For Quick Alerts
ALLOW NOTIFICATIONS  
For Daily Alerts

ರುಚಿಕರವಾದ ಮಂಡಕ್ಕಿ ಬ್ರೆಡ್ ಸ್ಯಾಂಡ್‌ವಿಚ್ ರೆಸಿಪಿ

|

ಬೆಳಗಿನ ತಿಂಡಿ ಯಾವಾಗಲೂ ರುಚಿಕರ ಮತ್ತು ಸ್ವಾದಿಷ್ಟವಾಗಿದ್ದರೆ ನಮ್ಮ ದಿನದ ಬದುಕು ಆರೋಗ್ಯಮಯವಾಗಿರುತ್ತದೆ. ಆದ್ದರಿಂದ ಆರೋಗ್ಯಪೂರ್ಣ ಸ್ವಾದಿಷ್ಟಮಯ ಬೆಳಗಿನ ಉಪಹಾರವನ್ನು ನಾವು ಸವಿಯಬೇಕು ಮತ್ತು ಇದು ಹೆಚ್ಚು ಪ್ರೋಟೀನ್ ಹಾಗೂ ವಿಟಮಿನ್‌ಗಳನ್ನು ಒಳಗೊಂಡಿರಬೇಕು. ನೀವು ತೆಗೆದುಕೊಳ್ಳುವ ಆಹಾರದಲ್ಲಿ ಕ್ಯಾಲೋರಿ ಪ್ರಮಾಣ ಮಿತಿಯಲ್ಲಿರಬೇಕು ಆದರೆ ಮಾತ್ರವೇ ತೂಕವೆಂಬ ಪೆಡಂಭೂತವನ್ನು ನೀವು ನಿಯಂತ್ರಣದಲ್ಲಿರಿಸಬಹುದು.

ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿರುವ ರುಚಿಕರ ಮಂಡಕ್ಕಿ ಸ್ಯಾಂಡ್‌ವಿಚ್ ನಿಮಗೆ ಬೆಳಗಿನ ತಿಂಡಿಯ ಸವಿಯನ್ನು ನೆನಪಿನಲ್ಲಿರುವಂತೆ ಮಾಡುತ್ತದೆ. ಹೌದು ಆರೋಗ್ಯಪೂರ್ಣವಾಗಿರುವ ಈ ಮಂಡಕ್ಕಿ ಸ್ಯಾಂಡ್‌ವಿಚ್ ನಿಜಕ್ಕೂ ನಿಮ್ಮಲ್ಲಿ ಆರೋಗ್ಯಯುತ ಕ್ಯಾಲೋರಿಯನ್ನು ಉತ್ಪಾದಿಸುತ್ತದೆ. ಈ ಖಾದ್ಯವನ್ನು ತಯಾರಿಸಲು ನಿಮಗೆ ಹೆಚ್ಚುವರಿ ಸಮಯ ತಗಲುವುದಿಲ್ಲ. ಹೆಚ್ಚು ಆರೋಗ್ಯಪೂರ್ಣವಾಗಿ ಮತ್ತು ಅಸದಳ ಸ್ವಾದದ ಅನುಭೂತಿಯನ್ನು ನಿಮ್ಮಲ್ಲಿ ಉತ್ಪಾದಿಸುವ ಈ ಮಂಡಕ್ಕಿ ಬ್ರೆಡ್ ಸ್ಯಾಂಡ್‌ವಿಚ್ ರೆಸಿಪಿಯನ್ನು ನೀವು ಪ್ರಯತ್ನಿಸಲೇಬೇಕು.

ದೈಹಿಕ ಸ್ವಾಸ್ಥ್ಯವನ್ನು ಹೆಚ್ಚಿಸುವ ರುಚಿಕರ ರಾಗಿ ಉಪ್ಪಿಟ್ಟು

Bhel Puri Sandwich Recipe

ಪ್ರಮಾಣ: 5
ಸಿದ್ಧತಾ ಸಮಯ: 20 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 30 ನಿಮಿಷಗಳು

ಸಾಮಾಗ್ರಿಗಳು
*ಹುರಿ ಅಕ್ಕಿ (ಮಂಡಕ್ಕಿ) - 100 ಗ್ರಾಮ್‌ಗಳು
*ಈರುಳ್ಳಿ - 1 (ಕತ್ತರಿಸಿದ್ದು)
*ಟೊಮೇಟೊ - 1 (ಕತ್ತರಿಸಿದ್ದು)
*ಆಲೂಗಡ್ಡೆ - 1 ಬೇಯಿಸಿ ತುಂಡರಿಸಿದ್ದು
*ಕ್ಯಾರೇಟ್ - 1 ತುರಿದದ್ದು
*ಪುದೀನಾ ಚಟ್ನಿ - 1 ಚಮಚ
*ಉಪ್ಪು - ರುಚಿಗೆ ತಕ್ಕಷ್ಟು
*ಲಿಂಬೆ ರಸ - 1 ಚಮಚ
*ಸೇವ್ - ಸ್ವಲ್ಪ
*ಕೊತ್ತಂಬರಿ ಸೊಪ್ಪು - ಅಲಂಕರಿಸಲು

