For Quick Alerts
ALLOW NOTIFICATIONS  
For Daily Alerts

ನಿಮ್ಮ ಯಮ್ಮಿ ಬ್ರೇಕ್‌ಫಾಸ್ಟ್‌ಗಾಗಿ ಕಾಯಿಸಿದ ಮೆಂತೆ ಪರೋಟಾ

|

ಭಾರತೀಯರು ಬೆಳಗ್ಗಿನ ಬ್ರೇಕ್‌ಫಾಸ್ಟ್‌ನಲ್ಲಿ ವಿಶೇಷವನ್ನೇ ಬಯಸುತ್ತಾರೆ. ಸ್ವಾದಿಷ್ಟ ಮತ್ತು ರುಚಿಕರ ಆಹಾರವನ್ನು ಬೆಳಗ್ಗಿನ ತಿಂಡಿ ಒಳಗೊಂಡಿದ್ದರೆ ದಿನವಿಡೀ ಚೈತನ್ಯ ನಮ್ಮದಾಗುತ್ತದೆ. ಅದರಲ್ಲೂ ಉತ್ತರ ಭಾರತೀಯ ತಿನಿಸಾದ ಪರೋಟಾ ಹೆಚ್ಚು ಕ್ಯಾಲೋರಿಗಳನ್ನು ಹೊಂದಿದೆ. ಪರಾಟಾವನ್ನು ಎಣ್ಣೆ ಅಥವಾ ತುಪ್ಪದಲ್ಲಿ ಸಾಂಪ್ರದಾಯಿಕವಾಗಿ ಬೇಯಿಸಲಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರುಚಿಯಾದ ಕಡಲೆಹುಡಿ ಮೆಂತೆ ರೋಟಿ

ಇಂದಿನ ಜನರು ಆರೋಗ್ಯಕ್ಕೆ ತುಂಬಾ ಪ್ರಾಮುಖ್ಯವನ್ನು ಕೊಡುವುದರಿಂದ ಆರೋಗ್ಯಪೂರ್ಣ ಬೆಳಗ್ಗಿನ ಉಪಹಾರದ ಆಯ್ಕೆ ಅವರದಾಗಿರುತ್ತದೆ. ಆದ್ದರಿಂದಲೇ ಇಂದಿನ ಲೇಖನದಲ್ಲಿ ಒಂದು ಆರೋಗ್ಯಪೂರ್ಣ ಬ್ರೇಕ್‌ಫಾಸ್ಟ್ ಅನ್ನು ನಿಮಗಾಗಿ ನೀಡುತ್ತಿದ್ದೇವೆ.

Baked Methi Paratha For Breakfast

ಈ ಪರೋಟಾವನ್ನು ಹುರಿಯುವುದಿಲ್ಲ. ಬೇಯಿಸಿ ಇಲ್ಲವೇ ಸುಟ್ಟು ಇದನ್ನು ತಯಾರಿಸಲಾಗುತ್ತದೆ. ಇದನ್ನು ತಯಾರಿಸಲು ಕೋರ್ನ್ ಹಿಟ್ಟನ್ನು ಬಳಸಲಾಗುತ್ತದೆ. ಮೆಂತೆ ಸೊಪ್ಪು ಆರೋಗ್ಯಪೂರ್ಣವಾಗಿರುತ್ತದೆ. ಇದೊಂದು ಕಡಿಮೆ ಕ್ಯಾಲೋರಿ ಇರುವ ಉಪಹಾರವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬ್ರೇಕ್ ಫಾಸ್ಟ್‌ಗೆ ಬಿಸಿ ಬಿಸಿಯಾದ ದೋಸೆ ರೆಸಿಪಿ

ಪ್ರಮಾಣ: 2 ಜನರಿಗೆ ಸಾಕಾಗುವಷ್ಟು

ಸಿದ್ಧತಾ ಸಮಯ: 30 ನಿಮಿಷಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು
.ಕೋರ್ನ್ ಹಿಟ್ಟು - 1 ಕಪ್
.ಕಡಲೆಹಿಟ್ಟು - 1/2 ಕಪ್
.ಮೆಂತೆ ಸೊಪ್ಪು - 1 ಕಪ್
.ಅಜ್ವೈನ್ ಬೀಜಗಳು - 1 ಚಿಟಿಕೆ
.ಅರಶಿನ - 1 ಚಿಟಿಕೆ
.ಉಪ್ಪು - ರುಚಿಗೆ ತಕ್ಕಷ್ಟು
.ಜೀರಿಗೆ ಹುಡಿ - 1/2 ಸ್ಪೂನ್
.ಹಸಿಮೆಣಸು - 2 (ಕತ್ತರಿಸಿದ್ದು)
.ಎಣ್ಣೆ - 1ಸ್ಪೂನ್

ಮಾಡುವ ವಿಧಾನ
1. ಕೋರ್ನ್ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ನಾದಿಕೊಳ್ಳಿ.

