For Quick Alerts
ALLOW NOTIFICATIONS  
For Daily Alerts

ಸವಿರುಚಿಯ, ಕಲರ್ ಕಲರ್ ದಹಿ ಪಲಾವ್!

|

ವಡೆಗೆ ಮೊಸರು ಹಾಕಿದರೆ ದಹಿ ವಡೆ ಅದೇ ರೀತಿ ಪಲಾವ್ ಗೆ ಮೊಸರು ಹಾಕಿದರೆ ಆ ಪಲಾವ್ ಅನ್ನು ದಹಿ ಪಲಾವ್ ಅನ್ನಲು ಸಾಧ್ಯವಿಲ್ಲ. ದಹಿ ಪಲಾವ್ ಮಾಡುವ ವಿಧಾನವೇ ಬೇರೆ ಬಣ್ಣ-ಬಣ್ಣದ ಈ ಪಲಾವ್ ತಿನ್ನಲೂ ರುಚಿಕರವಾಗಿರುತ್ತದೆ.

ಈ ದಹಿ ಪಲಾವ್ ಅನ್ನು ಮಾಡುವ ರೆಸಿಪಿ ನೋಡಿ ಇಲ್ಲಿದೆ.

Dahi Pulao Delicious Rice Recipe

ಬೇಕಾಗುವ ಸಾಮಾಗ್ರಿಗಳು
ಬಾಸುಮತಿ ಅಕ್ಕಿ ಅರ್ಧ ಕೆಜಿ
ಮೊಸರು ಕಾಲು ಲೀಟರ್
ಹಾಲು 1 ಕಪ್
ಈರುಳ್ಳಿ 2 (ಕತ್ತರಿಸಿದ್ದು)
ಹಸಿ ಮೆಣಸಿನ ಕಾಯಿ 2
ಮಿಶ್ರ ತರಕಾರಿಗಳು 1 ಕಪ್ (ಆಲೂಗಡ್ಡೆ, ಬೀನ್ಸ್, ಬಟಾಣಿ, ಕ್ಯಾರೆಟ್)
ಕಾಳು ಮೆಣಸು 6
ಲವಂಗ 2
ಒಂದು ಇಂಚಿನಷ್ಟು ದೊಡ್ಡದಿರುವ ಚಕ್ಕೆ
ಏಲಕ್ಕಿ 2
ಸ್ವಲ್ಪ ಗೋಡಂಬಿ ಮತ್ತು ದ್ರಾಕ್ಷಿ
ಚಿಟಿಕೆಯಷ್ಟು ಕೇಸರಿ
ಕೆಂಪು, ಹಳದಿ, ಕಿತ್ತಳೆ ಮಿಶ್ರಿತ ಕಲರ್ 1 ಚಮಚ
ರುಚಿಗೆ ತಕ್ಕ ಉಪ್ಪು
ತುಪ್ಪ 4 ಚಮಚ

ತಯಾರಿಸುವ ವಿಧಾನ

* ತರಕಾರಿಯನ್ನು ಒಂದು ಪಾತ್ರೆಯಲ್ಲಿ ಹಾಕಿ,. ಉಪ್ಪು ಹಾಕಿ ಬೇಯಿಸಿ, ತುಂಬಾ ಬೇಯಿಸಿಬೇಡಿ. ನಂತರ ಅದರ ನೀರು ಬಸಿದು ಇಡಿ.

* ಈಗ ಪಾತ್ರೆಗೆ 1 ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ ಮತ್ತು ದ್ರಾಕ್ಷಿ ಹಾಕಿ ಹುರಿದು ಒಂದು ಪಾತ್ರೆಯಲ್ಲಿ ಹಾಕಿಡಿ.

* ಈಗ ಅಕ್ಕಿಯನ್ನು ತೊಳೆದು ಕುಕ್ಕರ್ ನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು ಹಾಕಿ ಅನ್ನವನ್ನು ಅರ್ಧ ಬೇಯಿಸಿ ನಂತರ ತಣ್ಣಗಾಗಲು ಇಡಿ. ನಂತರ ಅದನ್ನು ಮೂರು ಭಾಗ ಮಾಡಿ ಅದಕ್ಕೆ ಕೆಂಪು, ಹಳದಿ, ಕಿತ್ತಳೆ ಬಣ್ಣದ ಪುಡಿಯನ್ನು ಹಾಕಿ ಮಿಶ್ರಣ ಮಾಡಿಡಿ.

* ಈಗ ತುಪ್ಪವನ್ನು ಪಾತ್ರೆಯಲ್ಲಿ ಹಾಕಿ ಅದು ಬಿಸಿಯಾದಾಗ ಈರುಳ್ಳಿ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

* ನಂತರ ಚಕ್ಕೆ, ಲವಂಗ ಹಾಕಿ ಹುರಿದು ನಂತರ ಬೇಯಿಸಿದ ತರಕಾರಿ ಹಾಕಿ ಸ್ವಲ್ಪ ಹೊತ್ತು ಹುರಿಯಿರಿ ನಂತರ ಹುರಿಯನ್ನು ಆಫ್ ಮಾಡಿ.

* ಈಗ ಬಿರಿಯಾನಿ ಮಾಡುವ ಪಾತ್ರೆ ತೆಗೆದುಕೊಂಡು ಅದಕ್ಕೆ ಸ್ವಲ್ಪ ತುಪ್ಪ ಸವರಿ. ಈಗ ಹಳದಿ ಅನ್ನವನ್ನು ಹಾಕಿ ಸ್ವಲ್ಪ ತರಕಾರಿ ಮತ್ತು ಮೊಸರು ಹಾಕಿ ಈ ರೀತಿ ಪದರ-ಪದರವಾಗಿ ಹಾಕಿ ನಂತರ ಉಳಿದ ತರಕಾರಿ ಮತ್ತು ನಟ್ಸ್ ಅನ್ನು ಮೇಲೆ ಹಾಕಿ, ಕೇಸರಿ ಹಾಕಿ ಅದರ ಮೇಲೆ ಹಾಲು ಸುರಿದು ಪಾತ್ರೆಯ ಬಾಯಿ ಮುಚ್ಚಿ ಕಡಿಮೆ ಉರಿಯಲ್ಲಿ 30 ನಿಮಿಷ ಬೇಯಿಸಿದರೆ ರುಚಿ ರುಚಿಯಾದ ದಹಿ ಪಲಾವ್ ರೆಡಿ.

English summary

Dahi Pulao Delicious Rice Recipe | Variety Of Pulao Recipe | ದಹಿ ಪಲಾವ್ ರೆಸಿಪಿ | ಅನೇಕ ಬಗೆಯ ಪಲಾವ್ ರೆಸಿಪಿ

Curd rice is a famous South-Indian dish. Here we will make dahi rice using not just curd but also vegetables and milk.
X
Desktop Bottom Promotion