For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಫೇಸ್-ಕ್ರೀಮ್, ಶಾಂಪೂಗಳಿಂದ ಆದಷ್ಟು ದೂರವಿರಿ!

ಗರ್ಭಿಣಿ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಮತ್ತು ಯಾವುದೇ ಕ್ರೀಮ್ ಅಥವಾ ಲೋಷನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವಾಗ, ವೈದ್ಯರ ಸಲಹೆ ಪಡೆದೇ ಮುಂದುವರಿಯಬೇಕು....

By Manu
|

ಗರ್ಭಧಾರಣೆಯ ಸಂದರ್ಭದಲ್ಲಿ ಮಹಿಳೆಯರ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ. ಇದರಿಂದ ದೇಹದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕಾಗುವುದು ಅತೀ ಅಗತ್ಯ. ಗರ್ಭಿಣಿ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಮತ್ತು ಯಾವುದೇ ಕ್ರೀಮ್ ಅಥವಾ ಲೋಷನ್ ಅನ್ನು ಮುಖಕ್ಕೆ ಹಚ್ಚಿಕೊಳ್ಳುವಾಗ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು.

ಯಾಕೆಂದರೆ ಕೆಲವೊಂದು ಕ್ರೀಮ್ ಗಳಲ್ಲಿ ಇರುವಂತಹ ರಾಸಾಯನಿಕಗಳು ಚರ್ಮಕ್ಕೆ ಹಾನಿ ಉಂಟು ಮಾಡಬಹುದು. ಇದರಿಂದ ಮುಂದೆ ದೊಡ್ಡ ಸಮಸ್ಯೆಯಾಗಬಹುದು. ಕೆಲವೊಂದು ಕ್ರೀಮ್‌ಗಳಲ್ಲಿ ಇರುವಂತಹ ಹಾನಿಕಾರಕ ಪದಾರ್ಥಗಳು ಚರ್ಮದ ಮೂಲಕ ರಕ್ತವನ್ನು ಸೇರಿಕೊಂಡು ದೇಹದ ಕೆಲವೊಂದು ಅಂಗಾಂಗಗಳ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ತಾಯ್ತನದ ಅವಧಿಯಲ್ಲಿ ಆರೋಗ್ಯದ ಆರೈಕೆ ಹೀಗಿರಲಿ

ಕ್ರೀಮ್ ಮತ್ತು ಶಾಂಪೂಗಳಲ್ಲಿ ಇರುಂತಹ ಹಾನಿಕಾರಕ ರಾಸಾಯನಿಕಗಳು ದೇಹದೊಳಗೆ ಸೇರಿಕೊಂಡು ಮಗುವಿನ ಮೇಲೂ ಕೆಟ್ಟ ಪರಿಣಾಮ ಬೀರಬಹುದು. ಯಾವೆಲ್ಲಾ ಉತ್ಪನ್ನಗಳನ್ನು ಗರ್ಭಿಣಿ ಮಹಿಳೆಯರು ಕಡೆಗಣಿಸಬೇಕು ಎನ್ನುವ ಬಗ್ಗೆ ಬೋಲ್ಟ್ ಸ್ಕೈ ಈ ಲೇಖನದ ಮೂಲಕ ನಿಮಗೆ ಹೇಳಿಕೊಡಲಿದೆ... ಮುಂದೆ ಓದಿ...

