For Quick Alerts
ALLOW NOTIFICATIONS  
For Daily Alerts

ಮೇಕಿಂಗ್ ಆಫ್ ಅವರೆಕಾಳು ರೊಟ್ಟಿ- ಸ್ಟೆಪ್‌ಬೈಸ್ಟೆಪ್

|

ಇದು ಅವರೆ ಕಾಳು ಸೀಸನ್. ಮಾರುಕಟ್ಟೆಯಲ್ಲಿ, ಕೈಗಾಡಿಗಳಲ್ಲಿ, ರಸ್ತೆಯ ಮೂಲೆಮೂಲೆಗಳಲ್ಲಿ ಗುಡ್ಡೆ ಹಾಕಿದ ಅವರೆ ಕಾಯಿ ಮತ್ತು ಕಾಳುಗಳನ್ನು ನೋಡುವ ಕಾಲ. ಧನುರ್ಮಾಸದ ಆರಂಭದಲ್ಲಿ ಅಂದರೆ ಡಿಸೆಂಬರ್ ತಿಂಗಳಲ್ಲಿ ಅವರೆ ಮಾರುಕಟ್ಟೆಗೆ ಬರಲು ಶುರುವಾಗತ್ತೆ, ಫಾರ್ ಯುವರ್ ಇನ್ ಫಾರ್ ಮೇಷನ್.

ಇವರು ಅವರು ಎಲ್ಲರೂ ಈಗಾಗಲೇ ಅವರೆಗೆ ಮನಸೋಲುತ್ತಿದ್ದಾರೆ. ಮನೆಯಲ್ಲೂ ಅವರೆಕಾಳು ಉಪ್ಪಿಟ್ಟು, ನೆಂಟರ ಮನೆಯನ್ನೂ ಅದೇ ಉಪ್ಪಿಟ್ಟು, ಅಪ್ಪಿತಪ್ಪಿ ಕೆಲವು ಹೋಟೆಲುಗಳಲ್ಲೂ ಉಪ್ಪಿಟ್ಟಿಗೆ ಅವರೆಕಾಳು.

ಬೆಂಗಳೂರಿನ ಸಜ್ಜನ್ ರಾವ್ ಸರ್ಕಲ್ಲಿಗೆ ಹೋದರೆ ಅಲ್ಲಿ ಅವರೇ ಕಾಳಿನದ್ದೇ ದರ್ಬಾರು. ಅದೇನು ತಿಂಡಿ, ಅದೇನು ಜನ, ಅದೇನು ಹಬ್ಬದ ಸಂಭ್ರಮ, ಅಬ್ಬಬ್ಬಾ. ಬೆಂಗಳೂರಿಗರ ಬಾಯಿರುಚಿಗೆ ಅವರೆ ಕಾಳು ರೊಟ್ಟಿ ಹಾಕಾ!

ಉಪ್ಪಿಟ್ಟು ಮಾಡಿದಷ್ಟು ಈಜಿ ಆಗಿ ರೊಟ್ಟಿ ಮಾಡಲಾಗದು. ತಟ್ಟುವುದಕ್ಕೆ ತಾಳ್ಮೆ ಬೇಕು. ಜಾಣ್ಮೆಯೂ ಬೇಕು. ಈ ಸೀಸನ್ನಿನ ಮೊದಲ ಅವರೆ ಕಾಳು ತಿಂಡಿಯನ್ನು ಬೋಲ್ಢ್ ಸ್ಕೈ ಈ ಮೂಲಕ ಸಾದರಪಡಿಸುತ್ತಿದೆ. ಇದು ಅಕ್ಕಿ ಹಿಟ್ಟು ಬಳಸಿ ಮಾಡುವ ಅವರೆ ಕಾಳು ರೊಟ್ಟಿ, ಕಣಮ್ಮೋ..

ಅಕ್ಕಿ ಹಿಟ್ಟಿನ ಅವರೆ ಕಾಳು ರೊಟ್ಟಿ ಮಾಡುವ ವಿಧಾನವನ್ನು ಸ್ಲೈಡ್ ಶೋಗಳಲ್ಲಿ ಬಿಂಬಿಸಲಾಗಿದೆ, ಸ್ಟೆಪ್ ವೈ ಸ್ಟೆಪ್. ಓದಿ ಕಲಿ, ಮಾಡಿ ತಿಳಿ.

