ಹೂಕೋಸಿನ ಪರೋಟ, ಚಪಾತಿ

ಹೂಕೋಸು ಅಥವಾ ಕಾಲಿಫ್ಲವರಿನಿಂದ ತಯಾರಿಸಿದ ಪರೋಟ ಅಥವಾ ಚಪಾತಿ ತಿಂಡಿಗೆ ತಿಂಡಿ ಊಟಕ್ಕೆ ಊಟ, ಆಫೀಸಿಗೆ ಡಬ್ಬಿ, ಪಿಕ್ ನಿಕ್ಕಿಗೆ, ಪಾಟ್ ಲಕ್ಕಿಗೆ, ಟ್ರಾಮ್, ರೈಲು, ಬಸ್ಸು ಪ್ರಯಾಣಕ್ಕೆ ಸಂಗಾತಿ.

* ಕೌಸಲ್ಯ ತ್ರಿವೇದಿ; ಟೊಯೋಟ, ಜಪಾನ್

ಸಾಮಗ್ರಿಗಳು :

ಒಂದು ಹೊಕೋಸು
ಒಂದು ಈರುಳ್ಳಿ
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು
ಒಂದು ಚಮಚ ಉಪ್ಪು
ಒಂದೂವರೆ ಚಮಚ ಗರಮ್ ಮಸಾಲೆ ಪುಡಿ
ಒಂದು ಚಮಚ ದನಿಯಾಪುಡಿ
ಎರಡು ಚಮಚ ಜೀರಿಗೆ
ಒಂದು ಚಮಚ ಸಕ್ಕರೆ
ಎರಡು ಚಮಚ ಬೆಣ್ಣೆ
ಒಂದು ಚಮಚ ಕೆಂಪು ಮೆಣಸಿನ ಪುಡಿ

ತಯಾರಿಸುವ ವಿಧಾನ :

ಸಣ್ಣ ಹುಳ, ಕೀಟಗಳ ತವರುಮನೆ ಹೂಕೋಸು. ಬಗೆಬಗೆಯಾದ ಕೋಸಿನ ತಳಿಗಳು ಬಂದಿವೆ. ಆದರೆ ಎಲ್ಲದರಲ್ಲೂ ಹುಳದ ಹಾವಳಿ ಇದ್ದೇಇದೆ. ಈ ತರಕಾರಿಯನ್ನು ಕಂಡಾಪಟ್ಟೆ ತೊಳೆದು ಆಮೇಲೆ ಉಪ್ಪುನೀರಿನಲ್ಲಿ ಒಂದು ಗಂಟೆ ನೆನೆಸಿರಿ. ನೀರಿಗೆ ಚೂರು ಪೊಟ್ಯಾಸಿಯಂ ಪರಮಾಂಗನೇಟ್ ಹಾಕಿದರೆ ಕ್ರಿಮಿಕೀಟ, ಬ್ಯಾಕ್ಟೀರಿಯಾ ನಾಶವಾಗುತ್ತದೆ. ಯಾವುದೇ ತರಕಾರಿಯಾಗಲೀ ಪೊಟ್ಯಾಸಿಯಂ ಬಳಸಿ ತೊಳೆದರೆ ಕ್ಷೇಮ. ಕೋಸನ್ನು ಶುದ್ದ ಪಡಿಸಿದನಂತರ ತುರಿಯೋ ಮಣೆಯಲ್ಲಿ ಸಣ್ಣಗೆ ತುರಿದುಕೊಳ್ಳಿ.

ತವದ ಮೇಲೆ ಬೆಣ್ಣೆ ಬಿಸಿ ಮಾಡಿಕೊಂಡು ಅದರಲ್ಲಿ ಜೀರಿಗೆ ಹುರಿಯಬೇಕು. ಈ ಹೊತ್ತಿಗೆ ಸರಿಯಾಗಿ ಮೇಲೆ ಹೇಳಿದ ಇತರೆ ಪುಡಿಗಳನ್ನು, ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಒಂದು ನಿಮಿಷ ಅತ್ತಿತ್ತ ಆಡಿಸಿ. ತವ ಕೆಳಗಿಳಿಸಿ ಕೊತ್ತಂಬರಿ ಸೊಪ್ಪನ್ನು ಬೆರೆಸಿರಿ. ಇದನ್ನು ತುರಿದ ಹೂಕೋಸಿಗೆ ಬೆರೆಸಿ, ಉಪ್ಪು ಹಾಕಿ ಚೆನ್ನಾಗಿ ಕಲಸಿರಿ. ಪರೋಟ ಅಥವಾ ಚಪಾತಿ ಹಿಟ್ಟನ್ನು ನಾದಿಕೊಂಡು ಕೊನೆಗೆ ಈ ಕೋಸಿನ ಪಲ್ಯವನ್ನು ಎರಡು ಚಮಚದಷ್ಟು ತುಂಬಿ ನಿಧಾನವಾಗಿ ಲಟ್ಟಿಸಿ. ಹಂಚಿನ ಮೇಲೆ ಹರವಿ ತಿರುಗಾಮುರುಗಾ ಬೇಯಿಸಿರಿ. ಈ ಅಡುಗೆ ತಿಂಡಿಗೆ ತಿಂಡಿ ಊಟಕ್ಕೆ ಊಟ, ಆಫೀಸಿಗೆ ಡಬ್ಬಿ, ಪಿಕ್ ನಿಕ್ಕಿಗೆ, ಪಾಟ್ ಲಕ್ಕಿಗೆ, ಟ್ರಾಮ್, ರೈಲು, ಬಸ್ಸು ಪ್ರಯಾಣಕ್ಕೆ ಸಂಗಾತಿ.

Read more about: ಬೆಳಗಿನ ತಿಂಡಿ, ಹೂಕೋಸು, ಪರೋಟ, ಚಪಾತಿ, ಕಾಲಿಫ್ಲವರ್, ತಿಂಡಿ, ಊಟ, ಕೌಸಲ್ಯ ತ್ರಿವೇದಿ, ಜಪಾನ್, cauliflower paratha, chapati, parota, cauliflower, breakfast, meals, kousalya trivedi, japan
Please Wait while comments are loading...
Subscribe Newsletter