ದುಬಾರಿ ಸ್ನಾನದ ಉತ್ಪನ್ನಗಳು ಮತ್ತು ತ್ವಚೆಯ ಉತ್ಪನ್ನಗಳು

ದುಬಾರಿ ಸ್ನಾನದ ಉತ್ಪನ್ನಗಳು ಮತ್ತು ತ್ವಚೆಯ ಉತ್ಪನ್ನಗಳು

ಗರ್ಭಿಣಿ ಮಹಿಳೆಯರು ಕೆಲವೊಂದು ದುಬಾರಿ ಸ್ನಾನದ ಉತ್ಪನ್ನಗಳನ್ನು ದೂರವಿರಿಸಬೇಕು. ಇದರಲ್ಲಿ ಹಾನಿಕಾರಕ ರಾಸಾಯನಿಕಗಳು ಇವೆ ಮತ್ತು ಇದನ್ನು ಕಡೆಗಣಿಸಲೇಬೇಕು. ಸ್ವಲ್ಪ ಅಗ್ಗದ ಅಥವಾ ಮಧ್ಯಮ ಬೆಲೆಯ ಸ್ನಾನದ ಉತ್ಪನ್ನಗಳಲ್ಲಿ ಸುರಕ್ಷಿತ ರಾಸಾಯನಿಕಗಳಿರುತ್ತದೆ. ಸುರಕ್ಷಿತ ಸ್ನಾನದ ಸೋಪವನ್ನು ಬಳಸುವುದು ತುಂಬಾ ಒಳ್ಳೆಯದು.

ಚರ್ಮ ಬಿಳಿಯಾಗಿರುವ ಉತ್ಪನ್ನಗಳು

ಚರ್ಮ ಬಿಳಿಯಾಗಿರುವ ಉತ್ಪನ್ನಗಳು

ಇವುಗಳಲ್ಲಿ ಅನೇಕ ರಾಸಾಯನಿಕ ಪದಾರ್ಥಗಳಿದ್ದು, ಇವು ನಿಮ್ಮ ಶಿಶುವನ್ನು ಹಾನಿಗೀಡು ಮಾಡಬಲ್ಲವು. ಅ೦ತಹ ಕ್ರೀಮ್‪‌ಗಳಿಗೆ ಒ೦ದು ಉದಾಹರಣೆಯೆ೦ದರೆ ಹೈಡ್ರೊಕ್ವಿನೋನ್ ಕ್ರೀಮ್‌ಗಳು.ಈ ಕ್ರೀಮ್‌ಗಳನ್ನು ತ್ವಚೆಯ ಕಲೆಗಳ ನಿವಾರಣೆಗೆ ಹಾಗೂ ತನ್ಮೂಲಕ ತ್ವಚೆಯನ್ನು ತಿಳಿಗೊಳಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಗರ್ಭಿಣಿಯರು ಬಳಸಬಾರದ ತ್ವಚೆಗೆ ಸ೦ಬ೦ಧಿಸಿದ ಕ್ರೀಮ್‌ಗಳ ಪೈಕಿ ಇದೂ ಕೂಡಾ ಒ೦ದು.

ಹೇರ್ ರಿಮೂವರ್(ಕೂದಲು ತೆಗೆಯುವ) ರಾಸಾಯನಿಕ

ಹೇರ್ ರಿಮೂವರ್(ಕೂದಲು ತೆಗೆಯುವ) ರಾಸಾಯನಿಕ

ಗರ್ಭಿಣಿ ಮಹಿಳೆಯರು ಪದೇ ಪದೇ ರಾಸಾಯನಿಕಯುಕ್ತ ಹೇರ್ ರಿಮೂವರ್ ಕ್ರೀಮ್‌ನ್ನು ಬಳಸಿಕೊಳ್ಳುವುದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.

ಶಾಂಪೂಗಳು

ಶಾಂಪೂಗಳು

ತಲೆಹೊಟ್ಟು ಮತ್ತು ಫಂಗಲ್ ಅನ್ನು ನಿವಾರಿಸುವಂತಹ ಕೆಲವೊಂದು ಶಾಂಪೂಗಳಲ್ಲಿ ಇರುವಂತಹ ರಾಸಾಯನಿಕವು ಗರ್ಭಿಣಿ ಮಹಿಳೆಯರಿಗೆ ತುಂಬಾ ಹಾನಿಕಾರವಾಗಿರುವ ಕಾರಣದಿಂದಾಗಿ ಇದನ್ನು ಕಡೆಗಣಿಸಿ. ಇದರಲ್ಲಿನ ರಾಸಾಯನಿಕವು ತಲೆಬುರುಡೆಯ ಮೂಲಕ ರಕ್ತವನ್ನು ಸೇರಿಕೊಳ್ಳಬಹುದು.