2.6 ಸ್ಪೂನ್‌ನಷ್ಟು ನೀರು ನಿಮಗೆ ಬೇಕು. ಕಡಲೆ ಹಿಟ್ಟು ನಾದಿದ ಹಿಟ್ಟಿಗೆ ಸಾಂದ್ರತೆಯನ್ನು ಒದಗಿಸುತ್ತದೆ.

3.ಇದೀಗ ನಾದಿದ ಹಿಟ್ಟಿಗೆ ಮೆಂತೆ ಸೊಪ್ಪು, ಅರಶಿನ, ಅಜ್ವೈನ್ ಮತ್ತು ಉಪ್ಪು ಹಾಕಿ.

4.ಹಿಟ್ಟನ್ನು ಕೊಂಚ ನಾದಿಕೊಂಡು ಸಮಂಜಸವಾಗಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಯಾವ ನೂಡಲ್ಸ್ ಈ ಇಡಿಯಪ್ಪ ರುಚಿಗೆ ಸಾಟಿಯಲ್ಲ

5.ಪ್ಯಾನ್‌ನಲ್ಲಿ ಒಂದು ಸ್ಪೂನ್‌ನಷ್ಟು ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಹಸಿಮೆಣಸನ್ನು ಹಾಕಿ.

6.ಹಸಿಮೆಣಸಿನ ಮೇಲೆ ಜೀರಿಗೆ ಹುಡಿಯನ್ನು ಉದುರಿಸಿ ಮತ್ತು ಅರ್ಧ ಸೆಕೆಂಡಿನಷ್ಟು ಸಮಯ ಸೌಟಿನಲ್ಲಿ ಮಿಶ್ರ ಮಾಡಿಕೊಳ್ಳಿ.

7.ಈ ಹಸಿಮೆಣಸು ಜೀರಿಗೆ ಮಿಶ್ರಣವನ್ನು ಹಿಟ್ಟಿಗೆ ಸೇರಿಸಿಕೊಳ್ಳಿ ನಂತರ ಮಿಶ್ರ ಮಾಡಿಕೊಳ್ಳಿ.

8.ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ ನಂತರ ಪರೋಟಾ ಆಕಾರದಲ್ಲಿ ಅವುಗಳನ್ನು ಲಟ್ಟಿಸಿಕೊಳ್ಳಿ.

9.ಚಪ್ಪಟೆ ಪ್ಯಾನ್ ಅನ್ನು ಬಿಸಿ ಮಾಡಿಕೊಳ್ಳಿ.

10.ಎಣ್ಣೆ ಅಥವಾ ತುಪ್ಪ ಹಾಕದೇ ಪರೋಟಾವನ್ನು ಕಾಯಿಸಿ.

11.ಪ್ರತೀ ಪರೋಟಾ ಕಾಯಲು 1 ನಿಮಿಷವನ್ನು ತೆಗೆದುಕೊಳ್ಳಬಹುದು.

12.ನೀವು ಹಸಿಮೆಣಸು ಮತ್ತು ಜೀರಿಗೆ ಹುಡಿಯನ್ನು ಹಾಕಿರುವುದರಿಂದ ಪರೋಟಾ ಸುವಾಸನೆಯುಕ್ತವಾಗಿರುತ್ತದೆ.

13.ಉಪ್ಪಿನಕಾಯಿ ಮತ್ತು ಮೊಸರಿನೊಂದಿಗೆ ಕಾಯಿಸಿದ ಮೆಂತೆ ಸೊಪ್ಪಿನ ಪರೋಟಾ ಸವಿಯಿರಿ.

English summary

Baked Methi Paratha For Breakfast

Indians love to have a wholesome breakfast with puri and parathas. But paratha recipes are usually high on calories. Paratha are fried with oil or ghee traditionally. However, nowadays people have become very health conscious.
X
Desktop Bottom Promotion