For Quick Alerts
ALLOW NOTIFICATIONS  
For Daily Alerts

ಸಾಯಂಕಾಲದ ತಿಂಡಿ : ಗೊಜ್ಜವಲಕ್ಕಿ

By Super
|
Gojjavalakki
ಬೇಕಾಗುವ ಸಾಮಾನು:

ಒಂದು ಪಾವು ದಪ್ಪ ಅವಲಕ್ಕಿ
ಒಂದು ನೆಲ್ಲಿಕಾಯಿಯಷ್ಟು ಹುಣಸೇ ಹಣ್ಣು
ಒಂದು ಟೀ ಸ್ಪೂನ್‌ ಉಪ್ಪು
ಒಂದು ಟೀ ಸ್ಪೂನ್‌ ಮೆಣಸಿನ ಪುಡಿ
ಒಂದು ಬೊಗಸೆಯಷ್ಟು ತೆಂಗಿನ ಕಾಯಿ ತುರಿ
ನಿಂಬೆ ಹಣ್ಣಿನಷ್ಟು ಬೆಲ್ಲ

ಒಂದೆರಡು ಒಣ ಮೆಣಸಿನಕಾಯಿ, 2 ಚಿಟಕಿ ಸಾಸಿವೆ, 2 ಚಮಚ ಕಡಲೇಬೇಳೆ, ಒಂದು ಚಮಚ ಉದ್ದಿನ ಬೇಳೆ, 4 ಚಮಚ ಎಣ್ಣೆ - ಇವಿಷ್ಟೂ ಒಗ್ಗರಣೆಗೆ.

ಮಾಡುವ ವಿಧಾನ:

ದಪ್ಪ ಅವಲಕ್ಕಿಯನ್ನು ಕುಟ್ಟಿ ರವೆಯಂತೆ ಮಾಡಿಟ್ಟುಕೊಳ್ಳಬೇಕು. ಹುಣಸೇ ಹಣ್ಣನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸಿ, ಹುಣಸೇ ನೀರನ್ನು ಮಾತ್ರ ತೆಗೆದಿಟ್ಟುಕೊಳ್ಳಿ. ಈ ಹುಳಿ ನೀರಿಗೆ ಬೆಲ್ಲ, ಉಪ್ಪು, ಮೆಣಸಿನ ಪುಡಿ ಹಾಕಿ ಬೆರೆಸಿ. ಅವಲಕ್ಕಿ ರವೆ ಮತ್ತು ಈ ಮಿಶ್ರಣವನ್ನು ಚೆನ್ನಾಗಿ ಬೆರೆಸಿ. ಇದು ಇಡ್ಲಿ ಹಿಟ್ಟಿನಷ್ಟು ದಪ್ಪಗಾಗಬೇಕು. ಅಗತ್ಯವಿದ್ದರೆ ಒಂದಿಷ್ಟು ನೀರು ಸೇರಿಸಿಕೊಳ್ಳಬಹುದು. ಈ ಮಿಶ್ರಣವನ್ನು 15 ನಿಮಿಷ ಹಾಗೇ ಇಟ್ಟಿರಿ. ನಂತರ ತೆಂಗಿನ ಕಾಯಿ ತುರಿ ಬೆರೆಸಿ.

ಬಾಣಲೆಯಾಂದರಲ್ಲಿ ಕರಿಬೇವು ಒಗ್ಗರಣೆ ಇಟ್ಟು , ಸಾಸಿವೆ ಸಿಡಿಯುತ್ತಲೇ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಗುಚಿ. ಬಿಸಿ ಬಿಸಿಯಾಗಿದ್ದಾಗ ತಿನ್ನಲು ತುಂಬಾ ರುಚಿ.

English summary

Gojjavalakki : Fast food for break fast | ಗೊಜ್ಜವಲಕ್ಕಿ

Gojjavalakki is a delicious dish liked by all age group. You can prepare it in the morning as breakfast or in the evening with tea of coffee. Here is simple method to prepare Gojjavalakki.
Story first published: Wednesday, March 28, 2012, 15:24 [IST]
X
Desktop Bottom Promotion