ಸುಗಂಧದ್ರವ್ಯ ಮತ್ತು ಡಿಯೋ

ಸುಗಂಧದ್ರವ್ಯ ಮತ್ತು ಡಿಯೋ

ಸುಗಂಧದ್ರವ್ಯ ಮತ್ತು ಡಿಯೋದಲ್ಲಿರುವ ಆಲ್ಕೋಹಾಲ್ ಮತ್ತು ರಾಸಾಯನಿಕಗಳು ನಿಮ್ಮ ಚರ್ಮದ ಮೂಲಕವಾಗಿ ರಕ್ತವನ್ನು ಸೇರಿಕೊಳ್ಳುವುದು. ಅತಿಯಾಗಿ ಇದನ್ನು ಬಳಸಿದರೆ ಅದರಿಂದ ಗರ್ಭಿಣಿ ಮಹಿಳೆಯರ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಸನ್ ಸ್ಕ್ರೀನ್

ಸನ್ ಸ್ಕ್ರೀನ್

ಸತುವನ್ನು ಒಳಗೊಂಡಿರುವಂತಹ ಸನ್ ಸ್ಕ್ರೀನ್ ಬಳಸಿದರೆ ಅದು ಗರ್ಭಿಣಿ ಮಹಿಳೆರಿಗೆ ತುಂಬಾ ಸುರಕ್ಷಿತ. ಸನ್ ಸ್ಕ್ರೀನ್ ಗಳಲ್ಲಿ ಇರುವಂತಹ ರಾಸಾಯನಿಕಗಳು ಮಗುವಿಗೆ ಹಾನಿಯುಂಟು ಮಾಡಬಹುದು. ಇಂತಹ ಕ್ರೀಮ್ ಗಳನ್ನು ಗರ್ಭಿಣಿ ಮಹಿಳೆಯರು ದೂರವಿರಿಸಿ. 'ಸನ್‌ ಸ್ಕ್ರೀನ್‌' ಹಚ್ಚಿಕೊಳ್ಳುವ ಸರಿಯಾದ ವಿಧಾನ-ತಪ್ಪದೇ ಅನುಸರಿಸಿ

ಸೆಲಿಸೈಕ್ಲಿಕ್ ಆಮ್ಲವನ್ನೊಳಗೊ೦ಡಿರುವ ಉತ್ಪನ್ನಗಳು

ಸೆಲಿಸೈಕ್ಲಿಕ್ ಆಮ್ಲವನ್ನೊಳಗೊ೦ಡಿರುವ ಉತ್ಪನ್ನಗಳು

ಸಾಮಾನ್ಯವಾಗಿ ತ್ವಚೆಯ ಸೋ೦ಕುಗಳ ಆರೈಕೆಗೆ ಇವುಗಳನ್ನು ಬಳಸಿಕೊಳ್ಳುತ್ತಾರೆ. ಇ೦ತಹ ಉತ್ಪನ್ನಗಳ ಅಥವಾ ಕ್ರೀಮ್‌ಗಳ ವಿಪರೀತ ಬಳಕೆಯು ಶಿಶುವಿನಲ್ಲಿ ಜನನ ಸ೦ಬ೦ಧೀ ಊನಗಳನ್ನು ಉ೦ಟುಮಾಡುವ ಸಾಧ್ಯತೆ ಇದೆ.

English summary

Skin care ingredients to avoid during pregnancy

These chemicals can cause many harmful effects in baby and you need to avoid them during pregnancy. Today, Boldsky will share with you some chemicals skin creams to avoid in pregnancy. Have a look on some of the skin products to avoid during pregnancy.
X
Desktop Bottom Promotion