For Quick Alerts
ALLOW NOTIFICATIONS  
For Daily Alerts

ರುಚಿಯಾದ ಕಡಲೆಹುಡಿ ಮೆಂತೆ ರೋಟಿ

|

ಬೇಸನ್ ಕಿ ರೋಟಿ ಅಥವಾ ಕಡಲೆಹಿಟ್ಟು ಮೆಂತೆ ರೋಟಿ ರಾಜಸ್ಥಾನದಲ್ಲಿ ಜನಪ್ರಿಯ ಖಾದ್ಯವಾಗಿದೆ. ಇದನ್ನು ಕಡಲೆಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟಿನ ತಯಾರಿಕೆಗೆ ನೆಲದಲ್ಲಿ ಬೆಳೆದ ಕಡಲೆ ಬೀಜವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ, ಕಡಲೆ ಹಿಟ್ಟಿನ ರೋಟಿಗೆ ಅಗತ್ಯವಾಗಿರುವುದು ಕಡಲೆ ಹಿಟ್ಟು, ಗೋಧಿ ಹುಡಿ (ಅಗತ್ಯವಿದ್ದಲ್ಲಿ), ಓಮದ ಬೀಜಗಳು, ಮತ್ತು ಪಾರಂಪರಿಕ ಸಾಂಬಾರು ಪದಾರ್ಥಗಳು, ಕೆಂಪು ಮೆಣಸಿನ ಹುಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರಕ್ಕೆ ಟೊಮೆಟೊ ರೈಸ್ ಬಾತ್

ಭಾರತೀಯ ಬ್ರೆಡ್ ಆಗಿರುವ ಈ ರೋಟಿ ತಿನಿಸು ನಿಮ್ಮ ಮಧ್ಯಾಹ್ನದೂಟವನ್ನು ಸೊಗಸಾಗಿಸುವುದರಲ್ಲಿ ಎರಡು ಮಾತಿಲ್ಲ. ಕಡಲೆ ಹಿಟ್ಟಿನ ರೋಟಿಯನ್ನು ವಿಶೇಷ ಸಾಮಾಗ್ರಿಯನ್ನು ಸೇರಿಸಿ ತಯಾರಿಸಬಹುದು ಅದುವೇ ಮೆಂತೆ ಸೊಪ್ಪು. ಇದರಲ್ಲಿ ಫಿಲ್ಲಿಂಗ್‌ಗೆ ಹೆಚ್ಚು ಮಹತ್ವವಿದ್ದು ಸಾಮಾನ್ಯ ಚಪಾತಿಯಂತೆ ಇದನ್ನು ತಯಾರಿಸಬಹುದು.

Besan Methi Ki Roti: Indian Bread

ಪ್ರಮಾಣ: 6-7 ರೋಟಿಗಳು
ಸಿದ್ಧತಾ ಸಮಯ: 10 ನಿಮಿಷಗಳು
ಅಡುಗೆಗೆ ತಗಲುವ ಸಮಯ: 10-15 ನಿಮಿಷಗಳು

ಸಾಮಾಗ್ರಿಗಳು
.ಕಡಲೆ ಹಿಟ್ಟು - 1 ಕಪ್
.ಮೆಂತೆ ಸೊಪ್ಪು - 1ಟೆಸ್ಪೂನ್ (ಕತ್ತರಿಸಿದ್ದು)
. ಕೆಂಪು ಮೆಣಸಿನ ಹುಡಿ - 1 ಟೇಸ್ಪೂನ್
.ಓಮದ ಬೀಜಗಳು - 1ಟೇಸ್ಪೂನ್
.ಉಪ್ಪು - ಸ್ವಲ್ಪ
.ತುಪ್ಪ - 1ಟೇಸ್ಪೂನ್
.ಬೆಚ್ಚಗಿನ ನೀರು - 1ಕಪ್

