For Quick Alerts
ALLOW NOTIFICATIONS  
For Daily Alerts

ಅಕ್ಕಿ,ತೆಂಗಿನಕಾಯಿ ಅಡೈ

|
Coconut Rice Adai
ಬೇಕಾಗುವ ಸಾಮಗ್ರಿಗಳು

2 ಲೋಟ ಕುಸುಬುಲ ಅಕ್ಕಿ
1 ತೆಂಗಿನಕಾಯಿ
ಸ್ವಲ್ಪ ಹುಣಿಸೇಹಣ್ಣು
10 ಕೆಂಪು ಮೆಣಸಿನಕಾಯಿ
1 ಚಮಚ ಜೀರಿಗೆ
ಕರಿಬೇವಿನ ಸೊಪ್ಪು
ಚಿಟಿಕೆ ಇಂಗು
ರುಚಿಗೆ ಒಪ್ಪುವಷ್ಟು ಉಪ್ಪು
ಒಂದು ಹಿಡಿ ನೆನೆಸಿದ ಕಡಲೇಕಾಳು

ತಯಾರಿಸುವ ವಿಧಾನ

ಕುಸುಬಲ ಅಕ್ಕಿಯನ್ನು ಬಿಸಿ ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಬೇಕು. ನೆನೆದ ಅಕ್ಕಿಯನ್ನು ತೆಂಗಿನಕಾಯಿ ತುರಿ ಮತ್ತು ಇನ್ನಿತರ ಸಾಮಗ್ರಿಗಳೊಂದಿಗೆ ಗಟ್ಟಿಯಾಗಿ ಸಣ್ಣ ರವೆ ಟೈಪ್ ರುಬ್ಬಿಕೊಳ್ಳಬೇಕು. ಇದಕ್ಕೆ ನೆನೆಸಿದ ಕಡಲೇಕಾಳು ಮತ್ತು ಎಣ್ಣೆಯಲ್ಲಿ ಒಗ್ಗರಣೆ ಮಾಡಿದ ಸಾಸಿವೆ ಬೆರೆಸಬೇಕು.

ಬಾಳೆಎಲೆ ಅಥವಾ ಪ್ಲಾಸ್ಟಿಕ್ ಹಾಳೆಗೆ ಎಣ್ಣೆ ಸವರಿ, ದಪ್ಪ ರೊಟ್ಟಿಯಂತೆ ಒಂದು ಉಂಡೆ ಹಿಟ್ಟನ್ನು ತಟ್ಟಿರಿ. ನಾನ್ ಸ್ಟಿಕ್ ತವದ ಮೇಲೆ ಚೂರು ಎಣ್ಣೆ ಸವರಿ ಅಡೈಯನ್ನು ಬೇಯಿಸಿರಿ. ಅಡೈ ಮಧ್ಯದಲ್ಲಿ ಎರಡು ಅಥವಾ ಮೂರು ತೂತೂಗಳನ್ನು ಮಾಡಿದರೆ ಬೇಯುವ ಪ್ರಕ್ರಿಯೆ ಹದವಾಗತ್ತೆ. ಈ ತಿಂಡಿಗೆ ಚಟ್ನಿ ಅಥವಾ ಯಾವುದೋ ಒಂದು ಗೊಜ್ಜು ತುಂಬಾ ಅಗತ್ಯ.

Story first published: Monday, October 12, 2009, 13:21 [IST]
X
Desktop Bottom Promotion