ಸ್ವಾದಿಷ್ಟಮಯ ಹಾಗೂ ಆರೋಗ್ಯಯುತವಾದ ರವಾ ರೊಟ್ಟಿ ರೆಸಿಪಿ

ಪುದೀನಾ ಚಟ್ನಿ ತಯಾರಿಸಲು
*ಪುದೀನಾ ಎಲೆಗಳು - 1 ಕಟ್ಟು
*ಕೊತ್ತಂಬರಿ ಸೊಪ್ಪು - 1 ಕಟ್ಟು
*ಹಸಿಮೆಣಸು - 1-2 ಉದ್ದಕ್ಕೆ ಸೀಳಿದ್ದು
*ಸ್ಯಾಂಡ್‌ವಿಚ್ ಬ್ರೆಡ್ ತುಂಡುಗಳು

ಮಾಡುವ ವಿಧಾನ
* ನೀವು ಮೊದಲಿಗೆ ಪುದೀನಾ ಚಟ್ನಿಯನ್ನು ಸಿದ್ಧಗೊಳಿಸಬೇಕು ಇದಕ್ಕಾಗಿ ಪುದೀನಾ ಎಲೆಗಳು, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ನುಣ್ಣಗೆ ಪೇಸ್ಟ್‌ನಂತೆ ಮಾಡಿಕೊಳ್ಳಿ. ಸ್ವಲ್ಪ ನೀರನ್ನು ಸೇರಿಸಿ ಉಪ್ಪನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಇದಾದ ನಂತರ ಸ್ವಲ್ಪ ಪುದೀನಾ ಚಟ್ನಿಯನ್ನು ಬದಿಗೆ ಎತ್ತಿಟ್ಟುಕೊಳ್ಳಿ. ಇದನ್ನು ಬ್ರೆಡ್‌ನ ಮೇಲೆ ಪದರಕ್ಕಾಗಿ ಬಳಸಬಹುದು.
* ಇದೀಗ ಎಲ್ಲಾ ತರಕಾರಿಗಳನ್ನು ಮಿಶ್ರ ಮಾಡಿಕೊಳ್ಳಿ ಅಂದರೆ ಕತ್ತರಿಸಿದ ಈರುಳ್ಳಿ, ಟೊಮೇಟೋ, ಆಲೂಗಡ್ಡೆ, ಕ್ಯಾರೇಟ್, ಮತ್ತು ಹುರಿಯಕ್ಕಿಯನ್ನು ವೃತ್ತಾಕಾರದ ಪಾತ್ರೆಯಲ್ಲಿ ಕಲಸಿಕೊಳ್ಳಿ
* ಈ ಪಾತ್ರೆಗೆ, ಸ್ವಲ್ಪ ಪುದೀನಾ ಚಟ್ನಿಯನ್ನು ಸೇರಿಸಿ, ನಂತರ ಲಿಂಬೆ ರಸ ಮತ್ತು ಉಪ್ಪನ್ನು ಸೇರಿಸಿಕೊಳ್ಳಿ. ಚಮಚವನ್ನು ಬಳಸಿ ಇದೆಲ್ಲವನ್ನೂ ಕಲಸಿಕೊಳ್ಳಿ
* ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಇದಕ್ಕೆ ಸೇರಿಸಿ ಮಿಶ್ರ ಮಾಡಿಕೊಳ್ಳಿ
* ಇದೀಗ ಸ್ಯಾಂಡ್‌ವಿಚ್ ಅನ್ನು ತಯಾರಿಸಲು ಪ್ರಾರಂಭಿಸಿ ಬ್ರೆಡ್ ತುಂಡನ್ನು ತೆಗೆದುಕೊಳ್ಳಿ ಇದರ ಮೇಲೆ ಪುದೀನಾ ಚಟ್ನಿಯನ್ನು ಸವರಿ
* ನಂತರ ಈ ಚಟ್ನಿಯ ಮೇಲೆ ರುಚಿಕರವಾದ ಹುರಿಯಕ್ಕಿ ಮಸಾಲೆಯನ್ನು ಇರಿಸಿ.
* ಮಂಡಕ್ಕಿ ಮಿಶ್ರಣದ ಮೇಲೆ ಇನ್ನೊಂದು ಬ್ರೆಡ್ ತುಂಡನ್ನು ಇರಿಸಿ.

ನಿಮ್ಮ ಮಂಡಕ್ಕಿ/ಹುರಿಯಕ್ಕಿ ಸ್ಯಾಂಡ್‌ವಿಚ್ ರೆಸಿಪಿ ಸವಿಯಲು ಸಿದ್ಧವಾಗಿದೆ. ಇದನ್ನು ಹಸಿರು ಚಟ್ನಿಯೊಂದಿಗೆ ಸವಿಯಿರಿ.

English summary

Bhel Puri Sandwich Recipe

The bhel puri sandwich recipe sounds a little uneasy at first. But, when you do actually prepare it, one sandwich will not be suffice for anyone who is fond of chaat. Usually, chaat is an evening snack and many prefer to enjoy it post work
Story first published: Thursday, September 25, 2014, 17:32 [IST]
X
Desktop Bottom Promotion