For Quick Alerts
ALLOW NOTIFICATIONS  
For Daily Alerts

ಸ್ವಾದಿಷ್ಟ ಬ್ರೇಕ್‌ಫಾಸ್ಟ್‌ಗಾಗಿ ಸೇಮಿಯಾ ಉಪ್ಮಾ ರೆಸಿಪಿ

|

ಉಪ್ಮಾ ಭಾರತೀಯ ಕ್ಲಾಸಿಕ್ ಬ್ರೇಕ್‌ಫಾಸ್ಟ್ ರೆಸಿಪಿಯಾಗಿದ್ದು ಹೆಚ್ಚಾಗಿ ಭಾರತೀಯ ಮನೆಗಳಲ್ಲಿ ಇದನ್ನು ಹೆಚ್ಚಾಗಿಯೇ ತಯಾರಿಸುತ್ತಾರೆ. ಇದನ್ನು ತಯಾರಿಸಲು ಸ್ವಲ್ಪ ಸಮಯ ಸಾಕು ಮತ್ತು ನಾಲಿಗೆಗೆ ಹಾಗೂ ದೇಹಕ್ಕೆ ಸ್ವಸ್ಥ್ಯ ಮತ್ತು ರುಚಿಕರವಾದ ರೆಸಿಪಿ ಇದಾಗಿದೆ.

ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ

ಇಂದಿನ ಸ್ವಾದಿಷ್ಟ ಉಪ್ಮಾವನ್ನು ರವೆಯಲ್ಲಿ ತಯಾರಿಸುವ ಬದಲು ಸೇಮಿಗೆಯಲ್ಲಿ ಸಿದ್ಧಪಡಿಸೋಣ. ಇದು ಸಾಮಾನ್ಯ ರವಾ ಉಪ್ಮಾಗಿಂತಲೂ ಹೆಚ್ಚು ರುಚಿಕಟ್ಟಾಗಿರುತ್ತದೆ ಮತ್ತು ನಿಮ್ಮ ಇಷ್ಟದ ತರಕಾರಿಗಳನ್ನು ಬಳಸಿ ಇದನ್ನು ಸುಲಭವಾಗಿ ನಿಮಗೆ ಸಿದ್ಧಪಡಿಸಬಹುದು.

Easy Semiya Upma Recipe For Breakfast

ಹಾಗಿದ್ದರೆ ಈ ಸರಳವಾದ ಸೇಮಿಗೆ ಉಪ್ಮಾ ರೆಸಿಪಿಯನ್ನು ತಯಾರಿಸಲು ಸಿದ್ಧರಾಗಿ.

ಪ್ರಮಾಣ: 4
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 20 ನಿಮಿಷಗಳು

ಸಾಮಾಗ್ರಿಗಳು:
*ಸೇಮಿಯಾ (ವರ್ಮಿಸಿಲಿ) - 2 ಕಪ್‌ಗಳು
*ನೀರು - 1 1/2 ಕಪ್‌ಗಳು
*ಈರುಳ್ಳಿ - 1 (ಕತ್ತರಿಸಿದ್ದು)
*ಬಟಾಣಿ - 1/2 ಕಪ್
*ಕ್ಯಾರೇಟ್ - 1 (ಕತ್ತರಿಸಿದ್ದು)
*ಟೊಮೇಟೊ - 1 (ಕತ್ತರಿಸಿದ್ದು)
*ಹಸಿ ಮೆಣಸು - 2 (ಕತ್ತರಿಸಿದ್ದು)
*ಅರಶಿನ ಹುಡಿ - 1/4 ಸ್ಪೂನ್
*ಸಾಸಿವೆ - 1 ಸ್ಪೂನ್
*ಉದ್ದಿನ ಬೇಳೆ - 1 ಸ್ಪೂನ್
*ಚನ್ನಾ ದಾಲ್ - 1/2 ಸ್ಪೂನ್
*ಕರಿಬೇವಿನೆಲೆ - 6-7
*ಒಣ ಮೆಣಸು - 1
*ಉಪ್ಪು - ರುಚಿಗೆ ತಕ್ಕಷ್ಟು
*ಎಣ್ಣೆ - 2 ಸ್ಪೂನ್

ನೀವು ಮಂಗಳೂರು ಬನ್ಸ್ ರೆಸಿಪಿಯ ರುಚಿ ನೋಡಿದಿರಾ?

