For Quick Alerts
ALLOW NOTIFICATIONS  
For Daily Alerts

ಬ್ರೆಡ್ ಬಟರ್ ಪುಡ್ಡಿಂಗ್-ಬ್ರೇಕ್ ಫಾಸ್ಟ್ ರೆಸಿಪಿ

|

ಈ ಬ್ರೆಡ್ ಬಟರ್ ಪುಡ್ಡಿಂಗ್ ಮೈಕ್ರೋ ಓವನ್ ಬಳಸಿ ಮಾಡುವ ತಿಂಡಿಯಾಗಿದೆ. ಈ ಬ್ರೆಡ್ ಪುಡ್ಡಿಂಗ್ ಅನ್ನು ಬೆಳಗಿನ ಬ್ರೇಕ್ ಫಾಸ್ಟ್ ಗೆ ತಯಾರಿಸಬಹುದು. ಸವಿಯಲು ತುಂಬಾ ರುಚಿಯಾದ ಈ ಬ್ರೆಡ್ ಪುಡ್ಡಿಂಗ್ ಅನ್ನು ಮಾಡುವ ವಿಧಾನ ಕೂಡ ಸರಳವಾಗಿದೆ.

ಬ್ರೆಡ್ ಬಟರ್ ಪುಡ್ಡಿಂಗ್ ಮಾಡುವ ವಿಧಾನ ನೋಡಿ ಇಲ್ಲಿದೆ:

Bread n Butter Pudding

ಬೇಕಾಗುವ ಸಾಮಾಗ್ರಿಗಳು
ಬ್ರೆಡ್ ತುಂಡುಗಳು 10
ಹಾಲು 300ml
ಬೆಣ್ಣೆ 50 ಗ್ರಾಂ
ಬ್ರೌನ್ ಶುಗರ್ 80 ಗ್ರಾಂ
ಮೊಟ್ಟೆ 2
ಖಾರದ ಪುಡಿ 1 ಚಮಚ
ನಟ್ ಮಗ್ 1 ಚಮಚ(ಪುಡಿ ಮಾಡಿದ್ದು)

ತಯಾರಿಸುವ ವಿಧಾನ:

* ಮೊದಲಿಗೆ ಬ್ರೆಡ್ ಚೂರುಗಳನ್ನು ಸಮ ಅರ್ಧಭಾಗವಾಗಿ ಕತ್ತರಿಸಿ.

* ಈಗ ಅದರ ಮೇಲೆ ಹಾಲು ಸುರಿದು ಪೇಸ್ಟ್ ರೀತಿ ಮಾಡಿ ಈ ಮಿಶ್ರಣವನ್ನು ಅರ್ಧ ಗಂಟೆ ಕಾಲ ಇಡಿ.

* ಈಗ ಅರ್ಧ ಲೀಟರ್ ನೀರು ಅಥವಾ ಹಾಲು ಹಾಕಬಹುದಾದ ಬೇಕಿಂಗ್ ಡಿಶ್ ತೆಗೆದುಕೊಂಡು ಅದರಲ್ಲಿ ಬೆಣ್ಣೆ ಸವರಿ.

* ಈಗ ಆ ಪಾತ್ರೆಗೆ ಬೆಣ್ಣೆ, ಬ್ರೌನ್ ಶುಗರ್, ಮೊಟ್ಟೆ, ಖಾರದ ಪುಡಿ, ಹಾಕಿ ಚೆನ್ನಾಗಿ ಕದಡಿ.

* ಈಗ ಈ ಮಿಶ್ರಣಕ್ಕೆ ಮೆಲ್ಲನೆ ಹಾಲಿನಲ್ಲಿ ನೆನೆ ಹಾಕಿದ್ದ ಬ್ರೆಡ್ ಪೇಸ್ಟ್ ಹಾಕಿ, ಈಗ ಡ್ರೈ ಫ್ರೂಟ್ಸ್ ಮತ್ತು ನಟ್ ಮಗ್ ಹಾಕಿ ಒಮ್ಮೆ ಸೌಟ್ ನಿಂದ ತಿರುಗಿಸಿ, ಈಗ ಬೇಕಿಂಗ್ ಡಿಶ್ ಅನ್ನು ಮೈಕ್ರೋ ಓವನ್ ನಲ್ಲಿ ಇಟ್ಟು ಕಡಿಮೆ ಉಷ್ಣತೆಯಲ್ಲಿ 20 ನಿಮಿಷ ಬೇಯಿಸಿ ಆಗ ಮಿಶ್ರಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುತ್ತದೆ. ಇಷ್ಟು ಮಾಡಿದರೆ ಬ್ರೆಡ್ ಬಟರ್ ಪುಡ್ಡಿಂಗ್ ರೆಡಿ.

English summary

Bread n Butter Pudding

Filled with nutrients and proteins and less carbohydrates, this bread and butter pudding will simply be enjoyed by your aged folks. Lets take a look as to how you can now make this easy breakfast recipe.
X
Desktop Bottom Promotion