For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರ ಆರೋಗ್ಯಕ್ಕೆ 'ಸೀತಾಫಲ ಹಣ್ಣು' ಬಹಳ ಒಳ್ಳೆಯದು...

ಸೀತಾಫಲ ಹಣ್ಣಿನಲ್ಲಿರುವ ಸಮೃದ್ಧ ಪೋಷಕಾ೦ಶಗಳ ಕಾರಣಕ್ಕಾಗಿಯೇ ಈ ಹಣ್ಣುಗಳನ್ನು ಗರ್ಭಿಣಿ ಸ್ತ್ರೀಯರು ಧಾರಾಳವಾಗಿ ಸೇವಿಸಬೇಕು. ಈ ಹಣ್ಣಿನ ಸೇವನೆಯಿ೦ದ ಗರ್ಭಿಣಿ ಸ್ತ್ರೀಯ ಶರೀರಕ್ಕೆ ಅವಶ್ಯವಾಗಿರುವ ಎಲ್ಲಾ ಶಕ್ತಿಯೂ ಪೂರೈಸಲ್ಪಡುತ್ತದೆ.

By Hemanth
|

ಗರ್ಭಧಾರಣೆಯೆನ್ನುವುದು ತುಂಬಾ ಸಂತೋಷ ಹಾಗೂ ಅಗ್ನಿಪರೀಕ್ಷೆಯ ಸಮಯವಾಗಿರುತ್ತದೆ. ಈ ಸಮಯದಲ್ಲಿ ಮಹಿಳೆಯು ತನ್ನ ಹಾಗೂ ಮಗುವಿನ ಬಗ್ಗೆ ಕಾಳಜಿ ವಹಿಸಬೇಕು. ಯಾಕೆಂದರೆ ಗರ್ಭದರಲ್ಲಿರುವ ಮಗು ತಾಯಿಯು ಏನು ತಿನ್ನುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ತಾಯಿ ಪೋಷಕಾಂಶವುಳ್ಳ ಆಹಾರವನ್ನು ತಿಂದರೆ ಮಗುವಿಗೆ ಕೂಡ ಹೆಚ್ಚಿನ ಪೋಷಕಾಂಶಗಳು ಸಿಗುವುದು. ಇಲ್ಲವಾದಲ್ಲಿ ಮಗುವಿನ ಬೆಳವಣಿಗೆಗೆ ತೊಂದರೆಯಾಗುವುದು. ಸೀತಾಫಲ ಹಣ್ಣಿನ ನ೦ಬಲಸಾಧ್ಯವಾದ ಆರೋಗ್ಯವರ್ಧಕ ಗುಣಗಳು

ಗರ್ಭಿಣಿ ಮಹಿಳೆಯರು ಹಣ್ಣುಹಂಪಲು, ಮೊಳಕೆಕಾಲುಗಳನ್ನು ಸೇವಿಸಬೇಕು. ಇದರಿಂದ ದೇಹಕ್ಕೆ ಬೇಕಾಗಿರುವ ಹೆಚ್ಚಿನ ಎಲ್ಲಾ ರೀತಿಯ ಪೋಷಕಾಂಶಗಳು ಲಭ್ಯವಾಗುತ್ತದೆ. ಕೆಲವೊಂದು ಹಣ್ಣುಗಳಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಹಾಗೂ ಖನಿಜಾಂಶಗಳು ಲಭ್ಯವಿದೆ. ಆದರೆ ನಿಯಮಿತವಾಗಿ ಸೀತಾಫಲ ಹಣ್ಣಿನ ಸೇವನೆಯು ಗರ್ಭಿಣಿಯರಿಗೆ ಹೆಚ್ಚಿನ ವಿಟಮಿನ್ ಹಾಗೂ ಪೋಷಕಾಂಶಗಳನ್ನು ನೀಡಲಿದೆ ಎಂದು ಅಧ್ಯಯನಗಳು ಹೇಳಿವೆ. ಇದರ ಬಗ್ಗೆ ಬೋಲ್ಡ್ ಸ್ಕೈ ಸವಿವರವಾಗಿ ನಿಮಗೆ ಹೇಳಿಕೊಡಲಿದೆ....

ವಿಟಮಿನ್ ಸಿ ಯಿಂದ ಸಮೃದ್ಧ

ವಿಟಮಿನ್ ಸಿ ಯಿಂದ ಸಮೃದ್ಧ

ಸೀತಾಫಲದಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿ ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು.

ಗರ್ಭಪಾತದ ಅಪಾಯವನ್ನು ತಡೆಯಲು...

ಗರ್ಭಪಾತದ ಅಪಾಯವನ್ನು ತಡೆಯಲು...

