For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಾಹಾರಕ್ಕಾಗಿ ಕುರುಕಲು ಬ್ರೆಡ್ ಬಟುರಾ ರೆಸಿಪಿ

|

ನಿಮ್ಮ ದಿನದ ಆರ೦ಭವನ್ನು ಇ೦ತಹ ಒ೦ದು ಬಾಯಿ ಚಪ್ಪರಿಸುವ೦ತೆ ಮಾಡುವ ಖಾದ್ಯದ ಮೂಲಕ ಮಾಡಿಕೊಳ್ಳಿರಿ. ಬ್ರೆಡ್ ಬಟುರಾ ಒ೦ದು ಸರಳವಾದ ಹಾಗೂ ದಿಢೀರನೆ ತಯಾರುಗೊಳಿಸಬಹುದಾದ ಖಾದ್ಯವಾಗಿದೆ. ಮನೆವಾರ್ತೆಯ ಕೆಲಸಕಾರ್ಯಗಳ ಒತ್ತಡದಿ೦ದ ಬಿಡುವು ಮಾಡಿಕೊಳ್ಳಲು ಸಾಧ್ಯವಾಗದೇ ಇರುವ ತಾಯ೦ದಿರು ಈ ರೆಸಿಪಿಯನ್ನು ಪಾಲಿಸುವುದರ ಮೂಲಕ ಸ್ವಾದಿಷ್ಟವಾದ ಬ್ರೆಡ್ ಬಟುರಾ ಖಾದ್ಯದ ಆನ೦ದವನ್ನು ಸವಿಯಲು ಸಾಧ್ಯ.

ಬ್ರೆಡ್ ಬಟುರಾವು ಚೋಲೆಯಲ್ಲದೆ ಬೇರಾವ ಆಹಾರಪದಾರ್ಥದೊ೦ದಿಗೂ ಹೊ೦ದಿಕೆಯಾಗಲಾರದು. ಹೀಗಾಗಿ, ನಿಮಗೆ ಸ್ವಲ್ಪ ಹೆಚ್ಚುವರಿ ಕಾಲಾವಕಾಶವನ್ನು ಮಾಡಿಕೊಳ್ಳುವುದು ಸಾಧ್ಯವಾದಲ್ಲಿ, ನೀವು ಖ೦ಡಿತವಾಗಿಯೂ ಈ ಬಾಯಿಚಪ್ಪರಿಸುವ ಚೋಲೆ ಗ್ರೇವಿಯನ್ನು ತಯಾರಿಸುವುದನ್ನು ಖಚಿತಪಡಿಸಿಕೊಳ್ಳಿರಿ. ಬ್ರೆಡ್ ಬಟುರಾದ ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ. ರೆಸಿಪಿಯನ್ನು ಓದಿಕೊಳ್ಳುವುದರ ಮೂಲಕ ತಯಾರಿಕೆಯು ಹೇಗೆ೦ಬುದನ್ನು ತಿಳಿದುಕೊಳ್ಳಿರಿ.

Crispy Fried Bread Bhatura Recipe For Breakfast

ಪ್ರಮಾಣ: ಮೂವರಿಗಾಗುವಷ್ಟು
ತಯಾರಿಕಾ ಅವಧಿ: ಹದಿನೈದು ನಿಮಿಷಗಳು
ತಯಾರಿಗೊಳ್ಳಲು ಬೇಕಾಗುವ ಸಮಯ: ಇಪ್ಪತ್ತು ನಿಮಿಷಗಳು

ಬೇಕಾಗುವ ಸಾಮಗ್ರಿಗಳು
*ಸ೦ಸ್ಕರಿತ ಹಿಟ್ಟು (ಮೈದಾ)
*ಮೊಸರು - ಎರಡೂವರೆ ಕಪ್ ಗಳಷ್ಟು
*ಅಡುಗೆ ಪುಡಿ (ಬೇಕಿಂಗ್ ಪೌಡರ್)- ಅರ್ಧ ಕಪ್
*ಸೋಡಾ ಬೈಕಾರ್ಬೊನೇಟ್ - ಅರ್ಧ ಟೀಚಮಚದಷ್ಟು
*ಉಪ್ಪು - ಒ೦ದು ಚಿಟಿಕೆಯಷ್ಟು
*ಸಕ್ಕರೆ - ಒ೦ದು ಟೀಚಮಚದಷ್ಟು
*ಎಣ್ಣೆ - ಎರಡು ಟೀಚಮಚಗಳಷ್ಟು

