For Quick Alerts
ALLOW NOTIFICATIONS  
For Daily Alerts

ಆಲೂ ಬ್ರೆಡ್ ಟೋಸ್ಟ್

|

ಹಲವರು ಬೆಳಗಿನ ಉಪಹಾರಕ್ಕೆ ಬ್ರೆಡ್ ಟೋಸ್ಟ್ ತಿನ್ನಲು ಇಷ್ಟಪಡುತ್ತಾರೆ. ಬ್ರೆಡ್ ಬಳಸಿ ಹಲವು ರೀತಿಯ ತಿಂಡಿಗಳನ್ನು ಮಾಡಬಹುದು. ಅದರಲ್ಲಿ ಹೆಚ್ಚು ಜನ ಮಾಡುವುದು ಬ್ರೆಡ್ ಟೋಸ್ಟ್, ಸ್ಯಾಂಡ್ ವಿಚ್ ಮತ್ತು ಫ್ರೆಂಚ್ ಟೋಸ್ಟ್.
ಸಸ್ಯಾಹಾರಿಗಳು ಹೆಚ್ಚಾಗಿ ಸರಳವಾದ ವೆಜಿಟೆಬಲ್ ಸ್ಯಾಂಡ್ ವಿಚ್, ಬ್ರೆಡ್ ಕಟ್ಲೆಟ್ ಗಳನ್ನು ಮಾಡುತ್ತಾರೆ. ಇದರ ಜೊತೆಗೆ ಸುಲಭವಾಗಿ ಮಾಡಬಹುದಾದ ಮತ್ತೊಂದು ತಿಂಡಿಯೆಂದರೆ ಆಲೂ ಬ್ರೆಡ್ ಟೋಸ್ಟ್. ಇದನ್ನು ಮಾಡಲು ಟೊಸ್ಟರ್ ಸಹ ಬೇಕಾಗಿಲ್ಲ ದೋಸೆ ಮಾಡುವ ಹೆಂಚಿನ ಮೇಲೆ ತುಪ್ಪ ಬಳಸಿ ಮಾಡಿ ಈ ಹೊಸ ರುಚಿಯನ್ನು ಮಾಡಿ ಸವಿಯಬಹುದು.

Aloo Bread Toast: Breakfast Recipe

ಆಲೂ ಬ್ರೆಡ್ ಟೋಸ್ಟ್ ಹೀಗೆ ಮಾಡಬಹುದು.

ಬೇಕಾಗುವ ಸಾಮಗ್ರಿಗಳು
1. ಬ್ರೆಡ್ ಸ್ಲೈಸ್ ಗಳು- 8
2. ಆಲೂಗಡ್ಡೆ- 5-6 (ಬೇಯಿಸಿ ಸಿಪ್ಪೆ ಬಿಡಿಸಿಟ್ಟುಕೊಳ್ಳಿ)
3. ಹಸಿಮೆಣಸಿನಕಾಯಿ- 3(ಕತ್ತರಿಸಿಟ್ಟುಕೊಳ್ಳಿ)
4. ಶುಂಠಿ- 1/2 ಇಂಚು (ತುರಿದುಕೊಳ್ಳಿ)
5. ಬಟಾಣಿ- ಒಂದು ಹಿಡಿ
6. ಕ್ಯಾರೆಟ್ಸ್- 2 (ತುರಿದುಕೊಳ್ಳಿ)
7. ಕ್ಯಾಪ್ಸಿಕಂ- 1 (ಕತ್ತರಿಸಿಕೊಳ್ಳಿ)
8. ಅರಿಶಿನ ಪುಡಿ- 1 1/2 ಟೀಚಮಚ
9. ಅಚ್ಚ ಖಾರದ ಪುಡಿ- 2 ಟೀಚಮಚ
10. ಚಾಟ್ ಮಸಾಲ- ಒಂದು ಚಿಟಿಕೆ
11. ಗರಂ ಮಸಾಲ- ಒಂದು ಚಿಟಿಕೆ
12. ಉಪ್ಪು- ರುಚಿಗೆ ತಕ್ಕಷ್ಟು
13. ಎಣ್ಣೆ- 1 ಟೀಚಮಚ
14. ತುಪ್ಪ- 1/2 ಕಪ್

