For Quick Alerts
ALLOW NOTIFICATIONS  
For Daily Alerts

ಮೊಟ್ಟೆಶಾವಿಗೆ ಬಾತ್ ಮಾಡಿ ನೋಡಿ

|

ಮೊಟ್ಟೆ ಶಾವಿಗೆ ಬಾತ್ ಬೆಳಗಿನ ಉಪಹಾರಕ್ಕೆ ಹೇಳಿ ಮಾಡಿಸಿದ ತಿಂಡಿ. ಇದನ್ನು ಮಾಡುವುದು ತುಂಬ ಸುಲಭ. ಕಡಿಮೆ ಸಮಯದಲ್ಲಿ ಪೌಷ್ಟಿಕಾಂಶಭರಿತ ಉಪಹಾರ ರೆಡಿ. ಮೊಟ್ಟೆಯಲ್ಲಿ ಶಾವಿಗೆ ಬಾತ್ ಮಾಡುವುದು ಹೇಗೆ ಎಂದು ಆಶ್ಚರ್ಯ ಆಯ್ತಾ?
ನಾವಿಲ್ಲಿ ಕೊಟ್ಟಿರೋ ವಿಧಾನದಲ್ಲಿ ತಿಂಡಿ ಮಾಡಿ ನೋಡಿ. ಒಂದು ಮಾತ್ರ ನೆನಪಿಡಿ. ಈ ತಿಂಡಿಯನ್ನು ಬಿಸಿಯಾಗಿದ್ದಾಗಲೇ ತಿಂದು ಬಿಡಬೇಕು. ಆರಿದ ನಂತರ ಇದು ರುಚಿಸುವುದಿಲ್ಲ.

Egg Vermicelli Recipe For Breakfast

ಬೇಕಾಗುವ ಸಾಮಗ್ರಿಗಳು:
ಮೊಟ್ಟೆ- 2 (ಹಳದಿ ಭಾಗ)
ಶಾವಿಗೆ- 500 ಗ್ರಾಂ
ಈರುಳ್ಳಿ- 2 (ಹೆಚ್ಚಿಕೊಳ್ಳಿ)
ಸಾಸಿವೆ- 1 ಟೀಚಮಚ
ಕಡಲೆಬೇಳೆ- 20 ಗ್ರಾಂ
ಕರಿಬೇವು- ಸ್ವಲ್ಪ
ಬೆಣ್ಣೆ- 3 ಟೀಚಮಚ
ಧನಿಯ- 1 ಟೀಚಮಚ
ಜೀರಿಗೆ- 1 ಟೀಚಮಚ
ಕೆಂಪು ಮೆಣಸಿನಕಾಯಿ- 2
ದಾಲ್ಚಿನ್ನಿ- 1
ಏಲಕ್ಕಿ- 2
ಎಣ್ಣೆ ಅಥವ ತುಪ್ಪ ಹುರಿಯಲು
ನೀರು- 1 ಕಪ್
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
1. ಧನಿಯ, ಜೀರಿಗೆ, ಕೆಂಪು ಮೆಣಸಿನಕಾಯಿ, ಏಲಕ್ಕಿ, ದಾಲ್ಚಿನ್ನಿ ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ.
2. ಒಂದು ಬಾಣಲೆಯನ್ನು ಬಿಸಿಮಾಡಿಕೊಂಡು ಅದಕ್ಕೆ ತುಪ್ಪ ಹಾಕಿ ಶಾವಿಗೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಮಟ್ಟಿಗೆ ಕೆಂಪಾಗುವವರೆಗೆ ಹುರಿಯಿರಿ.
3. ಸಾಸಿವೆ, ಕಡಲೆ, ಉಪ್ಪು, ಕರಿಬೇವು, ಮೊಟ್ಟೆಯ ಹಳದಿ ಭಾಗ ಮತ್ತು ಸಿದ್ಧಮಾಡಿಟ್ಟುಕೊಂಡ ಪುಡಿಯನ್ನು ಸೇರಿಸಿ. ಇವೆಲ್ಲವನ್ನು ಚೆನ್ನಾಗಿ ಕಲಸಿ. ಮೊಟ್ಟೆ ಇವೆಲ್ಲದರೊಂದಿಗೆ ಬೆರೆಯುವವರೆಗೆ ಇದನ್ನು ಕಲಸಿ.
4. ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ನೀರು ಸೇರಿಸಿ. ನೀರು ಕುದಿಯಲು ಆರಂಭಿಸಿದಾಗ ಹುರಿದ ಶಾವಿಗೆಯನ್ನು ಇದಕ್ಕೆ ಸೇರಿಸಿ.
5. ನೀರು ಪೂರ್ತಿ ಆವಿಯಾಗುವವರೆಗೆ ಈ ಮಿಶ್ರಣವನ್ನು ಬೇಯಿಸಿ.

ಮೊಟ್ಟೆ ಶಾವಿಗೆ ಬಾತನ್ನು ಬಿಸಿ ಬಿಸಿಯಾಗಿ ತಿಂದು ನೋಡಿ. ಇದರೊಂದಿಗೆ ಟಮೊಟೋ ಸಾಸ್ ಬಳಸಿದರೆ ರುಚಿ ಹೆಚ್ಚು.

English summary

Egg Vermicelli Recipe For Breakfast

If you are wondering how to make the egg vermicelli, we have provided an easy recipe for you to follow. Take a look at this yummy breakfast recipe we have in store for you. One important thing you should keep in mind, is that when you prepare this egg vermicelli, make sure you consume it when hot.
Story first published: Saturday, November 23, 2013, 11:33 [IST]
X
Desktop Bottom Promotion