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ನೆಲಗಡಲೆಯ ಹಲ್ವಾ-ನವರಾತ್ರಿ ರೆಸಿಪಿ

ಮಾಡುವ ವಿಧಾನ
.ಪಾತ್ರೆಯಲ್ಲಿ, ಮೆಂತೆ ಎಲೆಗಳೊಂದಿಗೆ ಕಡಲೆಹುಡಿಯನ್ನು ಸೇರಿಸಿಕೊಳ್ಳಿ. ಸೊಪ್ಪು ನೀರು ಬಿಡುತ್ತಿದ್ದಂತೆ, ನೀರನ್ನು ಕೂಡಲೇ ಹಾಕಬೇಡಿ. ನಾದಿ ಮತ್ತು ಹಿಟ್ಟು ಎಷ್ಟು ಡ್ರೈ ಆಗಿದೆ ಎಂಬುದನ್ನು ನೋಡಿ.

.ಕೆಂಪು ಮೆಣಸಿನ ಹುಡಿ, ಓಮದ ಹುಡಿ ಮತ್ತು ಉಪ್ಪು, ತುಪ್ಪ ಸೇರಿಸಿ.

.ಅಗತ್ಯವಿದ್ದಷ್ಟು ನೀರು ಹಾಕಿ. ತುಂಬಾ ದಪ್ಪ ಅಥವಾ ತೆಳುವಾಗಿ ಹಿಟ್ಟನ್ನು ನಾದಬೇಡಿ.

.ಹಿಟ್ಟು ಮೃದು ಮತ್ತು ನಯವಾಗುವಂತೆ ಕಲಸಿಕೊಳ್ಳಿ. ಬಿಸಿ ನೀರು ಮತ್ತು ತುಪ್ಪ ಹಿಟ್ಟನ್ನು ಮೃದುವಾಗಿಸುತ್ತದೆ.

.ತವಾ ಬಿಸಿ ಮಾಡಿಕೊಳ್ಳಿ. ಹಿಟ್ಟಿನ ಸಣ್ಣ ಉಂಡೆಗಳನ್ನು ಮಾಡಿಕೊಂಡು ಚಪಾತಿ ಆಕಾರದಲ್ಲಿ ಲಟ್ಟಿಸಿ. ಸಾಂಪ್ರದಾಯಿಕ ರಾಜಸ್ಥಾನಿ ಶೈಲಿಯ ರೋಟಿಯನ್ನು ನಿಮ್ಮ ಅಂಗೈ ಬಳಸಿಕೊಂಡು ನೀವು ಪ್ರಯತ್ನಿಸಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರಕ್ಕೆ ಮೊಸರಿಡ್ಲಿ

.ತವಾದಲ್ಲಿ ರೋಟಿಯನ್ನು ಎರಡೂ ಬದಿಗಳಲ್ಲಿ ಬೇಯಿಸಿ ನಂತರ ಫ್ಲೇಮ್‌ನಲ್ಲಿ ಹಿಡಿಯಿರಿ.

.ರೋಟಿಯ ಮೇಲೆ ತುಪ್ಪ ಹರಡಿಸಿ. ಉಳಿದ ರೋಟಿ ಹಿಟ್ಟನ್ನು ಈ ವಿಧಾನವನ್ನು ಅನುಸರಿಸಿಕೊಂಡು ತಯಾರಿಸಿ.

ಬಿಸಿ ಬಿಸಿಯಾದ ರೋಟಿಯನ್ನು ಸೈಡ್ ಡಿಶ್‌ನೊಂದಿಗೆ ಬಡಿಸಿ.

English summary

Besan Methi Ki Roti: Indian Bread

Besan ki roti is an Indian bread popular in Rajasthan. Besan ki roti is prepared with besan, which is Bengal gram flour. It is basically ground chana dal, with which the dough is made. Ideally, besan ki roti has besan, a little wheat flour (not necessary), carom seeds, and some authentic spices like red chilli powder.
X
Desktop Bottom Promotion