For Quick Alerts
ALLOW NOTIFICATIONS  
For Daily Alerts

ನೀವೂ ಪ್ರಯತ್ನಿಸಿ ಗರಿಗರಿಯಾದ 10 ವಿಧದ ದೋಸೆ

|

ದೋಸೆ ದಕ್ಷಿಣ ಭಾರತದ ಜನಪ್ರಿಯ ತಿಂಡಿಯಾಗಿದ್ದು ಭಾರತದಾದ್ಯಂತ ದೋಸೆಯ ಹೆಸರು ಚಿರಪರಿಚಿತವಾಗಿದೆ. ವಿವಿಧ ಪ್ರಕಾರದ ದೋಸೆಯನ್ನು ತಿನ್ನುವ ಬಯಕೆ ನಿಮ್ಮಲ್ಲಿದ್ದರೆ, ನಿಮಗಾಗಿ ಹಲವಾರು ಆಯ್ಕೆಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಅಡುಗೆಯನ್ನು ಇಷ್ಟಪಡುವ ಪ್ರತಿಯೊಬ್ಬರೂ ಕೂಡ ದೋಸೆಯನ್ನು ಬಹಳಷ್ಟು ಇಷ್ಟಪಡುತ್ತಾರೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೆಳಗ್ಗಿನ ಉಪಹಾರಕ್ಕಾಗಿ ಟೇಸ್ಟೀ ಈರುಳ್ಳಿ ದೋಸೆ

ವಿವಿಧ ಪ್ರಕಾರದ ದೋಸೆಯ ರುಚಿ ಕೂಡ ವಿಭಿನ್ನವಾಗಿರುತ್ತದೆ. ಬೇರೆ ಬೇರೆ ಸಾಮಾಗ್ರಿಗಳನ್ನು ಸೇರಿಸುತ್ತಾ, ಮಿಶ್ರಣ ಮಾಡುತ್ತಾ ಬದಲಾಯಿಸುತ್ತಾ 100 ಬಗೆಯ ದೋಸೆಗಳನ್ನು ತಯಾರಿಸಬಹುದೆಂದು ಅಡುಗೆ ನಿಷ್ಣಾತರು ಹೇಳುತ್ತಾರೆ.

ದೊಸೆಯಲ್ಲಿ ವಿವಿಧ ಪ್ರಕಾರದ ಪ್ರಯೋಗಗಳನ್ನು ಮಾಡುವವರನ್ನು ಹುರಿಸದುಂಬಿಸಲೆಂದೇ ಬೋಲ್ಡ್ ಸ್ಕೈ ಇಂದು ವಿಧ ವಿಧದ ದೋಸೆಗಳನ್ನು ನಿಮ್ಮ ಮುಂದಿಡುತ್ತಿದೆ. ಬನ್ನಿ ನೀವೂ ಈ ವಿಧ ವಿಧದ ದೋಸೆಯನ್ನು ಪ್ರಯತ್ನಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗರಿ-ಗರಿಯಾದ ಟೊಮೆಟೊ ದೋಸೆ

ಪ್ಲೇನ್ ದೋಸೆ:

ಪ್ಲೇನ್ ದೋಸೆ:

ಅಕ್ಕಿ ಹಿಟ್ಟಿನಿಂದ ತಯಾರಿಸಲಾದ ಈ ದೋಸೆ ಒಂದು ಸರಳ ಪ್ರಕಾರವಾಗಿದೆ. ಇತರ ದೋಸೆಗಳಿಗೂ ಅಕ್ಕಿ ಹಿಟ್ಟು ಪ್ರಧಾನ. ಬಗೆ ಬಗೆಯ ಚಟ್ನಿಗಳೊಂದಿಗೆ ಈ ಪ್ಲೇನ್ ದೋಸೆಯನ್ನು ನಿಮಗೆ ಸವಿಯಬಹುದು.