ಮಾಡುವ ವಿಧಾನ
1. 2 ಟೀಚಮಚ ಎಣ್ಣೆಯನ್ನು ಬಾಣಲಿಯಲ್ಲಿ ಕಾಯಿಸಿಕೊಳ್ಳಿ. ಅದಕ್ಕೆ ಈರುಳ್ಳಿ ಹಾಕಿ ಸುಮಾರು 1 ನಿಮಿಷ ಹುರಿಯಿರಿ.
2. ಇದಕ್ಕೆ ಕ್ಯಾರೆಟ್, ಹಸಿಮೆಣಸಿನಕಾಯಿ, ದೊಣ್ಣೆ ಮೆಣಸಿನಕಾಯಿ ಮತ್ತು ಶುಂಠಿ ಬೆರಸಿ ಮಿಶ್ರ ಮಾಡಿ 6-7 ನಿಮಿಷಗಳವರೆಗೆ ಬೇಯಿಸಿ.
3. ಇದಕ್ಕೆ ಉಪ್ಪು, ಬಟಾಣಿ, ಅರಿಶಿನ ಹಾಕಿ ಕಲಸಿ. ಅದಕ್ಕೆ ಅಚ್ಚ ಖಾರದ ಪುಡಿ, ಚಾಟ್ ಮಸಾಲ ಮತ್ತು ಗರಂ ಮಸಾಲ ಹಾಕಿ.
4. ಇದಕ್ಕೆ ಪುಡಿಮಾಡಿಟ್ಟುಕೊಂಡ ಆಲೂಗಡ್ಡೆ ಹಾಕಿ ಕಲಸಿ. ಎಲ್ಲವನ್ನು ಚೆನ್ನಾಗಿ ಪಲ್ಯದ ಹಾಗೆ ಕಲಸಿದ ಮೇಲೆ ಒಲೆಯಿಂದ ಇಳಿಸಿ.
5. ಈಗ ಹೆಂಚನ್ನು ಕಾಯಿಸಿ. ಅದರ ಮೇಲೆ ಬ್ರೆಡ್ ತುಂಡುಗಳನ್ನು ಮಾಡಿಟ್ಟುಕೊಂಡ ಪಲ್ಯದೊಂದಿಗೆ ಇಡಿ. ಅದರ ಮೇಲೆ ಮತ್ತೊಂದು ಬ್ರೆಡ್ ತುಂಡನ್ನು ಮುಚ್ಚಿ.
6. ತುಪ್ಪ ಅಥವ ಬೆಣ್ಣೆಯನ್ನು ಹಾಕಿ ಈ ತುಂಡುಗಳನ್ನು ಕಂದು ಬಣ್ಣಕ್ಕೆ ತಿರುಗುವವರೆಗೆ ಸುಡಿ. ನಂತರ ತಟ್ಟೆಯಲ್ಲಿ ತೆಗೆದಿಡಿ.

ಸರಳವಾದ ಮತ್ತು ಸುಲಭವಾದ ಆಲೂ ಬ್ರೆಡ್ ಟೋಸ್ಟ್ ಬೆಳಗಿನ ಉಪಹಾರಕ್ಕೆ ರೆಡಿ.

English summary

Aloo Bread Toast: Breakfast Recipe

There are many people who love to have bread for breakfast. There are ample recipes that you can prepare suing bread as the chief ingredient. However, most common bread recipes are bread toast, sandwich and French toast.
Story first published: Thursday, December 5, 2013, 14:21 [IST]
X
Desktop Bottom Promotion