick and so we give you tips to make this recipe in exactly 15 minutes on your busy mornings.
X
Desktop Bottom Promotion