ಮಸಾಲಾ ದೋಸೆ:

ಮಸಾಲಾ ದೋಸೆ:

ಇದು ದೋಸೆ ವೆರೈಟಿಗಳಲ್ಲಿ ಹೆಚ್ಚು ಜನಪ್ರಿಯವಾದುದು. ಸ್ಟಫ್ ಮಾಡಿದ ಆಲೂಗಡ್ಡೆ ಇದಕ್ಕೆ ಉತ್ತಮ ಕಾಂಬಿನೇಶನ್. ಚಟ್ನಿ ಹಾಗೂ ಸಾಂಬಾರ್ ಜೊತೆ ಕೂಡ ಈ ದೋಸೆಯನ್ನು ಸೇವಿಸಲು ಇನ್ನಷ್ಟು ರುಚಿಕರವಾಗಿರುತ್ತದೆ. ಕೆಲವು ಹೋಟೆಲ್‌ಗಳು ಮಸಾಲಾ ದೋಸೆ ಯೊಂದಿಗೆ ವಡೆಯನ್ನು ನೀಡುತ್ತಾರೆ.

ಬೆಣ್ಣೆ ದೋಸೆ:

ಬೆಣ್ಣೆ ದೋಸೆ:

ನಿಮ್ಮ ತಟ್ಟೆ ಖಾಲಿಯಾಗುವಂತೆ ಈ ದೋಸೆ ಮಾಡುತ್ತದೆ. ಬೆಣ್ಣೆಯನ್ನು ಕರಗಿಸಿ ಕಾವಲಿ ಮೇಲೆ ಹುಯ್ದು ನಂತರ ದೋಸೆಯನ್ನು ತಯಾರಿಸುತ್ತಾರೆ. ಆದ್ದರಿಂದ ಇದರ ಹೆಸರು ಬೆಣ್ಣೆ ದೋಸೆ ಎಂದಾಗಿದೆ.

ರವಾ ದೋಸೆ:

ರವಾ ದೋಸೆ:

ಉತ್ತರ ಭಾರತದಲ್ಲಿ ಹೆಚ್ಚು ಕಾಣಸಿಗುವ ದೋಸೆ ವೆರೈಟಿ ಆಗಿದೆ ರವಾ ದೋಸೆ. ರವೆಯನ್ನು ಬಳಸಿ ಈ ದೋಸೆ ತಯಾರಿಸುತ್ತಾರೆ. ಇತರ ದೋಸೆಗಳಿಗೆ ಹೋಲಿಸಿದರೆ ರವಾ ದೋಸೆ ರುಚಿ ಅದ್ಭುತವಾಗಿರುತ್ತದೆ.

ಪೇಪರ್ ದೋಸೆ:

ಪೇಪರ್ ದೋಸೆ:

ನಿಮ್ಮ ತಟ್ಟೆಗಿಂತಲೂ ದೊಡ್ಡದು ಹಾಗೂ ನಿಮ್ಮ ಟೇಬಲ್‌ಗಿಂತ ಸಣ್ಣದಾಗಿರುವ ದೋಸೆಯ ರುಚಿಯನ್ನು ನೀವು ಸವಿದಿರುವಿರಾ? ಅದುವೇ ಪೇಪರ್ ದೋಸೆ. ರುಚಿಯಲ್ಲಿ ಅಸಾಧಾರಣವಾಗಿರುವ ಪೇಪರ್ ದೋಸೆ ದೊಡ್ಡದಾಗಿರುತ್ತದೆ ಮತ್ತು ಕ್ರಿಸ್ಪಿಯಾಗಿರುತ್ತದೆ.

ನೀರು ದೋಸೆ:

ನೀರು ದೋಸೆ:

ಕರ್ನಾಟಕದಲ್ಲಿ ಅದರಲ್ಲೂ ತುಳುವರು ಈ ದೋಸೆಯ ಫ್ಯಾನ್ ಎಂದೇ ಹೇಳಬಹುದು. ಹಿಟ್ಟನ್ನು ತುಸು ನೀರಾಗಿ ಕಡೆದು ತೆಳ್ಳಗೆ ಕಾವಲಿಯಲ್ಲಿ ಹುಯ್ದು ಈ ದೋಸೆಯನ್ನು ತಯಾರಿಸುತ್ತಾರೆ.