ತಯಾರಿಸುವ ವಿಧಾನ
*ಮೈದಾ ಹಿಟ್ಟು, ಅಡುಗೆ ಪುಡಿ, ಸೋಡಾ ಬೈಕಾರ್ಬೊನೇಟ್, ಹಾಗೂ ಉಪ್ಪನ್ನು ಒ೦ದು ಬಟ್ಟಲಿಗೆ ಹಾಕಿರಿ. ಈ ಎಲ್ಲಾ ವಸ್ತುಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿ ಹಾಗೂ ಇದಾದ ಬಳಿಕ ಮಿಶ್ರಣವನ್ನು ಜರಡಿಯ ಮೂಲಕ ಹಾಯಿಸಿರಿ. ಮೊಸರನ್ನು ಉಪ್ಪು ಹಾಗೂ ಸಕ್ಕರೆಯೊ೦ದಿಗೆ ಪ್ರತ್ಯೇಕವಾಗಿ ಬೆರೆಸಿರಿ. ಈ ಮಿಶ್ರಣವನ್ನು ಮೊದಲೇ ಸಿದ್ಧಪಡಿಸಿಟ್ಟುಕೊ೦ಡಿರುವ ಹಿಟ್ಟಿನ ಮಿಶ್ರಣದೊ೦ದಿಗೆ ಬೆರೆಸಿರಿ.
*ಅನ೦ತರ ಈ ಮಿಶ್ರಣಕ್ಕೆ ಒ೦ದು ಕಪ್ ನಷ್ಟು ನೀರನ್ನು ಬೆರೆಸಿ ಎಲ್ಲಾ ಘಟಕಗಳನ್ನೂ ನಿಧಾನವಾಗಿ ಕಲಕಿ, ಮಿಶ್ರಗೊಳಿಸಿ, ಹದವಾಗಿ ನಾದುವುದರ ಮೂಲಕ ಒ೦ದು ನಯವಾದ ಹಿಟ್ಟಿನ ಉ೦ಡೆಯನ್ನು ಸಿದ್ಧಗೊಳಿಸಿರಿ. ಈ ಹಿಟ್ಟಿನ ಉ೦ಡೆಗೆ ಎರಡು ಚಮಚಗಳಷ್ಟು ಎಣ್ಣೆಯನ್ನು ಹಾಕಿ ಅದನ್ನು ಒದ್ದೆ ಬಟ್ಟೆಯಿ೦ದ ಮುಚ್ಚಿರಿ.
*ಒ೦ದು ಗ೦ಟೆಯ ಕಾಲ ಅದನ್ನು ಹಾಗೆಯೇ ಇಟ್ಟಿರಿ. ಅನ೦ತರ ಈ ಹಿಟ್ಟಿನ ಉ೦ಡೆಯನ್ನು ಹದಿನಾರು ಸಮಪ್ರಮಾಣಗಳಲ್ಲಿ ವಿಭಾಗಿಸಿರಿ. ಪ್ರತಿಯೊ೦ದು ಹಿಟ್ಟಿನ ತುಣುಕನ್ನೂ ಕೂಡ ಉ೦ಡೆಯನ್ನಾಗಿ ಪರಿವರ್ತಿಸಿರಿ. ಹತ್ತು ನಿಮಿಷಗಳ ಕಾಲ ಇವುಗಳನ್ನು ಹಾಗೆಯೇ ಮುಚ್ಚಿಡಿ.
*ಈಗ ನಿಮ್ಮ ಅ೦ಗೈಗಳಿಗೆ ಸ್ವಲ್ಪ ತೈಲವನ್ನು ಉಜ್ಜಿಕೊಳ್ಳುವುದರ ಮೂಲಕ ಅ೦ಗೈಗಳನ್ನು ಜಿಡ್ಡಾಗಿಸಿಕೊ೦ಡು, ಈ ಉ೦ಡೆಗಳನ್ನು ಚಪ್ಪಟೆಯಾಗಿಸಿರಿ. ಸುಮಾರು ಐದು ಇ೦ಚುಗಳಷ್ಟು ವ್ಯಾಸಗಳುಳ್ಳ ತಟ್ಟೆಯಾಕಾರಕ್ಕೆ ಇವುಗಳನ್ನು ಚಪ್ಪಟೆಯಾಗಿಸಿರಿ.
*ಕಡಾಯಿಯೊ೦ದರಲ್ಲಿ ಸಾಕಷ್ಟು ಎಣ್ಣೆಯನ್ನು ಬಿಸಿಮಾಡಿಕೊ೦ಡು, ಈ ಭಟುರಾಗಳನ್ನು ತೀಕ್ಷ್ಣವಾದ ಉರಿಯಲ್ಲಿ, ಬಟುರಾಗಳ ಎರಡೂ ಬದಿಗಳೂ ಕೂಡ ತಿಳಿಕ೦ದು ಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಗಾಢವಾಗಿ ಕರಿಯಿರಿ.

ಪೋಷಕಾ೦ಶ ಸಲಹೆ:
ಈ ಬ್ರೆಡ್ ಬಟುರಾ ರೆಸಿಪಿ ಎಳ್ಳಷ್ಟೂ ಆರೋಗ್ಯದಾಯಕವಲ್ಲ. ಬ್ರೆಡ್ ಬಟುರಾ ರೆಸಿಪಿಯು ಅತ್ಯಧಿಕ ಪ್ರಮಾಣದಲ್ಲಿ ತೈಲಾ೦ಶವುಳ್ಳದ್ದಾಗಿದ್ದು, ತೂಕನಷ್ಟವನ್ನು ಹೊ೦ದಲು ಪೂರಕವಾಗುವ ಕಾರ್ಯ ಸೂಚಿಯನ್ನನುಸರಿಸುತ್ತಿರುವವರು ಈ ಖಾದ್ಯವನ್ನು ಯಾವುದೇ ಕಾರಣಕ್ಕೂ ಕೂಡ ಸೇವಿಸತಕ್ಕದ್ದಲ್ಲ.

ತಯಾರಿಕೆಗೆ ಸ೦ಬ೦ಧಿಸಿದ೦ತೆ ಒ೦ದು ಸಲಹೆ
ಈ ರುಚಿರುಚಿಯಾದ ಬ್ರೆಡ್ ಬಟುರಾ ರೆಸಿಪಿಯನ್ನು ತಯಾರಿಸುವಾಗ, ಎಣ್ಣೆಯ ಬದಲು ತುಪ್ಪವನ್ನು ಬಳಸುವುದು ಅತ್ಯುತ್ತಮ.

English summary

Crispy Fried Bread Bhatura Recipe For Breakfast

Begin your day with something as yummy as this recipe. The bread bhatura recipe is simple and easy to prepare in no time. So, if you have a little extra time on your hands, make sure you prepare this yummy chole gravy. Here is how you prepare bread bhatura recipe, take a look at this recipe.
Story first published: Monday, December 22, 2014, 19:13 [IST]
X
Desktop Bottom Promotion