For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಹೀಗೂ ಸಮಸ್ಯೆ ಕಾಡಬಹುದು-ಭಯಪಡಬೇಡಿ!

ಗರ್ಭಧಾರಣೆ ವೇಳೆ ಚರ್ಮದಲ್ಲಿ ಕಾಂತಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಚರ್ಮದ ಬಣ್ಣ ಮತ್ತು ಕೂದಲಿನ ಬಣ್ಣದಲ್ಲೂ ಬದಲಾವಣೆ ಕಂಡುಬರುತ್ತದೆ.ಕೆಲವೊಮ್ಮೆ ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಕೂದಲು ದಪ್ಪ ಹಾಗೂ ಕಾಂತಿಯುತವಾಗುತ್ತದೆ

By Hemanth
|

ಮಹಿಳೆಯರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಆಗುವಂತಹ ಸಮಯವೆಂದರೆ ಅದು ಗರ್ಭಧಾರಣೆಯ ಸಮಯ. ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಲ್ಲಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡುಬರುತ್ತದೆ. ಕೆಲವೊಂದು ಬದಲಾವಣೆಗಳು ಕಿರಿಕಿರಿ ಉಂಟು ಮಾಡಿದರೂ ಇನ್ನು ಕೆಲವು ಬದಲಾವಣೆಗಳು ಸಂತೋಷವನ್ನು ಉಂಟು ಮಾಡುತ್ತದೆ. ಬೇಡದೇ ಇದ್ದರೂ ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಅನಿವಾರ್ಯವಾಗುತ್ತದೆ. ಗರ್ಭಧಾರಣೆ ವೇಳೆ ಆಗುವಂತಹ ಕೆಲವೊಂದು ಸೌಂದರ್ಯದ ಬದಲಾವಣೆಗಳು ಗರ್ಭಧಾರಣೆಯ ಕೊನೆಯ ತನಕವೂ ಉಳಿಯುತ್ತದೆ.

ದೇಹದಲ್ಲಿ ಹಾರ್ಮೋನು ಮಟ್ಟವು ಶಿಖರದಲ್ಲಿರುವ ಕಾರಣದಿಂದಾಗಿ ಚರ್ಮದ ಮೇಲೂ ಇದರ ಪರಿಣಾಮ ಉಂಟಾಗುತ್ತದೆ. ಗರ್ಭಧಾರಣೆ ವೇಳೆ ಚರ್ಮದಲ್ಲಿ ಕಾಂತಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೆ ಚರ್ಮದ ಬಣ್ಣ ಮತ್ತು ಕೂದಲಿನ ಬಣ್ಣದಲ್ಲೂ ಬದಲಾವಣೆ ಕಂಡುಬರುತ್ತದೆ. ಕೆಲವೊಮ್ಮೆ ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಕೂದಲು ದಪ್ಪ ಹಾಗೂ ಕಾಂತಿಯುತವಾಗುತ್ತದೆ. ಗರ್ಭಧಾರಣೆ ವೇಳೆ ಉಂಟಾಗುವಂತಹ ಕೆಲವು ಸೌಂದರ್ಯದ ಬಲವಾವಣೆಗಳ ಬಗ್ಗೆ ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....

ಚರ್ಮದ ವರ್ಣದ್ರವ್ಯ

ಚರ್ಮದ ವರ್ಣದ್ರವ್ಯ

ಗರ್ಭಧಾರಣೆ ವೇಳೆ ಹೆಚ್ಚಿನ ಎಲ್ಲಾ ಮಹಿಳೆಯರ ಮೂಗು ಮತ್ತು ಕೆನ್ನೆಗಳಲ್ಲಿ ವರ್ಣದ್ರವ್ಯ ಬದಲಾವಣೆ ಕಂಡು ಬರುತ್ತದೆ. ವೈದ್ಯಕೀಯವಾಗಿ ಇದನ್ನು ಮಿಯಾಸ್ಮಾ ಎಂದು ಕರೆಯಲಾಗುತ್ತದೆ. ಚರ್ಮದಲ್ಲಿ ಹೆಚ್ಚಾಗುವ ಈಸ್ಟ್ರೋಜನ್ ಹಾರ್ಮೋನು ಬಿಡುಗಡೆ ಮಾಡುವಂತಹ ಮೆಲನಿನ್ ನಿಂದಾಗಿ ಹೀಗಾಗುತ್ತದೆ.

ಅಪ್ಪಿತಪ್ಪಿಯೂ ಇಂತಹ 7 ವಿಷಯ ಗರ್ಭಿಣಿಯರಿಗೆ ಹೇಳಬೇಡಿ!

ಮೊಡವೆ ಹಾಗೂ ಬೊಕ್ಕೆಗಳು

ಮೊಡವೆ ಹಾಗೂ ಬೊಕ್ಕೆಗಳು

ಗರ್ಭಧಾರಣೆ ವೇಳೆ ಹಾರ್ಮೋನು ಬದಲಾವಣೆಯಿಂಧಾಗಿ ಮುಖದಲ್ಲಿ ಮೊಡವೆಗಳು ಕಂಡುಬರುತ್ತದೆ. ಮುಖವನ್ನು ಹಾಲಿನ ಫೇಸ್ ವಾಶ್ ನಿಂದ ತೊಳೆಯಿರಿ ಮತ್ತು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಬಳಸುವುದರಿಂದ ದೂರ ಉಳಿಯಿರಿ. ಗರ್ಭಧಾರಣೆ ವೇಳೆ ಈ ಬದಲಾವಣೆ ಸಾಮಾನ್ಯವಾಗಿರುವಂತದ್ದಾಗಿದೆ.