ಅಮೇರಿಕನ್ ಚೋಪ್ಸಿ ದೋಸೆ:

ಅಮೇರಿಕನ್ ಚೋಪ್ಸಿ ದೋಸೆ:

ವಾವ್! ಹೆಸರೇ ದೋಸೆಗೆ ವಿಶೇಷತೆಯನ್ನು ತಂದುಕೊಟ್ಟಿದೆ! ಭಾರತ, ಅಮೇರಿಕಾ ಹಾಗೂ ಚೀನಾದ ರುಚಿಯನ್ನು ಬಳಸಿ ವಿಭಿನ್ನ ರುಚಿಯ ದೋಸೆ ತಯಾರಿಸುತ್ತಾರೆ. ನೂಡಲ್ಸ್ ಮತ್ತು ಸಾಸ್ ಅನ್ನು ದೋಸೆಗೆ ಸ್ಟಫಿಂಗ್ ಆಗಿ ಬಳಸುತ್ತಾರೆ. ಇದನ್ನು ನೀವು ಖಂಡಿತ ಟ್ರೈ ಮಾಡಲೇಬೇಕು.

ಈರುಳ್ಳಿ ದೋಸೆ:

ಈರುಳ್ಳಿ ದೋಸೆ:

ಈ ದೋಸೆಯನ್ನು ಸುಲಭವಾಗಿ ತಯಾರಿಸಬಹುದು. ಸಾಮಾನ್ಯವಾಗಿ ದೋಸೆ ಹಿಟ್ಟನ್ನು ಹೊಯ್ಯುವಂತೆ ಕಾವಲಿಯಲ್ಲಿ ಹುಯ್ದು ಅದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಮೇಲ್ಭಾಗಕ್ಕೆ ಹಾಕಿ ದೋಸೆಯನ್ನು ಸಿದ್ಧಪಡಿಸುತ್ತಾರೆ.

ಮೊಟ್ಟೆ ದೋಸೆ:

ಮೊಟ್ಟೆ ದೋಸೆ:

ನೀವು ಮಾಂಸಹಾರಿ ದೋಸೆಯನ್ನು ಟ್ರೈ ಮಾಡಬೇಕೆಂದು ಬಯಸಿದ್ದಲ್ಲಿ, ಮೊಟ್ಟೆ ದೋಸೆ ಒಂದು ಒಳ್ಳೆಯ ಆಯ್ಕೆಯಾಗಿದೆ. ಮೊಟ್ಟೆಯನ್ನು ಬೀಟ್ ಮಾಡಿ ದೋಸೆಯ ಹಿಟ್ಟಿನ ಸುತ್ತಲೂ ಹಾಕಿ ಇದನ್ನು ತಯಾರಿಸಿ. ಇದು ನಿಮಗೆ ಹೊಸ ಅನುಭವವಾಗುತ್ತದೆ.

ತರಕಾರಿ ದೋಸೆ:

ತರಕಾರಿ ದೋಸೆ:

ನಿಮಗೆ ಆರೋಗ್ಯ ಮುಖ್ಯವಾಗಿದ್ದರೆ ತರಕಾರಿ ದೋಸೆ ನಿಮ್ಮ ಮೆಚ್ಚಿನದಾಗಿರಲಿ. ತರಕಾರಿಗಳಿಂದ ಪೂರೈಕೆಯಾಗುವ ಎಲ್ಲಾ ನ್ಯೂಟ್ರೀನ್‌ಗಳನ್ನು ಇದು ನಿಮಗೆ ಒದಗಿಸುತ್ತದೆ. ಕ್ಯಾಬೇಜ್, ಮೊಳಕೆ ಬರಿಸಿದ ಧಾನ್ಯಗಳು ಹಾಗೂ ಸ್ಪ್ರಿಂಗ್ ಆನಿಯನ್‌ನಿಂದ ಈ ತರಕಾರಿ ದೋಸೆಯನ್ನು ತಯಾರಿಸಬಹುದು.

English summary

10 Varieties Of Dosa You Must Try

Dosa is the most popular south Indian food item, which is now popular all over India. If you are one among those food lovers who want to try different varieties of dosa, then be happy to know that you have too many options.
X
Desktop Bottom Promotion