ಬೇಕಾಗುವ ಸಾಮಾಗ್ರಿಗಳು

ಒಂದು ಕಪ್ ಅವರೆ ಕಾಳು
ಹಸಿ ಮೆಣಸಿನಕಾಯಿ 2 (ಚಿಕ್ಕದಾಗಿ ಕತ್ತರಿಸಿದ್ದು)
ಒಂದು ಪಾವು ಅಕ್ಕಿ ಹಿಟ್ಟು
1 ಚಮಚ ಜೀರಿಗೆ
1ಚಮಚ ಕಡಲೆ ಬೇಳೆ
ಚಿಟಿಕೆಯಷ್ಟು ಇಂಗು
ಅರ್ಧ ಕಪ್ ತೆಂಗಿನ ತುರಿ
ಸ್ವಲ್ಪ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

ಅವರೆಕಾಳಿನ ರೊಟ್ಟಿ

ಅವರೆಕಾಳಿನ ರೊಟ್ಟಿ

* 2 ಕಪ್ ನೀರಿಗೆ ಅವರೆಕಾಳನ್ನು ಚೆನ್ನಾಗಿ ಬೇಯಿಸಿಕೊಳ್ಳಿ, ಎರಡು ಗ್ಲಾಸ್ ನೀರು ಒಂದು ಗ್ಲಾಸ್ ಆಗುವಷ್ಟು ಹೊತ್ತು ಕುದಿಸಿ.

* ಗ್ಯಾಸ್ ಮೇಲಿರುವಂತೆಯೇ ಅದೇ ನೀರಿಗೆ ಮೊದಲು ಸ್ವಲ್ಪ ಇಂಗು ಹಾಕಬೇಕು.

ಅವರೆಕಾಳಿನ ರೊಟ್ಟಿ

ಅವರೆಕಾಳಿನ ರೊಟ್ಟಿ

* ನಂತರ ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಕೊನೆಗೆ ಅಕ್ಕಿ ಹಿಟ್ಟನ್ನು ಹಾಕಿ ಸೌಟ್ ನಿಂದ ಚೆನ್ನಾಗಿ ಆಡಿಸಿ ಉರಿಯಿಂದ ಇಳಿಸಿ.

* ನಂತರ ಇದರಿಂದ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ಳಿ.

ಅವರೆ ಕಾಳಿನ ರೊಟ್ಟಿ

ಅವರೆ ಕಾಳಿನ ರೊಟ್ಟಿ

ಆ ಉಂಡೆಗಳನ್ನು ಒಂದು ಪ್ಲಾಸ್ಟಿಕ್ ಮೇಲೆ ಹಾಕಿ ರೊಟ್ಟಿಗೆ ತಟ್ಟುವಂತೆ ತಟ್ಟಿ.

ಅವರೆ ಕಾಳಿನ ರೊಟ್ಟಿ

ಅವರೆ ಕಾಳಿನ ರೊಟ್ಟಿ

* ನಂತರ ತವಾವನ್ನು ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಸವರಿ ಅದರಲ್ಲಿ ರೊಟ್ಟಿಗೆ ತಟ್ಟಿದ ಮಿಶ್ರಣ ಹಾಕಿ.

ಅವರೆ ಕಾಳಿನ ರೊಟ್ಟಿ

ಅವರೆ ಕಾಳಿನ ರೊಟ್ಟಿ

ರೊಟ್ಟಿಯ 2 ಬದಿ ಸ್ವಲ್ಪ ಗರಿಗರಿಯಾದ ಮೇಲೆ ತೆಗೆಯಿರಿ. ಈ ಅವರೆ ಕಾಳು ರೊಟ್ಟಿಯನ್ನು ಚಟ್ನಿ ಜೊತೆ ತಿಂದರೆ ಸೂಪರ್ ಅಗಿರುತ್ತದೆ.

English summary

Averekalu Roti Recipe | Variety Of Roti Recipe | ಅವರೆ ಕಾಳಿನ ರೊಟ್ಟಿ ರೆಸಿಪಿ | ಅನೇಕ ಬಗೆಯ ರೊಟ್ಟಿಯ ರೆಸಿಪಿ

Averekalu recipe well known in South India, that in karnataka this recipe is very famous. These is a season vegetable. So this is the best season to averekalu recipes. So here i have given averekalu roti recipe.
X
Desktop Bottom Promotion