ಕಪ್ಪು ಕಲೆಗಳು

ಕಪ್ಪು ಕಲೆಗಳು

ಗರ್ಭಧಾರಣೆಯ ಅಂತಿಮ ಹಂತದಲ್ಲಿ ಕಪ್ಪು ಕಲೆಗಳು ಮೂಡುವುದು ಸಾಮಾನ್ಯವಾಗಿದೆ. ಯಾಕೆಂದರೆ ಈ ಅವಧಿಯಲ್ಲಿ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದೆ ಇರುವ ಕಾರಣ ಇಂತಹ ಸಮಸ್ಯೆಯಾಗುತ್ತದೆ. ಕಣ್ಣಿನ ಕೆಳಗಡೆ ಇರುವ ಕಲೆಗಳನ್ನು ನಿವಾರಣೆ ಮಾಡಲು ಬಟಾಟೆಯ ಕೆಲವು ತುಂಡುಗಳನ್ನು ದಿನಾಲೂ ಹಚ್ಚುತ್ತಾ ಇರಬೇಕು.

ಗರ್ಭಧಾರಣೆ ವೇಳೆ ರಕ್ತಸ್ರಾವವಾದರೆ ಏನರ್ಥ?

ಗಡಸು ಕೈಗಳು

ಗಡಸು ಕೈಗಳು

ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಈ ಸಮಸ್ಯೆ ನಿಮಗೆ ಕಾಣಿಸಿಕೊಳ್ಳಬಹುದು. ಮೃಧುವಾಗಿದ್ದ ಕೈಗಳು ಕೆಂಪು, ಒಣ ಹಾಗೂ ಒಡೆದುಹೋಗಬಹುದು. ರಾತ್ರಿ ವೇಳೆ ಪೆಟ್ರೋಲಿಯಂ ಜೆಲ್ ಬಳಸಿಕೊಂಡು ಮಲಗಿದರೆ ಆಗ ಕೈಗಳು ಮೃಧುವಾಗುವುದು. ರಾಸಾಯನಿಯುಕ್ತ ಕ್ರೀಮ್ ಬಳಸಬೇಡಿ.

ಕಣ್ಣುಗಳು ದೊಡ್ಡದಾಗುವುದು

ಕಣ್ಣುಗಳು ದೊಡ್ಡದಾಗುವುದು

ಮಗು ಬೆಳೆಯುತ್ತಾ ಇರುವಂತೆ ಹೊಟ್ಟೆ ಮತ್ತು ಕಾಲಿನ ರಕ್ತನಾಳಗಳ ಮೇಲೆ ತೂಕ ಬೀಳಲು ಆರಂಭವಾಗುತ್ತದೆ. ಇದರಿಂದ ರಕ್ತಪರಿಚಲನೆ ನಿಧಾನವಾಗಿ ನೀರು ನಿಲ್ಲುವ ಕಾರಣದಿಂದಾಗಿ ಕಣ್ಣುಗಳು ದೊಡ್ಡದಾಗುವುದು ಮತ್ತು ಕಾಲುಗಳು ಊದಿಕೊಳ್ಳುವುದು. ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ ಬೀಳದೆ ಇರಲು ನಿಲ್ಲುವುದನ್ನು ಕಡಿಮೆ ಮಾಡಿಕೊಂಡು ವಿಶ್ರಾಂತಿ ಪಡೆಯಿರಿ. ಇದು ಗರ್ಭಧಾರಣೆ ವೇಳೆ ಆಗುವಂತಹ ಸಾಮಾನ್ಯ ಬದಲಾವಣೆಗಳು.

ಸ್ಟ್ರೆಚ್ ಮಾರ್ಕ್

ಸ್ಟ್ರೆಚ್ ಮಾರ್ಕ್

ಸೊಂಟ ಹಾಗೂ ಹೊಟ್ಟೆಯ ಸ್ನಾಯುಗಳು ಎಳೆಯಲ್ಪಡುವ ಕಾರಣದಿಂದ ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ ಕಂಡುಬರುತ್ತದೆ. ಕಲೆಗಳನ್ನು ನಿವಾರಣೆ ಮಾಡಲು ಮಾರುಕಟ್ಟೆಯಲ್ಲಿ ಸಿಗುವಂತಹ ಕ್ರೀಮ್ ಗಳನ್ನು ಬಳಸುವುದರಿಂದ ಅದು ಮಗುವಿನ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡಬಹುದು. ಇದಕ್ಕೆ ಬದಲು ಆಲಿವ್ ತೈಲವನ್ನು ಬಳಸಿಕೊಂಡು ಮಸಾಜ್ ಮಾಡಿದರೆ ಉತ್ತಮ.

ಸ್ಟ್ರೆಚ್ ಮಾರ್ಕ್ ಸಮಸ್ಯೆಗೆ, ಹರಳೆಣ್ಣೆ-ಆಲೂಗಡ್ಡೆ ಪ್ಯಾಕ್

English summary

Unexpected Beauty Changes When you are In Pregnancy

Pregnancy is a time when there are lot of changes in your body. You become physically and spiritually more attractive as you feel good. However there are some unwanted beauty changes in pregnancy that will last until you are pregnant. The hormones are on a peak at this time in your body that show their impact on your skin also.
X
Desktop Bottom Promotion