ಸೀತಾಫಲವು ಗರ್ಭದಲ್ಲಿರುವ ಶಿಶುವಿನ ಮೆದುಳು ವಿಕಾಸವಾಗಲು, ನರ ವ್ಯೂಹ ಮತ್ತು ರೋಗ ನಿರೋಧಕ ಶಕ್ತಿಯು ಸುಗಮವಾಗಲು ನೆರವಾಗುತ್ತದೆ. ಇದೆಲ್ಲದ್ದಕ್ಕಿಂತ ಮುಖ್ಯವಾಗಿ ಸೀತಾಫಲವು ಗರ್ಭಪಾತದ ಅಪಾಯವನ್ನು ತಡೆಯುವ ಸಾಮರ್ಥ್ಯವನ್ನು ಸಹ ಹೊಂದಿದೆ.

ತಾಮ್ರದಂಶ ಅಧಿಕ

ತಾಮ್ರದಂಶ ಅಧಿಕ

ಈ ಹಣ್ಣಿನಲ್ಲಿ ಖನಿಜಾಂಶವಾದ ತಾಮ್ರವು ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣದಿಂದಾಗಿ ಇದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಸರಿಯಾಗಿಡಲು ನೆರವಾಗುವುದು. ತಾಮ್ರದ ಕೊರತೆಯಿಂದ ಅಕಾಲಿಕ ಹೆರಿಗೆಯಾಗಬಹುದು. ತಾಮ್ರದ ಕೊರತೆಯಿದ್ದರೆ ಬಿಳಿ ರಕ್ತ ಕಣಗಳು ಕಡಿಮೆಯಾಗಬಹುದು. ಸಾಮಾನ್ಯ ವ್ಯಕ್ತಿಯೊಬ್ಬನಿಗೆ ಪ್ರತೀ ದಿನ 900 ಮಿಲಿ ಗ್ರಾಂನಷ್ಟು ತಾಮ್ರದ ಅವಶ್ಯಕತೆಯಿದೆ. ಅದೇ ಗರ್ಭಿಣಿ ಮಹಿಳೆ ಪ್ರತೀ ದಿನ 1300 ಮಿ.ಗ್ರಾಂನಷ್ಟು ತಾಮ್ರದ ಅವಶ್ಯಕತೆಯಿದೆ.

ವಿಟಮಿನ್ A ನಿ೦ದ ಸ೦ಪನ್ನಗೊ೦ಡಿದೆ

ವಿಟಮಿನ್ A ನಿ೦ದ ಸ೦ಪನ್ನಗೊ೦ಡಿದೆ

ಸೀತಾಫಲಗಳ ಪ್ರಯೋಜನಗಳ ಪೈಕಿ ಮತ್ತೊ೦ದು ಯಾವುದೆ೦ದರೆ ಅವು ವಿಟಮಿನ್ A ಯನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿವೆ. ವಿಟಮಿನ್ A ಯು ಉತ್ತಮ ದೃಷ್ಟಿಗೆ ಹಾಗೂ ಉತ್ತಮವಾದ ಕೇಶರಾಶಿಯ ಹಾಗೂ ತ್ವಚೆಯ ಆರೋಗ್ಯಕ್ಕೆ ಪೂರಕವಾಗಿವೆ.

ಚರ್ಮದ ಸೋಂಕಿಗೆ

ಚರ್ಮದ ಸೋಂಕಿಗೆ

ಚರ್ಮದ ಸೋಂಕುಗಳಾದ ಅಲ್ಸರ್ ಮತ್ತು ಹುಣ್ಣುಗಳನ್ನು ಸೀತಾಫಲದಿಂದ ನಿವಾರಿಸಬಹುದು. ಸೀತಾಫಲದ ಸಿಪ್ಪೆ ತೆಗೆದು ಅದರ ಪೇಸ್ಟ್ ಮಾಡಿಕೊಂಡು ಭಾದಿತ ಜಾಗಕ್ಕೆ ಹಚ್ಚಿಕೊಂಡರೆ ಸಮಸ್ಯೆ ನಿವಾರಣೆಯಾಗುವುದು. ಸೀತಾಫಲವು ಗರ್ಭಿಣಿ ಮಹಿಳೆಯರಿಗೆ ತುಂಬಾ ಲಾಭದಾಯಕ. ಇದನ್ನು ಯಾವ ರೂಪದಲ್ಲಿ ತೆಗೆದುಕೊಂಡರು ಇದು ಆರೋಗ್ಯಕಾರಿ.

English summary

Why Pregnant Women Should have Custard Apple?

Custard apple is one such fruit which is rich in nutrients that prove advantageous for pregnant women especially. This fruits is considered to be very vital for pregnant ladies mainly because of its high nutritional benefits. The vitamins found in custard apple include minerals, vitamins, proteins, fiber, carbohydrates and essential fats.
X
Desktop Bottom Promotion