For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಗಾಗಿ ಬನಾನ ಕಡಲೆ ಬಟರ್ ಸೂಪರ್ ಮಿಲ್ಕ್‌ಶೇಕ್

|

ನೀವು ತೂಕ ಇಳಿಕೆಯ ಯೋಜನೆಯಲ್ಲಿ ಇದ್ದವರಾಗಿದ್ದು ಏನು ತಿನ್ನಬೇಕೆಂಬ ಚಿಂತೆ ನಿಮ್ಮನ್ನು ಕಾಡುತ್ತಿದೆಯೇ? ಬೆಳಗಿನ ಉಪಹಾರ ನಿಮ್ಮ ಡಯೆಟ್‌ನಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಇದನ್ನು ಸ್ಕಿಪ್ ಮಾಡುವುದು ಆರೋಗ್ಯದ ದೃಷ್ಟಿಯಿಂದ ಹಾನಿಯನ್ನುಂಟು ಮಾಡಬಹುದು.

ಆದ್ದರಿಂದ ನಿಮ್ಮ ಬ್ರೇಕ್‌ಫಾಸ್ಟ್ ಅನ್ನು ಯಮ್ಮಿ ಮತ್ತು ಪೋಷಕಾಂಶಭರಿತವಾಗಿಸಲು ಈ ಬಾಳೆಹಣ್ಣು ಮತ್ತು ಹುರಿದ ಕಡಲೇಕಾಯಿ ಬೀಜವನ್ನು ಮಿಕ್ಸರ್‌‌ನಲ್ಲಿ ರುಬ್ಬಿ ಮಾಡಿದ ಬೆಣ್ಣೆ ಮಿಲ್ಕ್ ಶೇಕ್ ಅನ್ನು ಪ್ರಯತ್ನಿಸಿ. ಈ ಮಿಲ್ಕ್ ಶೇಕ್ ನಿಮ್ಮ ಬೆಳಗಿನ ಉಪಹಾರಕ್ಕೆ ಉತ್ತಮವಾಗಿ ಹೇಳಿ ಮಾಡಿಸಿದಂತದ್ದಾಗಿದೆ.

Banana & Peanut Butter Milkshake Recipe For Weight Loss

ಇದು ಬ್ರೆಡ್ ಮತ್ತು ಇತರ ಆಹಾರಗಳಿಗಿಂತ ಕೂಡ ಅತ್ಯುತ್ತಮವಾಗಿದೆ. ಹಾಗಿದ್ದರೆ ಈ ರೆಸಿಪಿಯನ್ನು ಜಸ್ಟ್ ನೋಟ್ ಮಾಡಿಕೊಳ್ಳಿ ಮತ್ತು ತಯಾರಿಯನ್ನು ಪ್ರಾರಂಭಿಸಿ

ಚುಮುಚುಮು ಹವೆಗೆ ಬಿಸಿ ಬಿಸಿ ಎಗ್ ಬರ್ಗರ್!

ಪ್ರಮಾಣ:1
ಸಿದ್ಧತಾ ಸಮಯ:
15 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 5 ನಿಮಿಷಗಳು

ಸಾಮಾಗ್ರಿಗಳು:
*ಬಾಳೆಹಣ್ಣು - 1 (ಹೋಳುಗಳಂತೆ ತುಂಡುಮಾಡಿಕೊಂಡಿರುವುದು)
*ಕಡಲೆಕಾಳು ಬೆಣ್ಣೆ - 3 ಚಮಚ
*ಹಾಲು - 1 ಕಪ್ (ಸ್ಕಿಮ್ಮ್‌ಡ್ ಮಿಲ್ಕ್)
*ಪ್ರೊಟೀನ್ ಪೌಡರ್ - 1 ಚಮಚ

ಸ್ವಾದಿಷ್ಟ ಬ್ರೇಕ್‌ಫಾಸ್ಟ್‌ಗಾಗಿ ಸೇಮಿಯಾ ಉಪ್ಮಾ ರೆಸಿಪಿ

ಮಾಡುವ ವಿಧಾನ:

1. ಮಿಕ್ಸರ್‌ಗೆ ಸ್ವಲ್ಪ ಹಾಲನ್ನು ಹಾಕಿ ಮತ್ತು ಇದಕ್ಕೆ ಹೋಳುಗಳನ್ನಾಗಿ ಮಾಡಿಕೊಂಡ ಬಾಳೆಹಣ್ಣು ತುಂಡುಗಳನ್ನು ಹಾಕಿ.

2.ಈಗ 2 ಸೆಕುಂಡುಗಳ ಕಾಲ ಮಿಕ್ಸರ್ ಅನ್ನು ತಿರುಗಿಸಿ, ಬಾಳೆಹಣ್ಣು ಮೃದುವಾಗಿ ಹುಡಿಯಾಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

3. ಇನ್ನು ಮಿಕ್ಸರ್‌ಗೆ ಹುರಿದ ಕಡಲೇಕಾಯಿ ಬೀಜ, ಸ್ವಲ್ಪ ಹಾಲು ಮತ್ತು ಐಸ್ ತುಂಡುಗಳನ್ನು ಹಾಕಿ. ಇದೀಗ ಐಸ್ ಕ್ಯೂಬ್‌ಗಳು ಚೆನ್ನಾಗಿ ಶೇಕ್ ಆಗುವಂತೆ ಮಿಕ್ಸರ್ ಬ್ಲೆಂಡ್ ಮಾಡಿ.

4.ಈಗ ಮಿಕ್ಸರ್‌ಗೆ ಪ್ರೋಟೀನ್ ಪೌಡರ್ ಅನ್ನು ಸೇರಿಸಿ. 2 ಸೆಕೆಂಡುಗಳು ಚೆನ್ನಾಗಿ ರುಬ್ಬಿಕೊಳ್ಳಿ . ಜ್ಯೂಸ್ ದಪ್ಪನಾಗಿದ್ದರೆ ಇದಕ್ಕೆ ಸ್ವಲ್ಪ ಹಾಲು ಸೇರಿಸಿ.

ನಿಮ್ಮ ಬಾಳೆಹಣ್ಣು ಮತ್ತು ಹುರಿದ ಕಡಲೇಕಾಯಿ ಬೀಜವನ್ನು ಮಿಕ್ಸರ್‌‌ನಲ್ಲಿ ರುಬ್ಬಿ ಮಾಡಿದ ಬೆಣ್ಣೆ ಜ್ಯೂಸ್ ಸವಿಯಲು ಸಿದ್ಧವಾಗಿದೆ. ಹೆಚ್ಚು ತಂಪು ಬೇಡದಿದ್ದಲ್ಲಿ ಐಸ್ ತುಂಡುಗಳನ್ನು ಹಾಕಬೇಡಿ.

X
Desktop Bottom Promotion