For Quick Alerts
ALLOW NOTIFICATIONS  
For Daily Alerts

ಬೆಳಗಿನ ಉಪಹಾರಕ್ಕಾಗಿ ಬ್ರೆಡ್ ಮಸಾಲಾ ಬಟಾಣಿ ಖಾದ್ಯ

|

ಬೆಳಗಿನ ತಿಂಡಿ ಆರೋಗ್ಯಕರವಾಗಿದ್ದರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಶ್ರದ್ಧೆ ಇರುತ್ತದೆ ಮತ್ತು ಪ್ರತ್ಯೇಕ ಮುತುವರ್ಜಿ ವಹಿಸಿ ನಮಗೆ ಕೆಲಸ ಮಾಡಲು ಈ ಶ್ರದ್ಧೆ ಸಹಕಾರಿಯಾಗಿರುತ್ತದೆ. ಇಂತಹ ಶ್ರದ್ಧೆ ಚೇತನ ನಮ್ಮಲ್ಲಿ ಕಂಡುಬರಲು ನಾವು ತೆಗೆದುಕೊಳ್ಳುವ ಆಹಾರ ಸರಳವಾಗಿರಬೇಕು ಮತ್ತು ಪ್ರೊಟೀನ್ ನ್ಯೂಟ್ರೀನ್ ಭರಿತವಾಗಿರಬೇಕು.

ಬೆಳಗಿನ ತಿಂಡಿಗೆ ಈಗ ಸಾಕಷ್ಟು ಮಂದಿ ಬ್ರೆಡ್ ಟೋಸ್ಟ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಏಕೆಂದರೆ ಇದು ಧಾವಂತದ ಸಮಯದಲ್ಲಿ ಶೀಘ್ರವೇ ಮಾಡುವ ತಿಂಡಿಯಾಗಿದೆ ಮತ್ತು ನಿಮ್ಮ ತೂಕ ಇಳಿಕೆಯ ಯೋಜನೆಗೂ ಸಹಕಾರಿಯಾಗಿರುತ್ತದೆ ಎಂಬ ಉದ್ದೇಶದಿಂದ. ಈ ಉದ್ದೇಶ ಏನೋ ಒಳ್ಳೆಯದೇ ಆದರೂ ಯಾವಾಗಲೂ ಬ್ರೆಡ್ ಟೋಸ್ಟ್ ಮಾಡಿ ತಿನ್ನುವುದೆಂದರೆ ಅದರಷ್ಟು ಬೇಜಾರು ಯಾವುದೂ ಇಲ್ಲ ಎಂದೇ ಹೇಳಬಹುದು.

Bread Masala Peas Recipe For Breakfast

ನಿತ್ಯವೂ ಒಂದೇ ಬಗೆಯ ತಿಂಡಿಯನ್ನು ಸೇವಿಸುವುದಕ್ಕಿಂತ ಅದರಲ್ಲಿ ಏನಾದರೂ ಭಿನ್ನತೆಯನ್ನು ತಂದುಕೊಂಡರೆ ಸೇವಿಸುವ ನಮಗೂ ತೃಪ್ತಿ ಸಮಾಧಾನ ಉಂಟಾಗುತ್ತದೆ ಮತ್ತು ನಮ್ಮ ತಿಂಡಿ ಪರಿಪೂರ್ಣವಾಗಿತ್ತು ಎಂಬ ನಮ್ಮ ಮನದಲ್ಲಿ ಮೂಡುತ್ತದೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನಿಮಗಾಗಿ ಅತ್ಯಂತ ರುಚಿಕರವಾಗಿರುವ ಮತ್ತು ನಿಮ್ಮಲ್ಲಿ ತಿನ್ನುವ ತುಡಿತವನ್ನು ಹೆಚ್ಚಿಸುವ ಆರೋಗ್ಯಪೂರ್ಣ ಬ್ರೆಡ್ ಬಟಾಣಿ ಮಸಾಲಾ ಖಾದ್ಯವನ್ನು ನಿಮ್ಮ ಮುಂದಿರಿಸುತ್ತಿದ್ದೇವೆ.

ನಿಮಗೆ ಇದನ್ನು ತಯಾರಿಸಲು ಬೇಕಾಗಿರುವುದು ಮುಷ್ಟಿಯಷ್ಟು ತಾಜಾ ಬಟಾಣಿ ಮತ್ತು ಒಂದಿಷ್ಟು ತರಕಾರಿಗಳು ನೀವು ಕೆಲಸಕ್ಕೆ ಹೋಗುವವರಾಗಿದ್ದಲ್ಲಿ ಈ ತಿಂಡಿ ನಿಮಗೆ ಪರಿಪೂರ್ಣ ಸಂಗಾತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಮಕ್ಕಳಂತೂ ಈ ತಿಂಡಿಯನ್ನು ಮಾಡಿಕೊಡಲು ನಿಮಗೆ ದುಂಬಾಲು ಬೀಳುವುದು ಖಂಡಿತ. ಇದನ್ನು ತಯಾರಿಸುವಾಗ ನೀವು ಹಸಿ ಮತ್ತು ಬೇಯಿಸಲು ಸುಲಭವಾಗಿರುವ ಬಟಾಣಿಯನ್ನು ಆಯ್ದುಕೊಳ್ಳುವುದು ಪ್ರಮುಖ ಅಂಶವಾಗಿದೆ.

