For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳ- ಇದು ಅಪಾಯದ ಮುನ್ಸೂಚನೆ!

ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ತೂಕ ಹೆಚ್ಚಳವಾದರೆ ಇದು ಹೆರಿಗೆ ಬಳಿಕ ಅಪಾಯವನ್ನು ಉಂಟು ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.

By Hemanth
|

ಗರ್ಭಧಾರಣೆಯೆನ್ನುವುದು ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಏರುಪೇರನ್ನು ಉಂಟು ಮಾಡುತ್ತದೆ. ಆರೋಗ್ಯವಂತ ಮಗುವಿನ ಜನ್ಮ ನೀಡಬೇಕೆಂದರೆ ತಾಯಿಯ ಆರೋಗ್ಯ ಕೂಡ ತುಂಬಾ ಮುಖ್ಯ. ಇದಕ್ಕಾಗಿ ಗರ್ಭಧಾರಣೆಯ ಸಂದರ್ಭದಲ್ಲಿ ಪೌಷ್ಠಿಕಾಂಶಗಳು ಇರುವ ಆಹಾರವನ್ನು ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸುತ್ತಾರೆ. ಪೌಷ್ಠಿಕಾಂಶಗಳಿರುವ ಆಹಾರದಿಂದ ತಾಯಿ ಹಾಗೂ ಮಗುವಿನ ಆರೋಗ್ಯವು ಚೆನ್ನಾಗಿರುತ್ತದೆ.

ಆದರೆ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ತೂಕ ಹೆಚ್ಚಳವಾದರೆ ಇದು ಹೆರಿಗೆ ಬಳಿಕ ಅಪಾಯವನ್ನು ಉಂಟು ಮಾಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ. ಗರ್ಭಿಣಿ ಮಹಿಳೆಯರು ತೂಕ ಹೆಚ್ಚಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ಅತಿಯಾದ ತೂಕವು ಒಳ್ಳೆಯದಲ್ಲ. ಗರ್ಭಧಾರಣೆಯ ಸಮಯದಲ್ಲಿ ತೂಕ ಕಡಿಮೆ ಮಾಡುವ ಸರಳೋಪಾಯಗಳು

Pregnant women

ಸಾಮಾನ್ಯವಾಗಿ ಅತಿಯಾದ ತೂಕದಿಂದ ಅತಿಯಾದ ರಕ್ತದೊತ್ತಡ, ಕೊಲೆಸ್ಟ್ರಾಲ್ ಗಂಟು ನೋವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಆದರೆ ಗರ್ಭಿಣಿಯರಲ್ಲಿ ಅತಿಯಾದ ತೂಕವಿದ್ದರೆ ಅದು ಯಾವ ಸಮಸ್ಯೆಯನ್ನು ಉಂಟು ಮಾಡಬಹುದು ಎಂದು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳುವ.

ಅತಿಯಾದ ತೂಕ ಮತ್ತು ಗರ್ಭಧಾರಣೆ
ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯು ಸುಮಾರು 8-10 ಕೆಜಿಯಷ್ಟು ತೂಕವನ್ನು ಹೆಚ್ಚಿಸಿಕೊಂಡರೆ ಆಗ ಆರೋಗ್ಯಕರ ಹೆರಿಗೆಯಾಗಲು ಸಾದ್ಯವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಮಹಿಳೆಯು ಗರ್ಭಧಾರಣೆಗೆ ಮೊದಲೇ ಅತಿಯಾದ ತೂಕವನ್ನು ಹೊಂದಿದ್ದರೆ ಆಗ ಗರ್ಭಧಾರಣೆ ವೇಳೆ 5-7 ಕೆಜಿ ಮಾತ್ರ ಹೆಚ್ಚಿಸಿಕೊಳ್ಳಬಹುದು. ಗರ್ಭಧಾರಣೆ ವೇಳೆ ಅತಿಯಾಗಿ ತೂಕವನ್ನು ಹೆಚ್ಚಿಸಿಕೊಳ್ಳುವುದು ಹೆರಿಗೆ ವೇಳೆ ತಾಯಿ ಹಾಗೂ ಮಗುವಿಗೆ ಅಪಾಯವನ್ನು ಉಂಟು ಮಾಡಬಹುದು. ಗರ್ಭಿಣಿಯರೇ ಹುಷಾರು! ಭಾರ ಎತ್ತುವ ಕೆಲಸದಿಂದ ದೂರವಿರಿ

ಜಮಾ ನೆಟ್ ವರ್ಕ್ ಜರ್ನಲ್ ನಲ್ಲಿ ಪ್ರಕಟಗೊಂಡಿರುವ ಸರ್ವೇಯೊಂದರ ಪ್ರಕಾರ ಗರ್ಭಧಾರಣೆ ವೇಳೆ ಅತಿಯಾದ ತೂಕವನ್ನು ಹೊಂದಿರುವ ಮಹಿಳೆಯರು ಜನ್ಮ ನೀಡುವ ಮಗುವಿನಲ್ಲಿ ಮಸ್ತಿಷ್ಕ ಪಾರ್ಶ್ವವಾಯುವಿನ ಸಮಸ್ಯೆ ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

ಸರ್ವೇಯ ಪ್ರಕಾರ ಗರ್ಭಧಾರಣೆಯ ಆರಂಭಿಕ ಹಂತದಲ್ಲಿ ಅತಿಯಾದ ತೂಕವನ್ನು ಹೊಂದಿರುವ ಮಹಿಳೆಯರು ಹೆರಿಗೆಯ ಬಳಿಕ ಖಿನ್ನತೆ, ಬೆನ್ನು ನೋವು ಮತ್ತು ಮಾಸಿಕ ಮುಟ್ಟು ದೀರ್ಘವಾಗುವಂತಹ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ. ದೇಹದಲ್ಲಿ ಬೆಳೆದಿರುವ ಅತಿಯಾದ ಕೊಬ್ಬು ಇದಕ್ಕೆ ಕಾರಣವಾಗಿದೆ. ಗರ್ಭಧಾರಣೆ ವೇಳೆ ಅತಿಯಾದ ತೂಕ ಹೊಂದಿರುವುದು ತಾಯಿ ಹಾಗೂ ಮಗುವಿಗೆ ತುಂಬಾ ಅಪಾಯಕಾರಿ ಎಂದು ಸರ್ವೇ ಹೇಳಿದೆ...

English summary

Overweight During Early Pregnancy Cause Health Risks

It is a very well known fact that pregnancy is one of the most sensitive stages of a woman's life. During pregnancy,everything a woman does, impacts the child growing inside her womb to a great extent.
X
Desktop Bottom Promotion