For Quick Alerts
ALLOW NOTIFICATIONS  
For Daily Alerts

ಕಾರ್ನ್ ಪ್ಯಾನ್ ಕೇಕ್ ರೆಸಿಪಿ

|

ಕಾರ್ನ್ ಪ್ಯಾನ್ ಕೇಕ್ ಸುಲಭದಲ್ಲಿ ತಯಾರಿಸಬಹುದಾದ ಪ್ಯಾನ್ ಕೇಕ್ ರೆಸಿಪಿಯಾಗಿದೆ. ಈ ಪ್ಯಾನ್ ಕೇಕ್ ತಯಾರಿಸಲು ಒಂದರಿಂದ ಒಂದೂವರೆ ಕಪ್ ಜೋಳವಿದ್ದರೆ ಸಾಕು ರುಚಿಯಾದ ಕಾರ್ನ್ ಪ್ಯಾನ್ ಕೇಕ್ ತಯಾರಿಸಬಹುದು.

ನಾಳೆ ಬ್ರೇಕ್ ಫಾಸ್ಟ್ ಈ ಪ್ಯಾನ್ ಕ್ಯಾಕ್ ಮಾಡಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

Corn Pancake Recipe

ಬೇಕಾಗುವ ಸಾಮಾಗ್ರಿಗಳು
ಜೋಳ 1 ಕಪ್
ಅಕ್ಕಿ ಹಿಟ್ಟು 2 ಕಪ್
ಹೂಕೋಸು 1
ಬಟಾಣಿ ಅರ್ಧ ಕಪ್
ಚೀಸ್ 100 ಗ್ರಾಂ
ಎಣ್ಣೆ 2 ಚಮಚ
ಹಸಿ ಮೆಣಸಿನಕಾಯಿ ಪೇಸ್ಟ್ 1 ಚಮಚ
ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

* ಮೊದಲಿಗೆ ಹಿಟ್ಟಿಗೆ ನೀರು ಹಾಕಿ ಕಲೆಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ ಕಲೆಸಿ ಅರ್ಧ ಗಂಟೆ ಕಾಲ ಇಡಿ.

* ಜೋಳ, ಹೂಕೋಸು, ಬಟಾಣಿಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಬೇಯಿಸಿ,

* ನಂತರ ಅವುಗಳಿಗೆ ಹಸಿ ಮೆಣಸಿನಕಾಯಿ ಪೇಸ್ಟ್ , ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

* ಈಗ ಪ್ಯಾನ್ ಅನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಸವರಿ, 2 ಸೌಟ್ ಹಿಟ್ಟನ್ನು ಹಾಕಿ, ಹಿಟ್ಟು ಅರ್ಧ ಬೆಂದಾಗ ಬೇಯಿಸಿ ಜೋಳ ಮತ್ತು ತರಕಾರಿಯನ್ನು ಹಾಕಿ , ನಂತರ ಚೀಸ್ ಅನ್ನು ಉದುರಿಸಿ, ಮತ್ತೆ 2 ನಿಮಿಷ ಬೇಯಿಸಿ ಉರಿಯಿಂದ ಇಳಿಸಿ.

* ಈ ರೀತಿ ಉಳಿದ ಹಿಟ್ಟಿನಿಂದ ಪ್ಯಾನ್ ಕೇಕ್ ತಯಾರಿಸಿ.

ರೆಡಿಯಾದ ಕಾರ್ನ್ ಅನ್ನು ಟೊಮೆಟೊ ಚಟ್ನಿ, ಟೊಮೆಟೊ ಸಾಸ್ ಅಥವಾ ಗಾರ್ಲಿಕ್ ಸಾಸ್ ಜೊತೆ ಸವಿಯಿರಿ.

English summary

Corn Pancake Recipe

This corn pancake is easy to make and requires a less amount of time compared to other breakfast recipes. This corn pancake recipe is a must try. For this corn pancake recipe you will need only three cobs to make a good amount of yummy pancakes.
 
X
Desktop Bottom Promotion