ಹಾಗಿದ್ದರೆ ಇನ್ನೇಕೆ ತಡ, ಈ ಪರಿಪೂರ್ಣ ನ್ಯೂಟ್ರೀನ್ ಪ್ರೊಟೀನ್ ಒಳಗೊಂಡ ರುಚಿಕರವಾದ ಖಾದ್ಯವನ್ನು ತಯಾರಿಸುವ ವಿಧಾನದತ್ತ ನಿಮ್ಮ ನೋಟವನ್ನು ಹರಿಸಿ.

ಬೆಳಗಿನ ಉಪಹಾರಕ್ಕೆ ಸ್ಪಿನಾಚ್ ಕಟಲೆಟ್

ಪ್ರಮಾಣ: 4
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು

ಸಾಮಾಗ್ರಿಗಳು
*ಬ್ರೆಡ್ ಸ್ಲೈಡ್ಸ್ - 2
*ಬಟಾಣಿ - 1/2 ಕಪ್
*ಈರುಳ್ಳಿ - 1 ಸಣ್ಣದು
ಟೊಮೇಟೋ - 2 ಮಧ್ಯಮ ಗಾತ್ರದ್ದು
*ಆಲೂಗಡ್ಡೆ - 1 ಸಣ್ಣದು
*ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
*ಸಾಂಬಾರು ಹುಡಿ - 1 ಚಮಚ
*ಗರಮ್ ಮಸಾಲಾ - 1 ಚಮಚ
*ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
1.ಮೊದಲು ಬ್ರೆಡ್ ಅನ್ನು ಟೋಸ್ಟ್ ಮಾಡಿಕೊಳ್ಳಿ. ಇದು ಆದ ನಂತರ ಇದನ್ನು ಪಕ್ಕದಲ್ಲಿರಿಸಿ.
2.ತಾಜಾ ಹಸಿರು ಬಟಾಣಿಯನ್ನು ಮೈಕ್ರೋವೇವ್‌ನಲ್ಲಿ 3 ನಿಮಿಷಗಳ ಬೇಯಿಸಿ ಇದು ಮೆತ್ತಗಾಗಲಿ. ಇನ್ನು ಆಲೂಗಡ್ಡೆಯನ್ನು ಪ್ರಶ್ಶರ್ ಕುಕ್ಕರ್‌ನಲ್ಲಿ ಬೇಯಿಸಿ ಮತ್ತು ಮೃದುವಾಗಿ ಕೈಗಳಿಂದ ಹಿಸುಕಿಕೊಳ್ಳಿ.
3.ಈಗ ಕಡಾಯಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ ಇದು ಬಿಸಿಯಾದ ಕೂಡಲೇ ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನು ಸೇರಿಸಿ 30 ನಿಮಿಷಗಳ ಕಾಲ ಹುರಿಯಿರಿ. ಈಗ ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ಇದು ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಹುರಿದುಕೊಳ್ಳಿ.
4.ಈಗ ಕತ್ತರಿಸಿದ ಟೊಮೇಟೊವನ್ನು ಸೇರಿಸಿಕೊಳ್ಳಿ ಮತ್ತು ಈರುಳ್ಳಿ ಹಾಗೂ ಟೊಮೇಟೊ ಚೆನ್ನಾಗಿ ಬೇಯುವವರೆಗೆ ಫ್ರೈ ಮಾಡಿ.
5.ಈ ಮಿಶ್ರಣಕ್ಕೆ ಹಿಸುಕಿದ ಆಲೂಗಡ್ಡೆ ಮತ್ತು ಬಟಾಣಿಯನ್ನು ಸೇರಿಸಿಕೊಳ್ಳಿ, ಸಾಂಬಾರು ಹುಡಿಯನ್ನು ಹಾಕಿ ಚಪ್ಪಟೆ ಚಮಚ ಬಳಸಿಕೊಂಡು ಎಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
6.ಲಿಂಬೆ ರಸವನ್ನು ಬಳಸಿಕೊಂಡು ಖಾದ್ಯವನ್ನು ಅಲಂಕರಿಸಿ.
7.ಪೂರ್ತಿ ಆದ ನಂತರ, ಟೋಸ್ಟ್ ಮಾಡಿಕೊಂಡಿರುವ ಬ್ರೆಡ್‌ಗೆ ಈ ಮಿಶ್ರಣವನ್ನು ಸವರಿ.

ನಿಮ್ಮ ಬ್ರೆಡ್ ಮಸಾಲಾ ರೆಸಿಪಿ ಸವಿಯಲು ಸಿದ್ಧವಾಗಿದೆ. ನೀವು ಇದನ್ನು ತಯಾರಿಸಿ ಒಂದು ಗಂಟೆಗಳಿಗೂ ಮುಂಚಿತವಾಗಿ ಸೇವಿಸಬೇಕು ಇಲ್ಲದಿದ್ದರೆ ಬ್ರೆಡ್‌ನೊಳಗಿರುವ ಮಸಾಲೆಯ ರುಚಿ ಹೊರಟುಹೋಗುತ್ತದೆ ಮತ್ತು ಅದು ಸಪ್ಪೆಯಾಗುತ್ತದೆ.

X
Desktop Bottom Promotion