For Quick Alerts
ALLOW NOTIFICATIONS  
For Daily Alerts

ಬಂಜೆತನ ಗೆದ್ದು, ಫಲವಂತಿಕೆಯನ್ನು ಪಡೆಯಬಹುದು ಧೈರ್ಯವಾಗಿರಿ

ಮದುವೆಯಾಗಿ ನಾಲ್ಕೈದು ವರ್ಷಗಳಾದರೂ ಮಕ್ಕಳಾಗದಿರುವುದು ದಂಪತಿಯನ್ನು ಕಾಡುವ ಸಮಸ್ಯೆ, ಚಿಂತಿಸದಿರಿ ಇಂತಹ ಬಂಜೆತನ ಸಮಸ್ಯೆಯನ್ನು ಗೆದ್ದು, ಫಲವಂತಿಕೆಯನ್ನು ಪಡೆಯಬಹುದು

By Hemanth
|

ತಿನ್ನುವ ಆಹಾರ, ಕುಡಿಯುವ ನೀರು ಮತ್ತು ಉಸಿರಾಡುವ ಗಾಳಿ ಪ್ರತಿಕ್ಷಣವೂ ವಿಷವಾಗುತ್ತಿರುವ ಇಂದಿನ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ತುಂಬಾ ಸವಾಲಿನ ಕೆಲಸವಾಗಿದೆ. ಆರೋಗ್ಯ ಸರಿಯಾಗಿದ್ದರೂ ಬೇರೆ ವಿಧದ ಸಮಸ್ಯೆಗಳು ಇರುತ್ತದೆ. ಅದರಲ್ಲೂ ಬಂಜೆತನವೆನ್ನುವುದು ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಬಂಜೆತನಕ್ಕೆ ಮಹಿಳೆಯರು ಮಾತ್ರವಲ್ಲ ಪುರುಷರೂ ಕಾರಣ....

ಮದುವೆಯಾಗಿ ನಾಲ್ಕೈದು ವರ್ಷಗಳಾದರೂ ಮಕ್ಕಳಾಗದಿರುವುದು ದಂಪತಿಯನ್ನು ಕಾಡುವ ಸಮಸ್ಯೆ. ಬಂಜೆತನ (ಸಂತಾನಹೀನತೆ ಅಥವಾ ಮಕ್ಕಳಾಗದಿರುವುದನ್ನು ಬಂಜೆತನ ಎಂದು ಕರೆಯಲಾಗುತ್ತದೆ) ನಿವಾರಣೆ ಮಾಡಲು ಹಲವಾರು ರೀತಿಯ ವೈದ್ಯಕೀಯ ಚಿಕಿತ್ಸೆಗಳು ಇದೆ. ಅವುಗಳು ತುಂಬಾ ದುಬಾರಿಯಾಗಿರುವ ಕಾರಣದಿಂದ ಪ್ರತಿಯೊಬ್ಬರ ಕೈಗೆಟುಕದು. ಮಹಿಳೆಯರೇ, 'ಫಲವಂತಿಕೆ ಔಷಧ' ಸೇವಿಸಿ ತಪ್ಪು ಮಾಡಬೇಡಿ!

ಆದರೆ ಫಲವತ್ತತೆಯನ್ನು ಅಥವಾ ಫಲವಂತಿಕೆಯನ್ನು ಪಡೆಯಲು ಕೆಲವೊಂದು ಸರಳ ವಿಧಾನಗಳು ಇವೆ. ಫಲವತ್ತತೆಯನ್ನು ಹೆಚ್ಚಿಸುವುದು ಹೇಗೆ ಎಂದು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು. ಇಲ್ಲಿ ಕೊಟ್ಟಿರುವ ಸಲಹೆಗಳನ್ನು ಪಡೆದು ವೈದ್ಯರೊಂದಿಗೆ ಸಮಾಲೋಚಿಸಿ ಅದನ್ನು ನೀವು ಅನುಸರಿಸಬಹುದು....

ವಿಟಮಿನ್ ಎ ಮಾತ್ರೆ

ವಿಟಮಿನ್ ಎ ಮಾತ್ರೆ

ವೈದ್ಯರೊಂದಿಗೆ ಸಮಾಲೋಚನೆ ನಡೆಸಿ ಗರ್ಭಕಂಠದ ಲೋಳೆಯ ಗುಣಮಟ್ಟವನ್ನು ಹೆಚ್ಚಿಸುವ ಮಾರ್ಗವನ್ನು ತಿಳಿಯಿರಿ. ವಿಟಮಿನ್ ಎ ಮಾತ್ರೆ ತೆಗೆದುಕೊಂಡರೆ ಇದಕ್ಕೆ ಒಳ್ಳೆಯದು.

ಗಿಡಮೂಲಿಕೆ ಚಹಾ

ಗಿಡಮೂಲಿಕೆ ಚಹಾ

ದಿನದಲ್ಲಿ ಎರಡು ಸಲ ಗಿಡಮೂಲಿಕೆ ಚಹಾವನ್ನು ಸೇವಿಸಿ. ನಿಮ್ಮ ಜೀರ್ಣಕ್ರಿಯೆಯು ಸರಿಯಾಗಿದೆಯಾ ಎಂದು ತಿಳಿಯಿರಿ.