ಮಾಡುವ ವಿಧಾನ:
1. ಪ್ಯಾನ್‌ನಲ್ಲಿ ಒಂದು ಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ ಹಾಗೂ ಸೇಮಿಯಾವನ್ನು ಚಿನ್ನದ ಬಣ್ಣಕ್ಕೆ ಬರುವವರೆಗೆ ಹುರಿಯಿರಿ.

2.ಚೆನ್ನಾಗಿ ಹುರಿದ ನಂತರ, ಸೇಮಿಯಾವನ್ನು ತಟ್ಟೆಗೆ ಹಾಕಿ ಮತ್ತು ಪಕ್ಕದಲ್ಲಿರಿಸಿ.

3.ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಹಾಕಿ ಮತ್ತು ಸಾಸಿವೆ, ಒಣ ಮೆಣಸು, ಉದ್ದಿನ ಬೇಳೆ, ಚನ್ನಾ ದಾಲ್, ಕರಿಬೇವಿನೆಲೆಯನ್ನು ಹಾಕಿ ಮತ್ತು ಸ್ವಲ್ಪ ನಿಮಿಷ ಹುರಿಯಿರಿ.

4.ಈರುಳ್ಳಿ ಸೇರಿಸಿ ಮತ್ತು ಮಧ್ಯಮ ಗಾತ್ರದಲ್ಲಿ 4-5 ನಿಮಿಷಗಳ ಕಾಲ ಹುರಿಯಿರಿ.

5.ಅರಶಿನ ಹುಡಿ, ಕತ್ತರಿಸಿದ ಕ್ಯಾರೇಟ್, ಬಟಾಣಿ, ಹಸಿಮೆಣಸು, ಉದ್ದಿನ ಬೇಳೆ, ಚನ್ನಾ ದಾಲ್, ಕರಿಬೇವಿನೆಲೆಯನ್ನು ಸೇರಿಸಿ 5-6 ನಿಮಿಷಗಳ ಕಾಲ ಹುರಿಯಿರಿ.

6.ಈಗ ಹುರಿದ ಸೇಮಿಯಾವನ್ನು ಸೇರಿಸಿ ನಂತರ ಉಪ್ಪು ಮತ್ತು ನೀರನ್ನು ಪ್ಯಾನ್‌ಗೆ ಹಾಕಿ. ಚೆನ್ನಾಗಿ ಮಿಶ್ರ ಮಾಡಿ.

7.ಸಣ್ಣ ಉರಿಯಲ್ಲಿ 8-10 ನಿಮಿಷಗಳ ಕಾಲ ಬೇಯಿಸಿ.

8.ಒಮ್ಮೆ ಆದ ನಂತರ, ಮುಚ್ಚಳ ತೆರೆಯಿರಿ ಮತ್ತು ನೀರು ಚೆನ್ನಾಗಿ ಇಂಗುವವರೆಗೆ ಕಾಯಿರಿ.

9.ನೀರು ಪೂರ್ತಿ ಇಂಗುವವರೆಗೆ ಕಾಯಿರಿ ಮತ್ತು ಬಿಸಿ ಬಿಸಿಯಾಗಿ ಅದನ್ನು ಬಡಿಸಿ.

English summary

Easy Semiya Upma Recipe For Breakfast

Upma is a classic Indian breakfast recipe. It is easy, less time consuming and is loved by almost everyone. Usually upma is prepared with semolina or rava. Semiya upma is prepared in more or less the same way as a regular upma. But it tastes even better than normal rava upma.
X
Desktop Bottom Promotion