ಒತ್ತಡದಿಂದ ಮುಕ್ತರಾಗಿ....

ಒತ್ತಡದಿಂದ ಮುಕ್ತರಾಗಿ....

ಆದಷ್ಟು ಒತ್ತಡದಿಂದ ಮುಕ್ತರಾಗಲು ಪ್ರಯತ್ನಿಸಿ, ಇದಕ್ಕಾಗಿ ಧ್ಯಾನ ಮಾಡಿ ಅಥವಾ ಒತ್ತಡವನ್ನು ದೂರ ಮಾಡಲು ಬೇರೆ ಮಾರ್ಗವನ್ನು ಹುಡುಕಿ.

ವೈದ್ಯರ ಸಲಹೆ......

ವೈದ್ಯರ ಸಲಹೆ......

ವೈದ್ಯರು ಸೂಚಿಸಿದರೆ ಸತುವಿನ ಮಾತ್ರೆಗಳನ್ನು ತೆಗೆದುಕೊಳ್ಳಿ. ಸತು ವೀರ್ಯದ ಸಂಖ್ಯೆಯನ್ನು ಹೆಚ್ಚಿಸುತ್ತದೆ.

ಖರ್ಜೂರ

ಖರ್ಜೂರ

ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇವೆ. ಇದರಲ್ಲಿ ಕಬ್ಬಿಣ, ವಿಟಮಿನ್ ಬಿ, ಎ ಮತ್ತು ಇ ಇದೆ. ಇದು ಗರ್ಭಧಾರಣೆಗೆ ಬೇಕಾಗಿರುವ ಕೆಲವೊಂದು ಪ್ರಮುಖ ಪೋಷಕಾಂಶಗಳನ್ನು ಒದಗಿಸುತ್ತದೆ. ದಿನಲೂ 3-6 ಖರ್ಜೂರಗಳನ್ನು ಸೇವಿಸಿ.

ಗೋಧಿ ಹುಲ್ಲಿನ ಜ್ಯೂಸ್....

ಗೋಧಿ ಹುಲ್ಲಿನ ಜ್ಯೂಸ್....

ಕರುಳನ್ನು ಆವಾಗ ಆವಾಗ ಸ್ವಚ್ಛ ಮಾಡುತ್ತಾ ಇರಬೇಕು. ಇದಕ್ಕಾಗಿ ಗೋಧಿ ಹುಲ್ಲಿನ ಜ್ಯೂಸ್ ಕುಡಿಯಿರಿ....ಅಬ್ಬಾ! ಗೋಧಿ ಹುಲ್ಲು ಇಷ್ಟೊಂದು ಪ್ರಯೋಜನಕಾರಿಯೇ?

ಹಸಿರು ತರಕಾರಿ....

ಹಸಿರು ತರಕಾರಿ....

ಹಸಿರು ತರಕಾರಿ, ಮೊಟ್ಟೆ ಮತ್ತು ಮೀನು ತಿನ್ನುವುದರಿಂದ ಅಂಡೋತ್ಪತ್ತಿಯ ಆವರ್ತನವು ಸರಿಯಾಗಿರುವುದು.

ಹಣ್ಣು, ತರಕಾರಿ ಮತ್ತು ಮೊಳಕೆ ಕಾಳುಗಳು...

ಹಣ್ಣು, ತರಕಾರಿ ಮತ್ತು ಮೊಳಕೆ ಕಾಳುಗಳು...

ಹಣ್ಣು, ತರಕಾರಿ ಮತ್ತು ಮೊಳಕೆ ಕಾಳುಗಳನ್ನು ತಿನ್ನುವುದರಿಂದ ನಿಮ್ಮ ದೇಹದ ಕ್ಷಾರೀಯ ಸಮತೋಲನವನ್ನು ಸರಿಯಾಗಿಟ್ಟುಕೊಳ್ಳಿ.

ದಾಳಿಂಬೆ

ದಾಳಿಂಬೆ

ಸಂತಾನೋತ್ಪತ್ತಿಯ ಭಾಗಗಳಿಗೆ ರಕ್ತದ ಪರಿಚಲನೆಯನ್ನು ಉತ್ತೇಜಿಸಲು ದಾಳಿಂಬೆ ನೆರವಾಗುತ್ತದೆ. ಇದು ಗರ್ಭಪಾತದ ಸಮಸ್ಯೆಯನ್ನು ಕಡಿಮೆಗೊಳಿಸುತ್ತದೆ. ಭ್ರೂಣದ ಬೆಳವಣಿಗೆಗೂ ಇದು ಸಹಕಾರಿ. ಒಂದು ಲೋಟ ದಾಳಿಂಬೆ ಜ್ಯೂಸ್ ನ್ನು ಪ್ರತೀ ದಿನ ಸೇವಿಸಿ. ದಾಳಿಂಬೆ ಹಣ್ಣಿನಲ್ಲಿರುವ 10 ಅದ್ಭುತ ಪ್ರಯೋಜನಗಳು

English summary

Surprising Ways To Up Your Fertility Levels

To conceive, your body should be fertile. In today's world, both the environment and lifestyles have become toxic and remaining fertile has also become a challenge. When you are planning for a baby, make small changes to favour your body so that it can boost the fertility levels and make it easy to conceive. Here are some such simple tips to follow after consulting your doctor.
X
Desktop Bottom Promotion